ನನ್ನ ಮಗುವನ್ನು ಕಳೆದುಕೊಂಡಿದ್ದೇನೆ – ಬಿಕ್ಕಿ ಬಿಕ್ಕಿ ಅತ್ತ ಶಿವಣ್ಣ

Public TV
1 Min Read
SHIVANNA 1

– ಅಭಿಮಾನಿಗಳಲ್ಲಿ ಹ್ಯಾಟ್ರಿಕ್ ಹೀರೋ ಮನವಿ

ಬೆಂಗಳೂರು: ತುಂಬಾ ಕಷ್ಟ ಆಗುತ್ತಿದೆ ಮಾತನಾಡಲು, ತುಂಬಾ ಚಿಕ್ಕವನು ಇಷ್ಟು ಬೇಗ, ಹೋಗಿಬಿಟ್ಟ. ಭಗವಂತನಿಗೆ ಅವನು ಅಂದರೆ ತುಂಬಾ ಪ್ರೀತಿ ಇರಬೇಕು ಎಂದು ಪುನೀತ್ ರಾಜ್‍ಕುಮಾರ್ ಸಹೋದರ ಶಿವರಾಜ್‍ಕುಮಾರ್ ಅವರು ದುಃಖ ತೋಡಿಕೊಂಡಿದ್ದಾರೆ.

PUNEETH 3 3

ತಮ್ಮನ ಅಂತ್ಯಕ್ರಿಯೆ ನೆರವೇರಿಸಿ ಮನೆಗೆ ಬಂದ ನಂತರ ಮಾಧ್ಯಮದವರ ಜೊತೆಗೆ ಮಾತನಾಡುತ್ತಾ ಭಾವುಕರಾದರು. ನಮಗೆ ನೋವಿದೆ ಆದರೆ ಅಭಿಮಾನಿಗಳ ಪ್ರೀತಿ ತುಂಬಾ ದೊಡ್ಡದು. ಪುನೀತ್ ನನಗಿಂತ 13 ವರ್ಷ ಚಿಕ್ಕವನು. ಆದರು ನಮಗೆ ಮಗು ತರ ಇದ್ದನು. ನನ್ನ ಮಗುವನ್ನು ಕಳೆದುಕೊಂಡಿದ್ದೀನಿ ಅನ್ನಿಸುತ್ತಿದೆ. ಪೊಲೀಸರು, ಅಭಿಮಾನಿಗಳು, ಮಾಧ್ಯಮದವರು, ಸಿಎಂ ಬೊಮ್ಮಯಿಯವರಿಗೆ ಧನ್ಯವಾದಗಳು ಎಂದು ಹೇಳುತ್ತಾ ದುಃಖ ತೃಪ್ತರಾಗಿದ್ದಾರೆ. ಇದನ್ನೂ ಓದಿ: ಪುನೀತ್ ನೆನಪು ಮಗಳಿಗೆ ಕಾಡುತ್ತಿದೆ: ರಮೇಶ್ ಅರವಿಂದ್

PUNEETH 1 3

ಹಾಲು, ತುಪ್ಪ ಆಗೋ ತನಕ ಯಾರಿಗೂ ಸಮಾಧಿ ಸ್ಥಳಕ್ಕೆ ಅವಕಾಶ ವಿರುವುದಿಲ್ಲ, ಅದಷ್ಟು ಬೇಗ ಮಾತಾಡಿ, ಅಭಿಮಾನಿಗಳಿಗೆ ಅಲ್ಲಿಗೆ ಹೋಗೋಕೆ ವ್ಯವಸ್ಥೆ ಮಾಡುತ್ತೇವೆ. ಅಪ್ಪು ನಮ್ಮ ಹೃದಯದಲ್ಲಿದ್ದಾನೆ. ನಮ್ಮ ಜೊತೆಗೆ ಇರುತ್ತಾನೆ. ಅಭಿಮಾನಿಗಳು ಯಾರೂ ಆತ್ಮಹತ್ಯೆಯಂತಹ ತಪ್ಪು ನಿರ್ಧಾರ ತಗೋಬೇಡಿ, ಅಪ್ಪುಗೆ ಇದೆಲ್ಲಾ ಇಷ್ಟ ಆಗಲ್ಲ. ನಿಮ್ಮ ಕುಟುಂಬಗಳ ಬಗ್ಗೆ ಗಮನ ಕೊಡಿ ಎಲ್ಲರಿಗೂ ಧನ್ಯವಾದಗಳು ಎಂದು ಶಿವರಾಜ್‍ಕುಮಾರ್ ಹೇಳಿದ್ದಾರೆ. ಇದನ್ನೂ ಓದಿ: ಮಣ್ಣಲ್ಲಿ ಮಣ್ಣಾದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್

Share This Article
Leave a Comment

Leave a Reply

Your email address will not be published. Required fields are marked *