ಅಗರ ಕೆರೆ ರಾಜಕಾಲುವೆಗಳು, ಸುತ್ತಲಿನ ಲೇಔಟ್ ಚರಂಡಿ ದುರಸ್ತಿಗೆ ಶೀಘ್ರ ಕ್ರಮ: ಬೊಮ್ಮಾಯಿ

Public TV
2 Min Read
BOMMAI

ಬೆಂಗಳೂರು: ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಮಳೆಹಾನಿ ಪ್ರದೇಶಗಳಾದ ಹೆಚ್‍ಎಸ್ ಆರ್ ಲೇಔಟ್ ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಇಂದು ಸ್ಥಳ ಪರಿಶೀಲನೆ ನಡೆಸಿದರು. ಸ್ಥಳೀಯರ ಕುಂದು-ಕೊರತೆಗಳನ್ನು ಆಲಿಸಿ, ಹೊಸ ಚರಂಡಿ ವ್ಯವಸ್ಥೆ ನಿರ್ಮಾಣಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಳಿಕ ಹೆಚ್ ಎಸ್ ಆರ್ ಲೇಔಟ್ ಜಂಕ್ಷನ್ ನಲ್ಲಿ ಇಳಿದು ಅಗರ ಕೆರೆ ಸೇರುವ ರಾಜಕಾಲುವೆ ವೀಕ್ಷಿಸಿ, ಮಳೆ ಬಂದಾಗ ರಾಜಕಾಲುವೆ ನೀರು ಹೊರ ಹರಿದು ಬರುವ ಬಗ್ಗೆ ಸಿಎಂಗೆ ಶಾಸಕ ಸತೀಶ್ ರೆಡ್ಡಿ ಮಾಹಿತಿ ನೀಡಿದರು. ರಸ್ತೆ ಇಕ್ಕೆಲಗಳ ಸಣ್ಣ ಮೋರಿ ಶೋಲ್ಡರ್ ಡ್ರೈನ್, 16 ನೇ ಅಡ್ಡ ರಸ್ತೆ ಶೋ ರೂಂಗಳಿಗೆ ನೀರು ನುಗ್ಗುತ್ತದೆ ಎಂದು ಶಾಸಕರು ಮಾಹಿತಿ ನೀಡಿದರು.

BOMMAI 3

ಆಕ್ಸ್ ಫರ್ಡ್ ಕಾಲೇಜು ಎಂಜಿನಿಯರ್ ವಿಭಾಗದ ಮುಂದೆಯೇ ರಾಜಕಾಲುವೆ ಕಾಮಗಾರಿ ಅಪೂರ್ಣವಾಗಿದೆ. ಪೈಪುಗಳು ಕಂಬಿಗಳು ಬಿಟ್ಟು ಹಾಗೆಯೇ ಅರ್ಧದಲ್ಲಿ ನಿಂತ ಕಾಮಗಾರಿಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಇದನ್ನೂ ಓದಿ: ಟೀಂ ಇಂಡಿಯಾಗೆ ಕ್ಲಾಸ್ ಆರಂಭಿಸಿದ ಧೋನಿ – ವಿಶ್ವಕಪ್‍ಗಾಗಿ ಭರ್ಜರಿ ತಯಾರಿ

ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿಎಂ, ಅಗರದ ಎಸ್ ಟಿಪಿ, ಘಟಕ 35 ಎಂಎಲ್ ಡಿ ಸಾಮಥ್ರ್ಯವಿದ್ದು, ಆದರೆ ಅಲ್ಲಿ 20 ಎಮ್ ಎಲ್ಡಿ ಮಾತ್ರ ತ್ಯಾಜ್ಯ ನೀರು ಸಂಸ್ಕರಣೆ ಆಗುತ್ತಿದೆ. ಪೂರ್ಣ ಪ್ರಮಾಣದಲ್ಲಿ ಸಂಸ್ಕರಣೆ ಮಾಡಲು ಸೂಚನೆ ನೀಡಲಾಗಿದೆ. ಸಂಸ್ಕರಣೆ ಆದ ನೀರು ಮತ್ತೆ ಚರಂಡಿಗೆ ಹೊಗುತ್ತಿದೆ. ಅದನ್ನು ತಡೆಯಲು ಸೂಚನೆ ನೀಡಲಾಗಿದೆ ಎಂದರು.

