– ಕಂಪ್ಲೆಂಟ್ ಕೊಟ್ಟ ಲಾರಿ ಮಾಲೀಕನೇ ಕಳ್ಳ
ಚಿಕ್ಕಬಳ್ಳಾಪುರ: 12 ಲಕ್ಷ ಮೌಲ್ಯದ ಅಕ್ಕಿ, ಲಾರಿಯ ಫೈನಾನ್ಸ್ ಹಣ ವಂಚನೆಗೆ ಸಂಚು ಮಾಡಿದ್ದ ಮಾಲೀಕನನ್ನು ಪೊಲೀಸರು ಬಂಧಿಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ನಡೆದಿದೆ.
ಮಾಲೀಕನೇ ಕಳ್ಳ!
ಲಾರಿ ಮಾಲೀಕ ಉಬ್ಬಾಗಿಡ್ಡಯ್ಯ ಹಾಗೂ ಪ್ರದೀಪ್ ಬಂಧನಕೊಳ್ಳಗಾದವರು. ಆಕ್ಟೋಬರ್ 27 ರಂದು ಲಾರಿ ಮಾಲೀಕ ಉಬ್ಬಾಗಿಡ್ಡಯ್ಯ ಲಾರಿ ಕಳುವಾಗಿದೆ ಎಂದು ಬಾಗೇಪಲ್ಲಿ ಪೊಲೀಸರಿಗೆ ದೂರು ನೀಡಿದ್ದರು. ಉಬ್ಬಾಗಿಡ್ಡಯ್ಯ ಅವರು ಆಂಧ್ರ ಮೂಲದ ಜೈ ಮಾರುತಿ ಟ್ರಾನ್ಸ್ ಪೋರ್ಟ್ ಮಾಲೀಕ. ಇದನ್ನೂ ಓದಿ: ಕೊರೊನಾ ನಡುವೆ ಸಾವಿರಾರು ಬೆಂಬಲಿಗರೊಂದಿಗೆ ಎಂಎಲ್‍ಸಿ ಅದ್ದೂರಿ ಹುಟ್ಟುಹಬ್ಬ
ಇವರು ರಾಯಚೂರಿನಿಂದ ಬೆಂಗಳೂರಿಗೆ 30 ಟನ್ ಅಕ್ಕಿ ಸಾಗಾಟ ಮಾಡುತ್ತಿದ್ದರು. ಸಾಗಾಟದ ವೇಳೆ ಬಾಗೇಪಲ್ಲಿ ಸುಂಕಲಮ್ಮ ದೇಗುಲ ಬಳಿ ಲಾರಿ ಕಳವಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಅಕ್ಕಿ ಸಮೇತ ಲಾರಿ ಕಳವಾಗಿದೆ ಎಂದು ನಾಟಕವಾಡಿ, ಕಂಪ್ಲೇಟ್ ಕೊಟ್ಟಿದ್ದರು. ಈ ರೀತಿ ನಾಟಕ ಮಾಡಿ ಗಿಡ್ಡಯ್ಯ ಅಕ್ಕಿಯನ್ನು ಆಂಧ್ರದಲ್ಲಿ ಅವಿಸಿಟ್ಟಿದ್ದು, ಲಾರಿಯನ್ನು ತಮಿಳುನಾಡಿನ ಸೇಲಂ ನಲ್ಲಿ ಗುಜರಿಗೆ ಮಾರಿ ಹಾಕಿದ್ದಾರೆ.
ಸದ್ಯ ಪೊಲೀಸರು ಗಿಡ್ಡಯ್ಯನ ಖತರ್ನಾಕ್ ಪ್ಲಾನ್ ಬಯಲು ಮಾಡಿದ್ದು, ಇವರು 12 ಲಕ್ಷ ಮೌಲ್ಯದ ಅಕ್ಕಿ ಹಾಗೂ ಲಾರಿಯ ಫೈನಾನ್ಸ್ ಹಣ ವಂಚನೆಗೆ ಸಂಚು ಹಾಕಿರುವುದನ್ನು ಬೆಳಕಿಗೆ ತಂದಿದ್ದಾರೆ. ಇದನ್ನೂ ಓದಿ: ರಾಜ್ಯದ ಶಾಖೋತ್ಪನ್ನ ಕೇಂದ್ರಗಳಲ್ಲಿ ಕಲ್ಲಿದ್ದಲು ಕೊರತೆ – ವಿದ್ಯುತ್ ಅಭಾವದ ಆತಂಕ