ಸಿದ್ದರಾಮಯ್ಯರನ್ನು ತಾಲಿಬಾನಿಗೆ ಕಳಿಸಬೇಕು: ಶ್ರೀನಿವಾಸ್ ಪ್ರಸಾದ್

Public TV
1 Min Read
srinivas prasad

ಮೈಸೂರು: ಸಿದ್ದರಾಮಯ್ಯ ಮಾತಾನಾಡುವುದನ್ನು ನೋಡಿದರೆ ಅಸಹ್ಯವಾಗುತ್ತದೆ. ಇವರನ್ನು ಒಂದು ತಿಂಗಳು ತಾಲಿಬಾನಿಗೆ ಕಳಿಸಬೇಕು ಎಂದು ಮಾಜಿ ಸಚಿವ ವಿ. ಶ್ರೀನಿವಾಸಪ್ರಸಾದ್ ಕಿಡಿಕಾರಿದ್ದಾರೆ.

ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಂಜನಗೂಡಿನ ಉಪಚುನಾವಣೆ ನನ್ನ ಸದಾ ಚುಚ್ಚುತ್ತಿರುತ್ತದೆ. ಹಾನಗಲ್, ಸಿಂದಗಿ ಉಪ ಚುನಾವಣೆಯಲ್ಲಿ ಹಣದ ಹೊಳೆ ಹರಿಯುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸುತ್ತಿದ್ದಾರೆ. ಆದರೆ ನಂಜನಗೂಡು ಉಪಚುನಾವಣೆ ವೇಳೆ ಸಿದ್ದರಾಮಯ್ಯ ಎಷ್ಟು ಅಧಿಕಾರ ದುರುಪಯೋಗ ಮಾಡಿಕೊಂಡರು. ಆಗ ನನ್ನ ಬಳಿ ಹಣ ಇರಲಿಲ್ಲ. ಪೊಲೀಸರ ಎದುರೇ ಕಾಂಗ್ರೆಸ್‍ನವರು ಅವತ್ತು ಹಣ ಹಂಚಿದರು. ಆ ಚುನಾವಣೆಯಲ್ಲಿ ಕಾಂಗ್ರೆಸ್‍ನವರು ನನಗೆ ತುಂಬಾ ನೋವು ಕೊಟ್ಟರು. ಇಂತಹವರು ಈಗ ಉಪ ಚುನಾವಣೆಯಲ್ಲಿ ಹಣದ ಹೊಳೆ ಹರಿಯುತ್ತಿದೆ ಎಂದು ಆರೋಪಿಸುತ್ತಾರೆ. ಅವರಿಗೆ ನಾಚಿಕೆ ಆಗಬೇಕು ಎಂದಿದ್ದಾರೆ. ಇದನ್ನೂ ಓದಿ: ಯುಪಿ ಜನತೆಗೆ 10 ಲಕ್ಷ ರೂ.ವರೆಗೂ ಉಚಿತ ಚಿಕಿತ್ಸೆ – ಪ್ರಿಯಾಂಕಾ ಗಾಂಧಿ ಭರವಸೆ

SIDDRAMAIHA

ಸಿದ್ದರಾಮಯ್ಯ ಎರಡು ಕಡೆ ಚುನಾವಣೆಗೆ ನಿಲ್ಲದೇ ಇದ್ದಿದ್ದರೆ ಕಾಟೂರು ತೋಟದ ಮನೆ ಸೇರಿ ಕೊಳ್ಳಬೇಕಿತ್ತು. ಇದನ್ನೆಲ್ಲಾ ಮರೆತು ಸಿದ್ದರಾಮಯ್ಯ ಇವತ್ತು ಬಾಯಿಗೆ ಬಂದ ರೀತಿ ಮಾತಾಡುವುದನ್ನು ಕಲಿತಿದ್ದಾರೆ. ಸಿದ್ದರಾಮಯ್ಯ ಮಾತಾಡುವುದನ್ನು ನೋಡಿದರೆ ಅಸಹ್ಯವಾಗುತ್ತದೆ. ಇವರನ್ನು ಒಂದು ತಿಂಗಳು ತಾಲಿಬಾನಿಗೆ ಕಳಿಸಬೇಕು. ಪ್ರಧಾನಿ ಬಗ್ಗೆ ಬಾಯಿಗೆ ಬಂದಂತೆ ಮಾತಾಡುವುದನ್ನು ಮೊದಲು ನಿಲ್ಲಿಸಲಿ. ಲೋಕಸಭಾ ಚುನಾವಣೆಯಲ್ಲಿ ಏನೇನಾಯ್ತು ಗೊತ್ತಿಲ್ವಾ? ಒಂದು ಸೀಟ್ ಗೆದ್ದು ಉಳಿದ ಕಡೆ ನೆಗೆದು ಬಿದ್ದು ಹೋದ್ರಿ. ಇದೆಲ್ಲಾ ಮರೆತು ಹೋಯ್ತಾ ಸಿದ್ದರಾಮಯ್ಯ ಅವರೇ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಜೆಡಿಎಸ್ ಸೋಲಿಸಿ ಬಿಜೆಪಿ ಗೆಲ್ಲಿಸೋದೇ ಸಿದ್ದು & ಟೀಂನ ಉದ್ದೇಶ: ಹೆಚ್‍ಡಿಕೆ ಕಿಡಿ

modi

ಇನ್ನೂ ಜೆಡಿಎಸ್ ಪಾರ್ಟಿಯಲ್ಲ. ಅದೊಂದು ಕಂಪನಿಯಷ್ಟೇ ಬೆಂಕಿ ಹಾಕಿದ ಕಡೆ ಕೈ ಕಾಯಿಸಿಕೊಳ್ಳಿ ಅಷ್ಟೇ. ಯಾರಿಗೂ ಬಹುಮತ ಬಾರದೇ ಇದ್ದರೆ ಸಾಕು ಎನ್ನುವುದೇ ನಿಮ್ಮ ಲೆಕ್ಕಾಚಾರ. ನಿಮ್ಮ ಇತಿಮಿತಿ ಎಲ್ಲರಿಗೂ ಗೊತ್ತಿದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *