ಪುನೀತ್ ನೆನೆದು ನಟಿ ರಾಧಿಕಾ ಕುಮಾರಸ್ವಾಮಿ ಕಣ್ಣೀರು

Public TV
1 Min Read
Radhika Kumaraswamy

ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪುನೀತ್ ರಾಜ್‍ಕುಮಾರ್ ಅವರ ಅಂತಿಮ ದರ್ಶನವನ್ನು ಪಡೆದ ರಾಧಿಕಾ ಕುಮಾರಸ್ವಾಮಿಯವರು ಭಾವನಾತ್ಮಕವಾಗಿ ಮಾತನಾಡಿದ್ದಾರೆ.

ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ನಾವು ಎಷ್ಟೋ ವಿಚಾರವನ್ನು ಅಪ್ಪು ಅವರನ್ನು ನೋಡಿ ಕಲಿತಿದ್ದೇವೆ. ಅಪ್ಪಾಜಿ ಕುಟುಂಬದಲ್ಲಿ ನಾನು ಒಬ್ಬಳಾಗಿದ್ದೆ. ನನ್ನ ಕುಟುಂಬದಲ್ಲಿ ಒಬ್ಬರನ್ನು ನಾನು ಕಳೆದುಕೊಂಡಿದ್ದೇನೆ. ಅವರ ಆತ್ಮಕಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ಸಹಿಸಿಕೊಳ್ಳುವ ಶಕ್ತಿ ಸಿಗಲಿ ಎಂದು ಹೇಳುತ್ತಾ ದುಃಖಿತರಾಗಿದ್ದಾರೆ.

PUNEETH DEADBODY

ಪುನೀತ್ ಜೊತೆಗೆ ಕಳೆದ ದಿನಗಳನ್ನು ಮರೆಯುವುದಿಲ್ಲ. ಅವರು ನಮಗೆ ಒಳ್ಳೆಯ ಸ್ನೇಹಿತರಾಗಿದ್ದರು. ಅಗಲಿಕೆ ತುಂಬಾ ನೋವು ತಂದಿದೆ. ಅಪ್ಪು ಜೊತೆಗೆ ಒಂದು ಸಿನಿಮಾ ಮಾಡಬೇಕು ಎಂದು ಆಸೆ ಇತ್ತು. ನಾನು ಕೆಲವು ದಿನಗಳ ಹಿಂದೆ ಫೋನ್ ಮಾಡಿ ಮಾತನಾಡಿದ್ದೇನು. ನಾನು ಬೆಂಗಳೂರಿಗೆ ಬಂದು ಸಿನಿಮಾ ಕುರಿತಾಗಿ ಮಾತನಾಡುತ್ತೇನೆ ಎಂದು ಹೇಳಿದ್ದೇನು. ಅವರು ತುಂಬಾ ಸರಳ ವ್ಯಕ್ತಿಯಾಗಿದ್ದಾರೆ. ಎಷ್ಟು ಎತ್ತರಕ್ಕೆ ಬೆಳೆದರರು ನಾವು ಅಭಿಮಾನಿಗಳ ಜೊತೆಗೆ ಹೇಗೆ ಇರಬೇಕು ಎಂದು ಅವರನ್ನು ನೋಡಿ ಕಲಿತ್ತುಕೊಳ್ಳಬೇಕು ಎಂದು ಹೇಳುತ್ತಾ ನೋವನ್ನು ತೋಡಿಕೊಂಡಿದ್ದಾರೆ. ಇದನ್ನೂ ಓದಿ:  ಪತಿ ನಿಧನದ ಸುದ್ದಿ ಕೇಳ್ತಿದ್ದಂತೆ ಕಣ್ಣೀರಿಡುತ್ತಲೇ ಮೌನಕ್ಕೆ ಶರಣಾದ ಪತ್ನಿ ಅಶ್ವಿನಿ

Radhika Kumaraswamy 1

ಪನೀತ್ ಅವರ ಮಗಳು ಧೃತಿ ಈಗಾಗಲೇ ದೆಹಲಿಯನ್ನು ತಲುಪಿದ್ದಾರೆ. ಅವರು ಬರಲು ಇನ್ನೂ ಸಮಯ ತೆಗೆದುಕೊಳ್ಳುತ್ತದೆ. 5.30 ನಂತರ ಅಂತ್ಯಕ್ರಿಯೆ ಮಾಡಲು ಸಾಧ್ಯವಿಲ್ಲ. ಯಾಕಂದರೆ ಜಾಗ ತುಂಬಾ ಕಿರಿದಾಗಿದ್ದು, ಕತ್ತಲಾದರೆ ಕಷ್ಟ ಸಾಧ್ಯ. ಹೀಗಾಗಿ ಪುನೀತ್ ಅವರ ಸಹೋದರ ಶಿವರಾಜ್‍ಕುಮಾರ್ ಅವರ ಬಳಿ ಹಾಗೂ ಕುಟುಂಬದ ಜೊತೆಗೆ ಚರ್ಚೆ ಮಾಡಿ ನಾಳೆ ಅಂತ್ಯಕ್ರಿಯೆ ನಡೆಸಲು ತೀರ್ಮಾನ ಮಾಡಲಾಗಿದೆ. ನಾಳೆವರೆಗೂ ಅಭಿಮಾನಿಗಳಿಗೆ ಬರಲು ಅವಕಾಶ ನೀಡಲಾಗಿದೆ. ದಯವಿಟ್ಟು ನೀವು ಸಹಕರಿಸಿ ಎಂದು ಬೊಮ್ಮಾಯಿ ಅವರು ಹೇಳಿದ್ದಾರೆ. ಇದನ್ನೂ ಓದಿ: ಇಂದಲ್ಲ, ನಾಳೆ ಪುನೀತ್ ಅಂತ್ಯಕ್ರಿಯೆ: ಸಿಎಂ ಬೊಮ್ಮಾಯಿ

Share This Article
Leave a Comment

Leave a Reply

Your email address will not be published. Required fields are marked *