ವಿಕ್ಕಿ, ಕತ್ರಿನಾ ಮದುವೆ ಸಿದ್ಧತೆ ಶುರು

Public TV
1 Min Read
Vicky Kaushal Katrina Kaif

ಮುಂಬೈ: ಬಾಲಿವುಡ್ ಲವ್ ಬರ್ಡ್ಸ್ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ವಧು-ವರ ನೋಡುವ ಸಾಂಪ್ರದಾಯಿಕ ಶಾಸ್ತ್ರವನ್ನು ಮುಗಿಸಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

ಕತ್ರಿನಾ ಸಿನಿಮಾ ಸುದ್ದಿಗಿಂತ ಹೆಚ್ಚು ವಿವಾಹದ ವಿಚಾರದಲ್ಲಿ ಸುದ್ದಿಯಾಗುತ್ತಿರುತ್ತಾರೆ. ಆದರೆ ಈ ವರ್ಷ ಇವರ ಮದುವೆ ಫಿಕ್ಸ್ ಆಗಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಇತ್ತೀಚೆಗೆ ಬಾಲಿವುಡ್ ನಟ ವಿಕ್ಕಿ ಕೌಶಲ್ ಅವರು ವಧು ನೋಡುವ ಶಾಸ್ತ್ರ ಮುಗಿಸಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಅದು ಅಲ್ಲದೇ ಈ ಜೋಡಿಯ ವಿವಾಹ ಇದೇ ವರ್ಷ ಡಿಸೆಂಬರ್ ನಲ್ಲಿ ನಡೆಯಲಿದೆ. ಇದನ್ನೂ ಓದಿ: ಭೋಜನಪ್ರಿಯ ಅಪ್ಪುಗೆ ಯಾವ ಯಾವ ಫುಡ್ ಇಷ್ಟ? ಯಾವೆಲ್ಲ ಹೋಟೆಲ್‍ಗೆ ಹೋಗ್ತಿದ್ರು?

ಇತ್ತೀಚೆಗೆ ರೋಕಾ ಸಮಾರಂಭವನ್ನು(ವಧು-ವರನನ್ನು ನೊಡುವ ಶಾಸ್ತ್ರ) ದೀಪಾವಳಿ ಹಬ್ಬದ ಶುಭ ಮುಹೂರ್ತದಲ್ಲಿ ‘ಏಕ್ ಥಾ ಟೈಗರ್’ ನಿರ್ದೇಶಕ ಕಬೀರ್ ಖಾನ್ ಮನೆಯಲ್ಲಿ ಅದ್ದೂರಿಯಾಗಿ ಜರುಗಿದೆ. ಈ ಶಾಸ್ತ್ರದಲ್ಲಿ ಕತ್ರಿನಾ ತಾಯಿ ಸುಜಾನ್, ತಂಗಿ ಇಸಾಬೆಲ್ಲೆ ಹಾಗೂ ವಿಕ್ಕಿ ತಂದೆ ಶ್ಯಾಮ್, ತಾಯಿ ವೀಣಾ ಕೌಶಲ್ ಸಹೋದರಿ ಸನ್ನಿ ಭಾಗಿಯಾಗಿದ್ದರು.

 

View this post on Instagram

 

A post shared by Katrina Kaif (@katrinakaif)

ಕಬೀರ್ ಜೊತೆಗೆ ಒಳ್ಳೆಯ ಹಿಟ್ ಸಿನಿಮಾಗಳನ್ನು ಕೊಟ್ಟ ಕತ್ರಿನಾ ಅವರ ರೋಕಾ ಸಮಾರಂಭದ ಎಲ್ಲ ಸಿದ್ಧತೆಗಳನ್ನು ಬಹಳ ಉತ್ಸಾಹದಿಂದ ಮಾಡಿರುವ ಇವರು, ಕತ್ರಿನಾ ಅವರನ್ನು ತಮ್ಮ ಸ್ವತಃ ಕುಟುಂಬದರೆಂದು ಭಾವಿಸಿದ್ದಾರೆ. ಇದನ್ನೂ ಓದಿ: ಸೋನಂ, ರಿಯಾ ಫೋಟೋ ಹಾಕಿ ಮಿಸ್ ಮಾಡ್ಕೊಳ್ತಿದ್ದೀನಿ ಅಂದ್ರು ಅನಿಲ್ ಕಪೂರ್

ಅದು ಅಲ್ಲದೇ ಈ ಜೋಡಿ ದೀಪಾವಳಿಯಲ್ಲಿ ತಮ್ಮ ಕುಟುಂಬದ ಜೊತೆಗೆ ತೆಗೆಸಿಕೊಂಡಿದ್ದ ಫೋಟೋಗಳನ್ನು ಇನ್‍ಸ್ಟಾದಲ್ಲಿ ಹಂಚಿಕೊಂಡಿದ್ದು, ಇನ್ನೂ ಇವರಿಬ್ಬರು ಅಧಿಕೃತವಾಗಿ ತಮ್ಮ ಸಂಬಂಧದ ಬಗ್ಗೆ ಏನನ್ನು ಹೇಳಿಲ್ಲ. ಈ ಸಿಹಿ ಸುದ್ದಿ ಯಾವತ್ತು ಹೇಳುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *