ಏಷ್ಯಾದ ಹಳೆಯ ರಾಷ್ಟ್ರೀಯ ಉದ್ಯಾನವನಕ್ಕೆ ರಾಮಗಂಗಾ ಹೆಸರಿಡುವಂತೆ ಒತ್ತಾಯ

Public TV
1 Min Read
jim corbett national park

ಡೆಹ್ರಾಡೂನ್: ಉತ್ತರಾಖಂಡದ ವಿಶ್ವವಿಖ್ಯಾತ ಹುಲಿ ಸಂರಕ್ಷಿತ ಪ್ರದೇಶವಾದ ಎಡ್ವರ್ಡ್ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನಕ್ಕೆ ರಾಮಗಂಗಾ ರಾಷ್ಟ್ರೀಯ ಉದ್ಯಾನವನ ಎಂದು ಮರು ನಾಮಕರಣ ಮಾಡುವಂತೆ ಕೇಂದ್ರ ಅರಣ್ಯ ಮತ್ತು ಪರಿಸರ ಖಾತೆ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಒತ್ತಾಯಿಸಿದ್ದಾರೆ.

ಅಶ್ವಿನಿ ಕುಮಾರ್ ಚೌಬೆ ಅವರು ಏಷ್ಯಾದ ಅತ್ಯಂತ ಹಳೆಯ ರಾಷ್ಟ್ರೀಯ ಉದ್ಯಾನವನದ ಹೆಸರನ್ನು ಬದಲಾವಣೆಗೊಳಿಸುತ್ತಿರುವ ಬಗ್ಗೆ ಸುಳಿವು ನೀಡಿದ್ದು, ಈ ಉದ್ಯಾನವನ ಸುಮಾರು 521 ಚದರ ಕಿಲೋಮೀಟರ್‍ಗಳಷ್ಟು ವ್ಯಾಪಿಸಿದೆ. ಇದನ್ನು 1930 ರಲ್ಲಿ ಹೈಲಿ ರಾಷ್ಟ್ರೀಯ ಉದ್ಯಾನವನ ಎಂಬ ಹೆಸರಲ್ಲಿ ಸ್ಥಾಪಿಸಲಾಯಿತು. 1952 ರಲ್ಲಿ ಉದ್ಯಾನವನ್ನು ರಾಮಗಂಗಾ ರಾಷ್ಟ್ರೀಯ ಉದ್ಯಾನವನ ಎಂದು ಮರುನಾಮಕರಣ ಮಾಡಲಾಯಿತು. ಆದರೆ, 1956 ರಲ್ಲಿ ಇದನ್ನು ಎಡ್ವರ್ಡ್ ಜಿಮ್ ಕಾರ್ಬೆಟ್ ಅವರ ಹೆಸರನ್ನಿಡಲಾಯಿತು. ಇದನ್ನೂ ಓದಿ:  ಶಾರೂಖ್ ಮಗನ ಅರೆಸ್ಟ್ ಹಿಂದೆ ಬಿಜೆಪಿ ಉಪಾಧ್ಯಕ್ಷ – NCB ಅಧಿಕಾರಿಗಳಿಂದ್ಲೇ ಪಿತೂರಿ ಆರೋಪ

jim corbett national park

ಆದರೀಗಾ ಮತ್ತೆ ಈ ಉದ್ಯಾನವನಕ್ಕೆ ರಾಮಗಂಗಾ ಹೆಸರಿಡುತ್ತಿರುವುದರ ಬಗ್ಗೆ ಅಶ್ವಿನಿ ಕುಮಾರ್ ಚೌಬೆ ತಿಳಿಸಿದ್ದಾರೆ. ಇತ್ತೀಚಿಗೆ ಉದ್ಯಾನವನ ಪ್ರವಾಸದ ಮ್ಯೂಸಿಯಂ ಅತಿಥಿ ಪುಸ್ತಕದಲ್ಲಿ ಎಡ್ವರ್ಡ್ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಹೆಸರನ್ನು ರಾಮಗಂಗಾ ರಾಷ್ಟ್ರೀಯ ಉದ್ಯಾನವನ ಎಂದು ಬದಲಾಯಿಸಬೇಕು ಎಂದು ಬರೆದಿದ್ದಾರೆ. ಇದನ್ನೂ ಓದಿ:  ಪಾಕಿಸ್ತಾನದಲ್ಲಿ ಭೂಕಂಪ – 20 ಮಂದಿ ಸಾವು

jim corbett national park

ಈ ಕುರಿತಂತೆ ರಾಷ್ಟ್ರೀಯ ಉದ್ಯಾನವನದ ನಿರ್ದೇಶಕ ರಾಹುಲ್ ಬುಧವಾರ ಹೇಳಿಕೆ ನೀಡಿದ್ದು, ಈ ಉದ್ಯಾನವನದ ಹೆಸರನ್ನು ಮೊದಲು ಕರೆಯುತ್ತಿದ್ದಂತೆ ರಾಮಗಂಗಾ ರಾಷ್ಟ್ರೀಯ ಉದ್ಯಾನ ಎಂದು ಮರುಸ್ಥಾಪಿಸಬೇಕು ಎಂದು ರಾಜ್ಯ ಸಚಿವಾಲಯ ಹೇಳಿದೆ. ಇದನ್ನೂ ಓದಿ:  ಕೊರೊನಾ ನಡುವೆ ಸಾವಿರಾರು ಬೆಂಬಲಿಗರೊಂದಿಗೆ ಎಂಎಲ್‍ಸಿ ಅದ್ದೂರಿ ಹುಟ್ಟುಹಬ್ಬ

ಸದ್ಯ ಈ ವಿಚಾರವಾಗಿ ವನ್ಯಜೀವಿ ಪ್ರೇಮಿಗಳು ಅಸಮಾಧಾನ ವ್ಯಕ್ತಪಡಿಸಿದ್ದು, ವನ್ಯಜೀವಿ ಪ್ರೇಮಿ ಪ್ರಕಾಶ್ ಕಿಮೋತಿ, ನಾವು ಹೆಸರನ್ನು ಬದಲಾಯಿಸುವುದಕ್ಕಿಂತ ನಮ್ಮ ಪರಂಪರೆಯನ್ನು ಉಳಿಸಿಕೊಳ್ಳುವತ್ತ ಹೆಚ್ಚು ಗಮನ ಹರಿಸಬೇಕು ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *