ಅಂತ್ಯಕ್ರಿಯೆಗೆ ಹೋಗಿ ಆಸ್ಪತ್ರೆಗೆ ಸೇರಿದ 40 ಜನರ ಸ್ಥಿತಿ ಚಿಂತಾಜನಕ

Public TV
1 Min Read
Funeral Feast

ಪಾಟ್ನಾ: ಅಂತ್ಯಕ್ರಿಯೆಗೆಂದು ಹೋಗಿ ಊಟವನ್ನು ಸೇವಿಸಿದ್ದ ಸುಮಾರು 40 ಜನರು ಆಸ್ಪತ್ರೆಗೆ ದಾಖಲಾದ ಆಘಾತಕಾರಿ ಘಟನೆ ಬಿಹಾರದ ಮುಜಾಫರ್‌ಪುರ್ ಜಿಲ್ಲೆಯಲ್ಲಿ ನಡೆದಿದೆ.

ಬಿಹಾರದ ಮುಜಾಫರ್‌ಪುರ್ ಜಿಲ್ಲೆಯ ರೂಪೌಲಿ ಗ್ರಾಮದ ನಿವಾಸಿ ಗಣೇಶ ಮಹ್ತೋ ಎಂಬವರ ಮನೆಯಲ್ಲಿ ಮಹ್ತೋ ಅವರ ಪತ್ನಿ ತೀರಿಕೊಂಡಿದ್ದರು. ಹೀಗಾಗಿ ಹಿಂದೂ ಸಂಪ್ರದಾಯದಂತೆ ಮಂಗಳವಾರ ಸಂಜೆ ಶ್ರಾದ್ಧವನ್ನು ಮಾಡಲಾಗುತ್ತಿತ್ತು. ಕಾರ್ಯ ಮುಗಿದ ನಂತರ ಔತಣವನ್ನು ಏರ್ಪಡಿಸಿದ್ದು, ಊಟವನ್ನು ಸೇವಿಸಿದ ಮಕ್ಕಳು ಸೇರಿದಂತೆ 40 ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದನ್ನೂ ಓದಿ: ಬಿಜೆಪಿ ಸಾಧನೆ ಶೂನ್ಯ, ಅವಹೇಳನಕಾರಿ ಮಾತಾಡ್ತಿದ್ದಾರೆ: ಡಿಕೆಶಿ ಕಿಡಿ

RR NAGAR HOSPITAL 2

ಊಟವನ್ನು ಸೇವಿಸಿದ ನಂತರ, ಹಲವು ಮಕ್ಕಳು ತೀವ್ರ ಹೊಟ್ಟೆ ನೋವು ಮತ್ತು ವಾಂತಿಯಾಗಿದ್ದು, ಇದನ್ನು ತಮ್ಮ ಪೋಷಕರಿಗೆ ತಿಳಿಸಿದ್ದಾರೆ. ಈ ಹಿನ್ನೆಲೆ ಚಿಕಿತ್ಸೆಗಾಗಿ ಅವರನ್ನು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ(ಪಿಎಚ್‍ಸಿ) ಕರೆದೊಯ್ಯಲಾಯಿತು. ಮಕ್ಕಳು ಅಲ್ಲದೇ ದೊಡ್ಡವರಿಗೂ ಈ ರೀತಿ ಸಮಸ್ಯೆಯಾಗಿದ್ದು, ಹಲವು ಜನರು ಆಸ್ಪತ್ರೆಯಲ್ಲಿ ದಾಖಲಾಗುತ್ತಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ರೋಗಿಗಳ ಪ್ರಕರಣಗಳು ಹೆಚ್ಚಾದಂತೆ, ಶಸ್ತ್ರಚಿಕಿತ್ಸಕರು ಆರೋಗ್ಯ ರಕ್ಷಣೆಯ ಹೊರಗೆ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

FotoJet 9 11

ಈ ಕುರಿತು ಮಾತನಾಡಿದ ಡಾ.ವಿನಯ್ ಕುಮಾರ್ ಶರ್ಮಾ, ಕೆಲವು ಮಕ್ಕಳನ್ನು ಸಾರಾಯ ಸಾಮಾನ್ಯ ಆಸ್ಪತ್ರೆ(ಸಿಎಚ್‍ಸಿ)ಯಲ್ಲಿ ದಾಖಲಿಸಲಾಗಿದ್ದು, ಇನ್ನೂ 5 ಜನರನ್ನು ಸದರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆಯ ಸಮಯದಲ್ಲಿ ಮಕ್ಕಳಲ್ಲಿ ಒಂದು ಮಗು ಸಾವನ್ನಪ್ಪಿದ್ದು, ಆತನನ್ನು ನಿಶಾಂತ್ ಕುಮಾರ್ ಎಂದು ಗುರುತಿಸಲಾಗುದೆ. ಈ ಹಿನ್ನೆಲೆ ನಾವು ಸಿಎಚ್‍ಸಿಯಲ್ಲಿ ವೈದ್ಯಕೀಯ ಅಧಿಕಾರಿಗಳಿಗೆ ತುಂಬಾ ಎಚ್ಚರಿಕೆಯಿಂದ ಮಕ್ಕಳ ಚಿಕಿತ್ಸೆಯನ್ನು ಮಾಡಲು ಸೂಚಿಸಿದ್ದೇವೆ. ಜಿಲ್ಲೆಯ ಹಲವಾರು ಹಿರಿಯ ಅಧಿಕಾರಿಗಳು ಕೂಡ ಸಿಎಚ್‍ಸಿ ಹಾಗೂ ಗ್ರಾಮದಲ್ಲಿ ಕ್ಯಾಂಪ್ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಬೀದಿ ನಾಟಕ ಅಭಿಯಾನದ ಮೂಲಕ ಕೋವಿಡ್ ಲಸಿಕೆ ಜಾಗೃತಿ

ಅಂತ್ಯಕ್ರಿಯೆಯ ಸಮಯದಲ್ಲಿ ಮಾಡಿದ್ದ ಆಹಾರದ ಸ್ಯಾಂಪಲ್ ಅನ್ನು ಸಂಗ್ರಹಿಸಿದ್ದು, ಅದನ್ನು ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಿದ್ದೇವೆ. ಆಹಾರವನ್ನು ತಯಾರಿಸುವಾಗ ಕಲಬೆರಕೆಯಾದ ವಸ್ತುಗಳಿಂದ ಆಹಾರ ವಿಷಕಾರಿಯಾಗಿ ಪರಿವರ್ತನೆಯಾಗಿರಬಹುದೆಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *