ಬೆಂಗಳೂರು: ನಿರ್ಮಾಪಕ ಸೌಂದರ್ಯ ಜಗದೀಶ್ ಕುಟುಂಬದಿಂದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಮನೆಯ ಸೆಕ್ಯೂರಿಟಿಯನ್ನು ಅರೆಸ್ಟ್ ಮಾಡಿದ್ದಾರೆ.
ಬಾಲಾಜಿ ಅರೆಸ್ಟ್ ಆದ ಸೆಕ್ಯೂರಿಟಿ. ಮನೆಗೆ ನುಗ್ಗಿ ಹಲ್ಲೆ ನಡೆಸಲು ಪ್ರಚೋದನೆ ಮತ್ತು ಸಹಾಯದ ಹಿನ್ನೆಲೆಯಲ್ಲಿ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಸೆಕ್ಯೂರಿಟಿ ಬಾಲಾಜಿಯನ್ನ ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸೌಂದರ್ಯ ಜಗದೀಶ್ ಕುಟುಂಬದಿಂದ ಹಲ್ಲೆ ಕೇಸ್ – ಪತ್ನಿ ರೇಖಾ, ಪುತ್ರ ಸ್ನೇಹಿತ್‍ಗೆ ಪೊಲೀಸರಿಂದ ನೋಟಿಸ್
ಇತ್ತ ಎಫ್‍ಐಆರ್ ದಾಖಲಾದರೂ ಆರೋಪಿಗಳು ನಾಪತ್ತೆಯಾಗಿದ್ದಾರೆ. ನಿರ್ಮಾಪಕನ ಕಿರಿಕ್ ಮಗ, ಪತ್ನಿ ಹಾಗೂ ಬೌನ್ಸರ್ ಗಳು ಇನ್ನೂ ಪೊಲಿಸರ ಕೈಗೆ ಸಿಕ್ಕಿಲ್ಲ. ಹೀಗಾಗಿ ಮಹಾಲಕ್ಷ್ಮೀ ಲೇ ಔಟ್ ಪೊಲೀಸರು ಆರೋಪಿಗಳಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ರಾತ್ರಿಯೆಲ್ಲಾ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಕಳೆದ ರಾತ್ರಿ 1 ಗಂಟೆವರೆಗೂ ಬೌನ್ಸರ್ ಗಳ ಮನೆಯನ್ನು ಪೊಲೀಸರು ಜಾಲಾಡಿದ್ದಾರೆ. ಬಾಗಲಗುಂಟೆ, ಕೊಡಿಗೇಹಳ್ಳಿಯಲ್ಲಿ ಬೌನ್ಸರ್ ಮನೆ ಪರಿಶೀಲನೆ ನಡೆಸಿದ್ದಾರೆ. ಘಟನೆ ಬಳಿಕ ಮನೆಗೆ ಹೋಗಿಲ್ಲ. ಬೌನ್ಸರ್ ಮನೆಯವರಿಂದ ಮಾಹಿತಿ ಪಡೆದಿದ್ದಾರೆ. ಆದರೆ ಮನೆಯಲ್ಲಿ ಬೌನ್ಸರ್ ಗಳು ಸಿಗದೇ ವಾಪಸ್ ಆಗಿದ್ದಾರೆ. ಇದನ್ನೂ ಓದಿ: ಠಾಣೆ ಮೆಟ್ಟಿಲೇರಿದ ಕಸ ಫೈಟ್ – ಪ್ರೊಡ್ಯೂಸರ್ ಪುತ್ರ, ಪತ್ನಿ ವಿರುದ್ಧ FIR
ಮಂಜುಳಾ ಪುರುಷೋತ್ತಮ್ ಅವರ ಕುಟುಂಬಕ್ಕೆ ಕ್ಷಮೆ ಕೇಳತ್ತೇನೆ. ಇನ್ನು ಮುಂದೆ ನಮ್ಮ ಮನೆ ಕೆಲಸದವರು ಮಂಜುಳ ಅವರ ಕೆಲಸದವರ ಜೊತೆ ಜಗಳವಾಡದಂತೆ ನೋಡಿ ಕೊಳ್ಳುತ್ತೇನೆ. ನನ್ನ ಮಗ ಸ್ನೇಹಿತ್ ಹಾಗೂ ಪತ್ನಿ ರೇಖಾ ಜಗಳ ಬಿಡಸಲು ಹೋಗಿದ್ದರು. ಅವರು ಯಾರ ಮೇಲೂ ಹಲ್ಲೆ ಮಾಡಲು ಹೋಗಿಲ್ಲ. ಈ ಘಟನೆಯಿಂದ ನಮ್ಮಿಬ್ಬರ ಕುಟುಂಬಕ್ಕೆ ಬಹಳ ನೋವಾಗಿದೆ. ಹೆಣ್ಣು ಮಗಳೊಬ್ಬಳಿಗೆ ಹಾಗೂ ಅವರ ತಾಯಿಗೆ ನೋವಾಗಿರುವ ವಿಷಯ ತಿಳಿದು ನನಗೆ ನೋವಾಗಿದೆ. ನಿರ್ಮಾಪಕ ಸೌಂದರ್ಯ ಜಗದೀಶ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.