BOMMAI 1

ಅಲ್ಲದೆ ಬೆಸ್ಕಾಂ, ಬಿಬಿಎಂಪಿ, ಜಲಮಂಡಳಿ ಮಧ್ಯೆ ಸಮನ್ವಯ ಕೊರತೆ ಇದೆ. ಸಮನ್ವಯ ಕೊರತೆ ಸರಿಪಡಿಸಲು ಸದ್ಯದಲ್ಲೇ ಸಭೆ. ಕೆರೆಗಳ ಒತ್ತುವರಿ ಸಂಬಂಧ ಕ್ರಮ ಕೈಗೊಳ್ಳಲಾಗುವುದು. ಮಂತ್ರಿ ಡೆವೆಲಪರ್ಸ್ ವಿರುದ್ಧ ಆರೋಪ ಇದೆ. ಅದರ ಬಗ್ಗೆಯೂ ಕ್ರಮ ಕೈಗೊಳ್ಳಲಾಗುವುದು. ಬೆಂಗಳೂರಿನ ಬೇರೆ ಬೇರೆ ಭಾಗಗಗಲ್ಲೂ ಸಮಸ್ಯೆ ಇದೆ. ಚರಂಡಿ ನೀರು ಸರಾಗವಾಗಿ ಹರಿದು ಹೋಗಲು ಮಾಸ್ಟರ್ ಪ್ಲಾನ್ ಮಾಡ್ತೇವೆ ಎಂದರು. ಇದನ್ನೂ ಓದಿ: ದೀಪಿಕಾರಂತೆ ಕ್ಯೂಟ್ ಮಗು ಬೇಕು: ರಣವೀರ್ ಸಿಂಗ್

ಇನ್ನು ಅಗರ ಎಸ್‍ಟಿಪಿ ಘಟಕ ವ್ಯಾಪ್ತಿಯಲ್ಲಿ ಬರುವ ಎಲ್ಲ ಬಡಾವಣೆಗಳಿಗೂ ಮಳೆಯಿಂದ ಸಮಸ್ಯೆ ಆಗಿದೆ. 15 ರಿಂದ 20 ಕೆರೆಗಳ ನೀರು ಅಗರ ಕೆರೆಗೆ ಬರ್ತಿದೆ. ಚರಂಡಿಗಳು ತುಂಬಿ ಹರಿದು ಸಮಸ್ಯೆ ಆಗುತ್ತಿವೆ. ಚರಂಡಿಗಳನ್ನು ಅಗಲೀಕರಣ ಮಾಡಿ, ಆಳ ಮಾಡಲು ಹಾಗೂ ಮುಖ್ಯ ರಾಜಾಕಾಲುವೆ ದುರಸ್ತಿಗೂ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

BOMMAI 2

ರಸ್ತೆ ಗುಂಡಿಗಳ ಬಗ್ಗೆ ಎಲ್ಲ ಮಾಹಿತಿ ಪಡೆಕೊಳ್ಳುತ್ತಿದ್ದೇನೆ. ರಸ್ತೆ ಗುಂಡಿ ಸಂಬಂಧ ವಿಶೇಷ ಸಭೆ ಮಾಡಿ, ರಸ್ತೆ ಗುಂಡಿಗಳ ಪರಿಶೀಲನೆ ಸಹ ಮಾಡ್ತೇನೆ. ಮಳೆ ಬರುತ್ತಿರುವುದರೀಮದ ರಸ್ತೆ ಗುಂಡಿ ಮುಚ್ಚಲು ಸಮಸ್ಯೆ ಆಗ್ತಿದೆ. ಮಳೆ ಮುಗಿದ ಮೇಲೆ ಯುದ್ಧೋಪಾದಿಯಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದರು.

Share This Article
Leave a Comment

Leave a Reply

Your email address will not be published. Required fields are marked *