ಸಿದ್ದರಾಮಯ್ಯ ದೇವೇಗೌಡರ ಕ್ಷಮೆ ಕೇಳಲಿ, ನಾನು ಕೇಳುತ್ತೇನೆ : ಸಿ.ಟಿ.ರವಿ

Public TV
2 Min Read
SIDDU CT RAVI

ಚಿಕ್ಕಮಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಮಾಜಿ ಪ್ರಧಾನಿ ದೇವೇಗೌಡ, ಪ್ರಧಾನಿ ನರೇಂದ್ರ ಮೋದಿ, ಕೆ.ಎಸ್.ಈಶ್ವರಪ್ಪ, ಬಿ.ಎಸ್.ಯಡಿಯೂರಪ್ಪ, ಸಿಎಂ ಬೊಮ್ಮಾಯಿ ಅವರನ್ನ ಕ್ಷಮೆ ಕೇಳಲಿ. ನಾನೂ ಕೇಳುತ್ತೇನೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ನಾನು ಟ್ವಿಟ್ ಮಾಡಿದ್ದು ತಪ್ಪು ಎನ್ನುವುದಾದರೆ ಸಿದ್ದರಾಮಯ್ಯ ಬಸವರಾಜ ಬೊಮ್ಮಾಯಿ ಅವರು ಹಾಕಿದ ಕಂಬಳಿ ಬಗ್ಗೆ ಮಾತನಾಡಿದ್ದು ತಪ್ಪು ಎಂದು ಅನ್ನಿಸಬೇಕಲ್ಲ. ನನಗೆ ಭಾಷೆ-ಸಂಸ್ಕೃತಿ ಪಾಠ ಹೇಳುವ ಮುಂಚೆ ಪ್ರಧಾನಿ ಬಗ್ಗೆ ಅವರು ಏನು ಹೇಳಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ನೀರಜ್ ಚೋಪ್ರಾ ಸೇರಿದಂತೆ 12 ಕ್ರೀಡಾಪಟುಗಳಿಗೆ ಖೇಲ್ ರತ್ನ ಪ್ರಶಸ್ತಿ

4 ಬಾರಿ ಮುಖ್ಯಮಂತ್ರಿಯಾಗಿ ಆಡಳಿತವನ್ನೇ ಬ್ರಾಂಡ್ ಮಾಡಿ ಗುಜರಾತ್ ಮಾಡೆಲ್ ಎಂದು ಪ್ರಚಾರ ಮಾಡಿ ದೇಶದ ಜನಮನ್ನಣೆ ಗಳಿಸಿ 2 ಬಾರಿ ಪ್ರಧಾನಿಯಾದ ಮೋದಿ ಬಗ್ಗೆ ಅವರು ಏನು ಹೇಳುತ್ತಾರೆ. 14 ದೇಶಗಳು ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನ ಮೋದಿಗೆ ಕೊಟ್ಟಿದ್ದಾರೆ. ಸಿದ್ದರಾಮಯ್ಯಾಗೆ ಕೊಟ್ಟಿದ್ದಾರಾ? ಕರ್ನಾಟಕದಿಂದ ಹೊರಹೋದ್ರೆ ಸಿದ್ದರಾಮಯ್ಯನವರನ್ನ ಗುರುತಿಸುವವರು ಯಾರು? ಆದರೆ ಜಗತ್ತಿನ ಬಹುತೇಕ ದೇಶಗಳಲ್ಲಿ ಮೋದಿಯವರು ಹೋದರೆ ಮೋದಿ… ಮೋದಿ… ಎಂದು ಸಂತೋಷದಿಂದ ಸ್ವಾಗತಿಸ್ತಾರೆ. ಅಂತಹಾ ಪ್ರಧಾನಮಂತ್ರಿ ಬಗ್ಗೆ ಹೆಬ್ಬೆಟ್ಟು ಎನ್ನುವ ಅವರದ್ದು ಸಂಸ್ಕೃತಿನಾ ಎಂದು ಪ್ರಶ್ನಿಸಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಸುಧಾ ಮೂರ್ತಿಯವರ ದೀಪಾವಳಿ ಗಿಫ್ಟ್- ಮಕ್ಕಳಿಗೆ ಹೊಸ ಪುಸ್ತಕ

