ನವದೆಹಲಿ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ, ಅವನಿ ಲೇಖರಾ ಮತ್ತು ಮಹಿಳಾ ಕ್ರಿಕೆಟ್‍ನಲ್ಲಿ ಸಾಧನೆ ಮಾಡಿದ ಮಿಥಾಲಿ ರಾಜ್ ಸಹಿತ 11 ಕ್ರೀಡಾಪಟುಗಳ ಹೆಸರನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.
ಇಂದು ಪ್ರಕಟಗೊಂಡ ಪ್ರಶಸ್ತಿ ಶಿಫಾರಸು ಪಟ್ಟಿಯಲ್ಲಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ, ಪ್ಯಾರಾಲಂಪಿಕ್ಸ್ ಶೂಟಿಂಗ್‍ನಲ್ಲಿ ಚಿನ್ನದ ಪದಕ ಗೆದ್ದ ಅವನಿ ಲೇಖರಾ, ಮಹಿಳಾ ಕ್ರಿಕೆಟ್‍ನಲ್ಲಿ ಅತೀ ಹೆಚ್ಚು ರನ್ ಸಿಡಿಸಿ ವಿಶ್ವದಾಖಲೆ ಬರೆದಿರುವ ಮಿಥಾಲಿ ರಾಜ್ ಮತ್ತು ಫುಟ್‍ಬಾಲ್‍ನಲ್ಲಿ ಭಾರತದ ಪರ ಅತೀ ಹೆಚ್ಚು ಗೋಲ್ ಬಾರಿಸಿರುವ ಸುನೀಲ್ ಚೆಟ್ರಿ ಅವರ ಹೆಸರನ್ನೂ ಶಿಫಾರಸು ಮಾಡಲಾಗಿದೆ. ಇದನ್ನೂ ಓದಿ: ಕೋವಿಡ್‍ನಿಂದ 41 ಗರ್ಭಿಣಿಯರು ಸಾವು, 149 ಮಂದಿ ಆತ್ಮಹತ್ಯೆ- ಕೇರಳ ಆರೋಗ್ಯ ಸಚಿವೆ
ಈ ವರ್ಷ ವಿಶೇಷವಾಗಿ ಬದಲಾದ ಪ್ರಶಸ್ತಿಯ ಹೆಸರಿನ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ಪಡೆಯಲಿದ್ದಾರೆ. ಈ ಹಿಂದೆ ರಾಜೀವ್ ಗಾಂಧಿ ಖೇಲ್ ರತ್ನ ಹೆಸರಿನಲ್ಲಿ ಪ್ರಶಸ್ತಿಯನ್ನು ನೀಡಲಾಗಿತ್ತು. ಆಗಸ್ಟ್ 6 ರಂದು ಪ್ರಧಾನಿ ನರೇಂದ್ರ ಮೋದಿ ಖೇಲ್ ರತ್ನ ಪ್ರಶಸ್ತಿಗೆ ಮರುನಾಮಕರಣ ಮಾಡಿ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ಘೋಷಿಸಿದ್ದರು. ಇದನ್ನೂ ಓದಿ: ಮಂಡಿಯೂರಲು ಒಪ್ಪದ ಡಿ ಕಾಕ್ ಆಫ್ರಿಕಾ ತಂಡದಿಂದ ಔಟ್?
ಖೇಲ್ ರತ್ನಗೆ ಶಿಫಾರಸುಗೊಂಡ ಕ್ರೀಡಾಪಟುಗಳು:
ನೀರಜ್ ಚೋಪ್ರಾ (ಅಥ್ಲೆಟಿಕ್ಸ್), ರವಿಕುಮಾರ್ ದಹಿಯಾ (ಕುಸ್ತಿ), ಶ್ರೀಜೇಶ್ (ಹಾಕಿ) ಲವ್ಲಿನಾ (ಬಾಕ್ಸಿಂಗ್), ಅವನಿ ಲೆಖರಾ (ಶೂಟಿಂಗ್), ಸುನೀಲ್ ಚೆಟ್ರಿ (ಫುಟ್‍ಬಾಲ್), ಪ್ರಮೋದ್ ಭಗತ್ (ಬ್ಯಾಡ್ಮಿಂಟನ್), ಎಂ.ನರ್ವಾಲ್ (ಶೂಟಿಂಗ್), ಕೃಷ್ಣನಗರ್ (ಬ್ಯಾಡ್ಮಿಂಟನ್), ಮಿಥಾಲಿ ರಾಜ್(ಕ್ರಿಕೆಟ್) ಸುಮಿತ್ (ಅಥ್ಲೆಟಿಕ್ಸ್)