ಬೆಂಗಳೂರು: ಸ್ಯಾಂಡಲ್‍ವುಡ್ ನಟ ಚಿರಂಜೀವಿ ಸರ್ಜಾ ಅವರು ನಮ್ಮೊಂದಿಗೆ ಇದ್ದರೆ ಇಂದಿಗೆ 37ನೇ ವರ್ಷಕ್ಕೆ ಕಾಲಿಡುತ್ತಿದ್ದರು. ಹುಟ್ಟುಹಬ್ಬವನ್ನು ಅವರ ಮುದ್ದಾದ ಕುಟುಂಬದೊಂದಿಗೆ ಆಚರಣೆ ಮಾಡುತ್ತಿದ್ದರು. ಆದರೆ ಅಕಾಲದಲ್ಲಿ ಎಲ್ಲರನ್ನೂ ಅಗಲಿದ ನಟ ಚಿರಂಜೀವಿ ಸರ್ಜಾ ಹುಟ್ಟುಹುಬ್ಬವನ್ನು ಕುಟುಂಬಸ್ಥರು ವಿಭಿನ್ನವಾಗಿ ಆಚರಣೆ ಮಾಡಿದ್ದಾರೆ.
ಇಂದು ದಿವಂಗತ ನಟ ಚಿರಂಜೀವಿ ಸರ್ಜಾ ಅವರ ಜನ್ಮದಿನದ ಸವಿನೆನಪು. ಚಿರಂಜೀವಿ ಸರ್ಜಾ ನಮ್ಮೊಂದಿಗೆ ಇದ್ದಿದ್ದರೆ, ಅವರ 37ನೇ ವರ್ಷದ ಹುಟ್ಟುಹಬ್ಬವನ್ನು (ಅಕ್ಟೋಬರ್ 17) ಆಚರಿಸಿಕೊಳ್ಳುತ್ತಿದ್ದರು. ಆದರೆ, ದುರಾದೃಷ್ಟವಶಾತ್ ಚಿರಂಜೀವಿ ಸರ್ಜಾ ನಮ್ಮೊಂದಿಗಿಲ್ಲ. ಚಿರಂಜೀವಿ ಸರ್ಜಾ ದೈಹಿಕವಾಗಿ ಜೊತೆಯಲ್ಲಿಲ್ಲದಿದ್ದರೂ, ಸಿನಿಮಾಗಳ ಮೂಲಕ ಕುಟುಂಬಸ್ಥರು ಹಾಗೂ ಅಭಿಮಾನಿಗಳ ಹೃದಯದಲ್ಲಿ ಜೀವಂತವಾಗಿದ್ದಾರೆ. ಇದನ್ನೂ ಓದಿ: ಮಹಾರಾಣಿ ಧಿರಿಸಿನಲ್ಲಿ ಮೇಘನಾ ಫುಲ್ ಮಿಂಚಿಂಗ್
ಹತ್ತು ವರ್ಷಗಳ ಕಾಲ ಪ್ರೀತಿಸಿದ ಚಿರಂಜೀವಿ ಸರ್ಜಾ-ಮೇಘನಾ ರಾಜ್ 2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. 2020ರ ಜೂನ್ 7ರಂದು ಮೇಘನಾ ರಾಜ್ ಗರ್ಭಿಣಿಯಾಗಿರುವಾಗಲೇ, ಚಿರಂಜೀವಿ ಸರ್ಜಾ ಕೊನೆಯುಸಿರೆಳೆದರು. ಅಕ್ಟೋಬರ್ 22, 2020ರಂದು ಗಂಡು ಮಗುವಿಗೆ ಮೇಘನಾ ರಾಜ್ ಜನ್ಮ ನೀಡಿದರು. ಪುತ್ರನಿಗೆ ರಾಯನ್ ರಾಜ್ ಸರ್ಜಾ ಎಂದು ನಾಮಕರಣ ಮಾಡಲಾಗಿದೆ. ಪುತ್ರ ರಾಯನ್ ರಾಜ್ ಸರ್ಜಾಗೆ ಇದೇ 22 ರಂದು ಒಂದು ವರ್ಷ ತುಂಬಲಿದೆ. ಈ ಕುಟುಂಬ ಇಂದು ಚಿರಂಜೀವಿ ಸರ್ಜಾ ಸವಿನೆನಪಿನಲ್ಲಿದೆ. ಇದನ್ನೂ ಓದಿ: ಗೊಂಬೆಗಳ ಮಧ್ಯೆ ಪುಟ್ಟ ಗೊಂಬೆಯಂತೆ ಕುಳಿತ ರಾಯನ್