ನನಗೆ ಸಂಸ್ಕೃತಿ ಪಾಠ ಹೇಳುತ್ತಿದ್ದಾರೆ. ಸಿದ್ದರಾಮಯ್ಯನವರು ಭಾವಿಸಿರುವ ರೀತಿ ಎಂದು ಹೇಳಿದ್ದೆ. ಕಂಬಳಿ ಹೊದಿಯಲು ಒಂದು ಜಾತಿ ಕಾರಣ ಎನ್ನುವುದಾದರೆ ಟೋಪಿ ಹಾಕುವುದಕ್ಕೂ ಒಂದು ಜಾತಿ ಇರಬೇಕಲ್ವಾ ಎಂದು ಹೇಳಿದ್ದೆ. ನಾನು ಕುರುಬ ಸಮುದಾಯದ ಬಗ್ಗೆಯೂ ಮಾತನಾಡಿಲ್ಲ. ಕುರುಬರು ನನ್ನ ಜೊತೆಯೇ ಇದ್ದಾರೆ. ಕುರುಬರು ನಂಬಿಕಸ್ಥರು. ಯಾರು ಸಂಗೊಳ್ಳಿ ರಾಯಣ್ಣ, ಕನಕದಾಸರ ಬಗ್ಗೆ ನಂಬಿಕೆ ಇಟ್ಟಿದ್ದರೋ ಅವರು ಹಿಂದುತ್ವದ ಬಗ್ಗೆಯೂ ನಂಬಿಕೆ ಇಟ್ಟಿದ್ದಾರೆ. ಎಲ್ಲಾ ಕುರುಬರು ನನ್ನ ಜೊತೆ ಇದ್ದಾರೆ. ಅದೇ ಕಾರಣಕ್ಕೆ ನಾನು 4 ಬಾರಿಯೂ ಲೀಡ್‍ನಿಂದ ಗೆಲ್ಲಲು ಸಾಧ್ಯವಾಗಿದೆ ಎಂದರು.

ಕಾಂಗ್ರೆಸ್ಸಿಗೆ ಕರೆದರೆ ಯಾರೂ ಬರುವುದಿಲ್ಲ ಎಂದು ಜಾತಿಯನ್ನು ಮುಂದಿಟ್ಟಿದ್ದಾರೆ. ನನ್ನನ್ನು ಜಾತಿ ಹೆಸರಿನ ಸಂಚಿನಲ್ಲಿ ಖಳನಾಯಕ ಮಾಡುವುದು ನಡೆಯುವುದಿಲ್ಲ. ಇಂದಿಗೂ ಹೆಚ್ಚು ಕುರುಬರು ಇರುವುದು ನನ್ನ ಜೊತೆಯೇ ಎಂದಿದ್ದಾರೆ. ನಾನು ಅವರಿಗೆ ಹೇಳಿದ್ದೆ ಸಮಯಕ್ಕಾದನೇ ನೆಂಟ, ಆಪತ್ತಿಗಾದವನೇ ಭಂಟ ಎಂದು. ನಾನು ಅವರಿಗೆ ಸಮಯಕ್ಕೆ ಆಗಿದ್ದೇನೆ. ನನ್ನ ಸಮಯಕ್ಕೆ ಅವರು ಆಗಿದ್ದಾರೆ. ಅವರು ನನ್ನ ಜೊತೆಯೇ ಇರೋದು. ಅದನ್ನ ಯಾರೂ ಹೊಡೆಯಲು, ಕಿತ್ತುಹಾಕಲು ಆಗಲ್ಲ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *