ಪಾಕಿಸ್ತಾನಕ್ಕೆ ಇಂಡಿಯಾದವ್ರು ಹೆಂಗೆ ಮಂಜಾ ಕೊಡ್ತಾರೆ ನೋಡಿ: ಜಮೀರ್

Public TV
1 Min Read
zameer

ವಿಜಯಪುರ: ಭಾರತ, ಪಾಕಿಸ್ತಾನ ಕ್ರಿಕೆಟ್ ತಂಡಗಳು ಇಂದು ದುಬೈನಲ್ಲಿ ಮುಖಾಮುಖಿಯಾಗುತ್ತವೆ. ಈ ಕುರಿತಾಗಿ ಶಾಸಕ ಜಮೀರ್ ಅಹ್ಮದ್ ಮಾತನಾಡಿ ಇಂಡಿಯಾ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕ್ರಿಕೆಟ್ ಪಂದ್ಯ ನೋಡಲು ತುಂಬಾ ಜನ ದುಬೈ ಹೋಗಿದ್ದಾರೆ. ನನ್ನ ಮಗಳು ದುಬೈನಲ್ಲಿ ಇದ್ದಾಳೆ. ನಾಲ್ಕು ದಿನಗಳ ಹಿಂದೆ ಹೇಳಿದಳು. ಅಪ್ಪಾ ಇಲ್ಲಿ ಟಿಕೆಟ್ ಸಿಗುತ್ತಿಲ್ಲ ಎಂದು ಹೇಳಿದಳು. ನಾನು ನನ್ನ ಸ್ನೇಹಿತರಿಗೆ ಫೋನ್ ಮಾಡಿ ಟಿಕೆಟ್ ವ್ಯವಸ್ಥೆ ಮಾಡುವಂತೆ ಕೇಳಿದೆ. ನನ್ನ ಮಗಳಿಗೆ ಇಂಡಿಯಾ ಕ್ರೀಕೆಟ್ ಟೀಮ್ ಎಂದರೆ ತುಂಬಾ ಇಷ್ಟ. ಟಿಕೆಟ್ ಬೇಕಿತ್ತು ಎಂದು ಕೇಳಿದಾಗ ಯಾವ ಹೋಟೆಲ್ ಇಲ್ಲ, 10 ಲಕ್ಷ ರೂಪಾಯಿ ಹಣವನ್ನು ಕೊಟ್ಟರು ಟಿಕೆಟ್ ಸಿಗೋದಿಲ್ಲ. ಅಷ್ಟೂಂದು ಜನ ಬಂದಿದ್ದಾರೆ ಎಂದರು. ಕುಮಾರಸ್ವಾಮಿ ಬ್ರದರ್, ಬ್ರದರ್‌ ಅಂತ ಕತ್ತು ಕೊಯ್ಯೋದು: ಜಮೀರ್ ಅಹ್ಮದ್

india pakistan cricket ticket 2

ಇಂಡಿಯಾ-ಪಾಕಿಸ್ತಾನ ಪಂದ್ಯ ಎಂದರೆ ಜನರಿಗೆ ಇಂಟ್ರಸ್ಟಿಂಗ್ ಇರುತ್ತದೆ. ನನಗೆ ನೂರಕ್ಕೆ ನೂರು ವಿಶ್ವಾಸವಿದೆ ನಮ್ಮ ಇಂಡಿಯಾ ಟೀಂ ಒಳ್ಳೆಯ ಲೀಡ್‍ನಲ್ಲಿ ಗೆದ್ದುಕೊಂಡು ಬರುತ್ತದೆ. ನೋಡಿ ಹೆಂಗೆ ಅವರಿಗೆ ಮಾಂಜಾ ಸಿಕ್ಸ್ ಮೇಲೆ ಸಿಕ್ಸ್ ಹೊಡಿಯುತ್ತಾರೆ. ಪಾಕಿಸ್ತಾನ ಅವರು ನೋಡುತ್ತಾ ಇರಬೇಕು ಎಂದು ಇಂಡಿಯಾ ಟೀಂಗೆ ಸಪೋರ್ಟ್ ಮಾಡಿದ್ದಾರೆ. ಇದನ್ನೂ ಓದಿ: 14 ವರ್ಷದ ಬಳಿಕ ಬೆಂಕಿಪೊಟ್ಟಣದ ಬೆಲೆ ಏರಿಕೆ

zameer 1

ಪ್ರಪಂಚದಾದ್ಯಂತ ಕೋಟ್ಯಂತರ ಜನರು ಇಂದು ನಡೆಯಲಿರುವ ಭಾರತ-ಪಾಕಿಸ್ತಾನ ನಡುವಿನ ಪಂದ್ಯವನ್ನು ನೋಡಲು ಕಾತುರರಾಗಿದ್ದಾರೆ. ಕ್ರಿಕೆಟ್‍ನ ಹುಚ್ಚು ಹಚ್ಚಿಕೊಂಡಿರುವ ಎರಡು ದೇಶಗಳ ಅಭಿಮಾನಿಗಳು ಟಿವಿ ಪರದೆಗಳ ಮುಂದೆ, ದೊಡ್ಡ ಪರದೆಗಳ ಎದುರು, ಗಲ್ಲಿ-ವಠಾರಗಳಲ್ಲಿ ಗುಂಪಾಗಿ ಕೂತು ಇಂದಿನ ಪಂದ್ಯವನ್ನು ವೀಕ್ಷಿಸಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *