ನಾಲ್ವರ ಬಾಳಿಗೆ ಬೆಳಕಾದ ಅಪ್ಪು

Public TV
2 Min Read
puneeth rajkumar 1 7

ಬೆಂಗಳೂರು: ದೊಡ್ಮನೆ ಹುಡುಗ ಪುನೀತ್ ರಾಜ್ ಕುಮಾರ್ ಅವರ ಕಣ್ಣನ್ನು ನಾಲ್ವರಿಗೆ ಅಳವಡಿಸಿದ್ದೇವೆ ಎಂದು ನಾರಾಯಣ ನೇತ್ರಾಲಯ ಡಾ. ಭುಜಂಗಶೆಟ್ಟಿ ಅವರು ಹೇಳಿದ್ದಾರೆ.

bhujanga shetty

 

ಸ್ಯಾಂಡಲ್‍ವುಡ್ ನಟ ಪುನೀತ್ ರಾಜ್‍ಕುಮಾರ್ ಹೃದಯ ಸ್ತಂಭದಿಂದ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳನ್ನು ಅಗಲಿದ್ದಾರೆ. ಆದರೆ ಸತ್ತ ಮೇಲೂ ತಮ್ಮ ಕಣ್ಣುಗಳನ್ನು ದಾನ ಮಾಡುವ ಮಾನವೀಯತೆ ಮೆರೆದಿದ್ದಾರೆ. ಇದೀಗ ಪುನೀತ್ ಅವರ ಕಣ್ಣು ನಾಲ್ವರ ಅಂಧಕಾರವನ್ನು ದೂರ ಮಾಡಿದೆ. ಇದನ್ನೂ ಓದಿ: ಪುನೀತ್ ಓದಿಸುತ್ತಿದ್ದ 1,800 ಮಕ್ಕಳ ಜವಾಬ್ದಾರಿ ಹೊತ್ತ ನಟ ವಿಶಾಲ್

puneeth rajkumar 5 1

ಈ ಕುರಿತಂತೆ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಾರಾಯಣ ನೇತ್ರಾಲಯ ಡಾ.ಭುಜಂಗಶೆಟ್ಟಿ ಅವರು, ರಾಜ್ ಕುಮಾರ್ ಕುಟುಂಬದವರಿಗೆ ವಂದನೆ ಹೇಳೋಕೆ ಬಯಸುತ್ತೇನೆ. ಮೊದಲಿಗೆ ರಾಜ್‍ಕುಮಾರ್ ಅವರು ಬಂದು ನೇತ್ರಾದಾನ ಶುರು ಮಾಡಿದರು. ಬಳಿಕ ಪಾರ್ವತಮ್ಮನವರು, ಇದೀಗ ಪುನೀತ್ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ. ಹೀಗಾಗಿ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು. ಇದನ್ನೂ ಓದಿ: ಅಪ್ಪು ಹುಟ್ಟುಹಬ್ಬಕ್ಕೆ ಜೇಮ್ಸ್ ಸಿನಿಮಾ ರಿಲೀಸ್?

Puneeth Rajkumar Natasaarvabhowma

ಶನಿವಾರವೇ ಅಪರೇಷನ್ ಮಾಡಿ ಪುನೀತ್ ಅವರ ಕಣ್ಣನ್ನು ಬೇರೆಯವರಿಗೆ ನೀಡಿದ್ದೇವೆ. ಸಾಮಾನ್ಯವಾಗಿ ಕಣ್ಣುದಾನ ಮಾಡಿದರೆ ಇಬ್ಬರಿಗೆ ಕೊಡುತ್ತೇವೆ. ಆದರೆ ಅಪ್ಪು ಕಣ್ಣುಗಳನ್ನು ನಾಲ್ಕು ಜನರಿಗೆ ಅಳವಡಿಸಿದ್ದೇವೆ. ಕರ್ನಿಯಾದ ಮುಂಭಾಗ ಮತ್ತು ಹಿಂಭಾಗದ ಪದರವನ್ನು ಎರಡು ಭಾಗವಾಗಿ ಮಾಡಿ ನಾಲ್ಕು ಜನರಿಗೆ ಕೊಟ್ಟಿದ್ದೇವೆ. ಅಂದರೆ ಕಣ್ಣಿನ ಮುಂದಿನ ಭಾಗ ಮತ್ತು ಬ್ಯಾಕ್ ಪೋಷನ್ ಬೇರ್ಪಡಿಸಿ ಅವಶ್ಯಕತೆ ಇರುವ ನಾಲ್ವರಿಗೆ ಕೊಟ್ಟಿದ್ದೇವೆ. ಒಬ್ಬರ ಕಣ್ಣನ್ನು ಒಂದೇ ದಿನ, ನಾಲ್ವರಿಗೆ ಕೊಟ್ಟಿರುವುದು ಇದೇ ಮೊದಲಾಗಿದೆ. ನಾಲ್ವರು ಇದೀಗ ತುಂಬಾ ಚೆನ್ನಾಗಿದ್ದಾರೆ. ಇದಕ್ಕೆ ಕಣ್ಣು ತುಂಬಾ ಚೆನ್ನಾಗಿ ಇರಬೇಕಾಗುತ್ತದೆ. ಪುನೀತ್ ಕಣ್ಣು ತುಂಬಾ ಚೆನ್ನಾಗಿದ್ದ ಕಾರಣ ಇದನ್ನು ನಾಲ್ವರಿಗೆ ನೀಡಲು ಸಾಧ್ಯವಾಯಿತು ಎಂದು ತಿಳಿಸಿದರು.

puneeth 5

ಐದು ಜನರ ತಂಡದ ಡಾಕ್ಟರ್‌ಗಳು ಆಪರೇಷನ್ ಅನ್ನು ಮಾಡಿದ್ದಾರೆ. ಈ ಮೊದಲು ಈ ರೀತಿಯ ಆಪರೇಷನ್ ಅನ್ನು ಬೇರೆ, ಬೇರೆ ದಿನ ಮಾಡಲಾಗುತ್ತಿತ್ತು. ಆದರೆ ಅಪ್ಪು ಕಣ್ಣಿಗೆ ಪೂರಕವಾದ ನಾಲ್ವರ ಕಣ್ಣುಗಳಿಗೆ ಮ್ಯಾಚ್ ಆಗಬೇಕು. ಇದೀಗ ಒಬ್ಬ ಯುವತಿ, ಮೂವರು ಯುವಕರಿಗೆ ಅಪ್ಪು ಕಣ್ಣು ನೀಡಲಾಗಿದೆ. ಬೆಳಗ್ಗೆ ಹನ್ನೊಂದು ಗಂಟೆಯಿಂದ ಸಂಜೆ ಆರು ಗಂಟೆ ತನಕ ಆಪರೇಷನ್ ಮಾಡಲಾಗಿದೆ ಎಂದು ಹೇಳಿದರು. ಇದನ್ನೂ ಓದಿ:  ಉಪ್ಪಿನಲ್ಲಿ ಚಿತ್ರ ಬಿಡಿಸಿ ಅಪ್ಪುಗೆ ವಿಶೇಷ ವಿದಾಯ ಹೇಳಿದ ತೆಲುಗು ಅಭಿಮಾನಿ

Share This Article
Leave a Comment

Leave a Reply

Your email address will not be published. Required fields are marked *