119 ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ

Public TV
2 Min Read
padma awards

ನವದೆಹಲಿ: 2021ನೇ ಸಾಲಿನ ಪದ್ಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 119 ಸಾಧಕರಿಗೆ ಗೌರವ ಸಲ್ಲಿಸಿದ್ದಾರೆ.

7 ಪದ್ಮವಿಭೂಷಣ, 10 ಪದ್ಮಭೂಷಣ ಮತ್ತು 102 ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಗಿದೆ. ಪ್ರಶಸ್ತಿ ಪುರಸ್ಕೃತರಲ್ಲಿ 29 ಮಹಿಳೆಯರು, 16 ಮರಣೋತ್ತರ ಪ್ರಶಸ್ತಿ ಪುರಸ್ಕೃತರು ಸೇರಿದ್ದಾರೆ.

ಕರ್ನಾಟಕದ ಅಕ್ಷರ ಸಂತ ಹರೇಕಳ ಹಾಜಬ್ಬ, ಉದ್ಯಮಿ ವಿಜಯ ಸಂಕೇಶ್ವರ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದನ್ನೂ ಓದಿ:  ಕಿತ್ತಳೆ ಮಾರಿ ಶಾಲೆ ಕಟ್ಟಿದ ಹರೇಕಳ ಹಾಜಬ್ಬರಿಗೆ ಪದ್ಮಶ್ರೀ

ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು, ಭಾರತೀಯ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಮ್‍ಪಾಲ್, ನಿವೃತ್ತ ಏರ್ ಮಾರ್ಷಲ್ ಡಾ. ಪದ್ಮಾ ಬಂಡೋಪಾದ್ಯಾಯ, ಖ್ಯಾತ ಹಿಂದೂಸ್ತಾನಿ ಗಾಯಕ ಪಂಡಿತ್ ಚಾನುಲಾಲ್ ಮಿಶ್ರಾ, ಬಾಲಿವುಡ್ ತಾರೆ ಕಂಗನಾ ರನಾವತ್, ಗಾಯಕ ಅದ್ನಾನ್ ಸಾಮಿ ಸೇರಿದಂತೆ ಹಲವರು ಇಂದು ರಾಷ್ಟ್ರಪತಿಗಳಿಂದ ಪದ್ಮ ಪ್ರಶಸ್ತಿ ಸ್ವೀಕರಿಸಿದರು. ಇದನ್ನೂ ಓದಿ:   ಅಪ್ಪು ಸಮಾಧಿಗೆ ಮಂಡಕ್ಕಿ ಹಾರ ಮಾಡಿಕೊಂಡು ಬಂದ ವೃದ್ಧೆ

ಕೇಂದ್ರದ ಮಾಜಿ ಸಚಿವೆ ದಿ.ಸುಷ್ಮಾ ಸ್ವರಾಜ್, ದಿ.ಜಾರ್ಜ್ ಫರ್ನಾಂಡಿಸ್, ದಿ.ಅರುಣ್ ಜೇಟ್ಲಿ, ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಮರಣೋತ್ತರ ಪದ್ಮ ವಿಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸುಷ್ಮಾ ಅವರ ಪುತ್ರಿ ಬಾನುಶ್ರೀ ಸ್ವರಾಜ್ ಅವರು ರಾಷ್ಟ್ರಪತಿಗಳಿಂದ ಪಶಸ್ತಿ ಸ್ವೀಕರಿಸಿದರು. ಇದನ್ನೂ ಓದಿ:  ಕಳಪೆ ರಸ್ತೆ ನಿರ್ಮಾಣ ಮಾಡುವ ಗುತ್ತಿಗೆದಾರರ ಬಿಲ್ ತಡೆ ಹಿಡಿಯಿರಿ: ಶ್ರೀಮಂತ್ ಪಾಟೀಲ್

ಐಸಿಎಂಆರ್ ಮಾಜಿ ಮುಖ್ಯ ವಿಜ್ಷಾಣಿ ಡಾ ರಾಮನ್ ಗಂಗಾಖೇಡ್ಕರ್, ನಟಿ ಕಂಗನಾ ರಣಾವತ್ ಅವರಿಗೆ ಪದ್ಮಶ್ರೀ, ಗಾಯಕ ಅದ್ನಾನ್ ಸಾಮಿ, ಟೋಕಿಯೊ ಒಲಿಂಪಿಕ್ಸ್ ನಲ್ಲಿ ಮಹಿಳಾ ಹಾಕಿ ತಂಡವನ್ನು ಮುನ್ನೆಡೆಸಿದ್ದ ರಾಣಿ ರಾಂಪಲ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ.

ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಹರೇಕಳ ಹಾಜಬ್ಬರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *