ಕುಮಾರಸ್ವಾಮಿಯವರೇ, ರಾಮಮಂದಿರಕ್ಕೆ ನಿಮ್ಮ ಕೊಡುಗೆ ಏನು? ಆದರೂ, ಪೂಜೆಗೆ ಬನ್ನಿ: ಸಿ.ಟಿ ರವಿ ವ್ಯಂಗ್ಯ ಆಹ್ವಾನ

Public TV
2 Min Read
CT RAVI AND HDK

– ನೀವು ಮಸೀದಿ ಜಪ ಮಾಡುತ್ತಿದ್ರಿ

ಚಿಕ್ಕಮಗಳೂರು: ರಾಮ ಮಂದಿರ ನಿರ್ಮಾಣಕ್ಕೆ ಹಣ ಕೊಟ್ಟವರಿಗೆ ಲೆಕ್ಕ ಕೇಳುವ ಅಧಿಕಾರ ಇದೆ. ಹೆಚ್.ಡಿ ಕುಮಾರಸ್ವಾಮಿ ಅವರು ರಾಮಮಂದಿರಕ್ಕೆ ಎಷ್ಟು ಹಣ ಕೊಟ್ಟಿದ್ದಾರೆ ಎಂದು ಹೇಳಲಿ, ಆಮೇಲೆ ಲೆಕ್ಕ ಕೇಳಲಿ. ಕುಮಾರಸ್ವಾಮಿಯವರೇ, ರಾಮಮಂದಿರ ನಿರ್ಮಾಣಕ್ಕೆ ನಿಮ್ಮ ಕೊಡುಗೆ ಏನು? ಅದರೂ ನೀವು ಪೂಜೆಗೆ ಬನ್ನಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯ ಆಹ್ವಾನ ನೀಡಿದ್ದಾರೆ.

HDK 1

ನಗರದ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಹೆಚ್.ಡಿ ಕುಮಾರಸ್ವಾಮಿಯವರ ಹೇಳಿಕೆಗಳು ಪ್ರಚಾರದ ತೆವಲಿಗೆ ಕೊಡುತ್ತಿರುವ ಹೇಳಿಕೆಯಂತೆ ಇದೆ. ಕುಮಾರಸ್ವಾಮಿಯವರ ಹೇಳಿಕೆಗಳಲ್ಲಿ ಸ್ಪಷ್ಟತೆ ಇಲ್ಲ, ಉದ್ದೇಶಗಳಿಲ್ಲ. ನಾವು ಅಯೋಧ್ಯೆಗಾಗಿ ಹೋರಾಡುವಾಗ ನಿಮ್ಮ ಸಹಾನುಭೂತಿ ನಮ್ಮ ಪರ ಇತ್ತಾ. ನಮ್ಮ ಬೆಂಬಲಕ್ಕೆ ನೀವು ನಿಂತಿದ್ರಾ? ನಾವು ರಾಮಮಂದಿರ ಕಟ್ಟುತ್ತೇವೆ ಎಂದು ಹೇಳುವಾಗ ನೀವು ಮಂದಿರದ ಜಪ ಮಾಡುತ್ತಿದ್ರಾ? ನೀವು ಮಸೀದಿ ಜಪ ಮಾಡುತ್ತಿದ್ರಿ. ನಿಮಗೆ ಮಂದಿರದ ನೆನಪು ಬರುತ್ತಿರಲಿಲ್ಲ. ನಾವು ಮನೆ-ಮನೆಗೆ ಹೋಗಿ ರಾಮಮಂದಿರದ ವಿಷಯ ತಿಳಿಸುವಾಗ ನೀವು ಟೋಪಿ ಹಾಕಿಕೊಂಡು ನಮಾಜ್ ಮಾಡಲು ಹೋಗುತ್ತಿದ್ರಿ. ಈಗ ಇದ್ದಕ್ಕಿದ್ದಂತೆ ಮಂದಿರದ ನೆನಪಾಗಲು ಶುರುವಾಗಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಇಳಿಕೆ ಕಂಡ ಕೊರೊನಾ- 264 ಕೇಸ್, 10 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ

CT RAVI

ರಾಮ ಮಂದಿರ ನಿರ್ಮಾಣಕ್ಕೆ ಕೊಟ್ಟಿರುವ ಹಣವನ್ನು ದುರುಪಯೋಗ ಮಾಡಿಕೊಳ್ಳಲು ಅಲ್ಲಿರುವವರು ಕಳ್ಳರಲ್ಲ. ದೇಶ ಸೇವೆಗೋಸ್ಕರ ಕುಟುಂಬವನ್ನು ತ್ಯಜಿಸಿ ಕೆಲಸ ಮಾಡುತ್ತಿರುವ ಜನ ಅಲ್ಲಿರುವಂತದ್ದು, ರಾಮಮಂದಿರ ಚಳುವಳಿಗೆ ನಿಮ್ಮ ಪಾತ್ರ ಏನು. ಹೋರಾಟಕ್ಕೆ ಬಂದಿದ್ರಾ. ಕರಸೇವೆಗೆ ಬಂದಿದ್ರಾ? ಯಾತ್ರೆಯಲ್ಲಿ ಪಾಲ್ಗೊಂಡಿದ್ರಾ? ಅಥವಾ ಇಟ್ಟಿಗೆ ಪೂಜೆ ಯಾತ್ರೆಯಲ್ಲಿ ಪಾಲ್ಗೊಂಡಿದ್ರಾ? ಏನು ನಿಮ್ಮ ಪಾತ್ರ? ಪಾತ್ರ ಇರುವವರಿಗೆ ಪ್ರಶ್ನಿಸುವ ಹಕ್ಕು ಇದೆ. ನಿಮ್ಮ ಪಾತ್ರ ಏನು? ನಿಮ್ಮ ಪಾತ್ರ ಆವಾಗ ರಾಮಮಂದಿರದ ವಿರುದ್ಧ. ಈಗ ಅಪನಂಬಿಕೆಯನ್ನು ಹುಟ್ಟುಹಾಕುವ ಷಡ್ಯಂತ್ರ. ನೀವು ಬಹಳ ವರ್ಷ ಕೇಳುತ್ತಿದ್ರಿ ಮಂದಿರ ಕಟ್ಟಲೇ ಇಲ್ಲ, ಇದೆಲ್ಲಾ ಬೋಗಸ್ ಎಂದು. ಯಾಕೆ ಈಗ ರಾಮಮಂದಿರ ನಿರ್ಮಾಣಕ್ಕೆ ತಳಪಾಯ ಆಗುತ್ತಿರುವುದನ್ನು ನೋಡಿ ಸಂಕಟ ಆಗುತ್ತಿದೆಯಾ? ಸಂಕಟ ಪಡಬೇಡಿ ಒಳ್ಳೆಯ ರಾಮಮಂದಿರ ನಿರ್ಮಾಣ ಆಗುತ್ತೆ, ಆಗ ಪೂಜೆಗೆ ಬನ್ನಿ ಎಂದಿದ್ದಾರೆ. ಇದನ್ನೂ ಓದಿ: ದೇಶದ ಎಲ್ಲಾ ಯೂನಿವರ್ಸಿಟಿಯಲ್ಲಿ RSS ಕಾರ್ಯಕರ್ತರನ್ನ ಸಿಂಡಿಕೇಟ್ ಮಾಡ್ಕೊಂಡಿದ್ದಾರೆ: ಹೆಚ್‍ಡಿಕೆ

Share This Article
Leave a Comment

Leave a Reply

Your email address will not be published. Required fields are marked *