WhatsApp, Facebook, ಇನ್‌ಸ್ಟಾಗ್ರಾಮ್ ಸೇವೆಯಲ್ಲಿ ವ್ಯತ್ಯಯ – ಮೆಸೇಜ್‌ ಹೋಗ್ತಿಲ್ಲ, ಬರ್ತಿಲ್ಲ..!

Public TV
2 Min Read
FB, Instagram, Whatsapp

ಬೆಂಗಳೂರು: ಪ್ರಸಿದ್ಧ ಸಾಮಾಜಿಕ ಜಾಲತಾಣಗಳಾದ ವಾಟ್ಸಪ್ (WhatsApp), ಇನ್‌ಸ್ಟಾಗ್ರಾಮ್ (Instagram) ಮತ್ತು ಫೇಸ್‌ಬುಕ್ (Facebook) ಸೇವೆಗಳಲ್ಲಿ ವ್ಯತ್ಯಯವಾಗಿದೆ. ಭಾರತೀಯ ಕಾಲಮಾನ ರಾತ್ರಿ 9 ಗಂಟೆಯ ಬಳಿಕ ಈ ಮೂರು ಜಾಲತಾಣಗಳು ಕಾರ್ಯನಿರ್ವಹಿಸುತ್ತಿಲ್ಲ. ವಿಶ್ವದ ಎಲ್ಲ ಕಡೆಯ ಬಳಕೆದಾರರಿಗೂ ಈ ತಾಂತ್ರಿಕ ಸಮಸ್ಯೆಯ ಬಿಸಿ ತಟ್ಟಿದೆ.

ಇದರಿಂದಾಗಿ ವಾಟ್ಸಪ್‌ನಿಂದ ಯಾವುದೇ ಮೆಸೇಜ್‌ ಸೆಂಡ್‌ ಆಗುತ್ತಿಲ್ಲ ಜೊತೆಗೆ ಬೇರೆಯವರು ಕಳಿಸಿದ ಮೆಸೇಜ್‌ ಕೂಡಾ ರಿಸೀವ್‌ ಆಗುತ್ತಿಲ್ಲ. ಇನ್‌ಸ್ಟಾಗ್ರಾಂನಲ್ಲಿ couldn’t refresh the feed ಎಂಬ ಸಂದೇಶ ಬಳಕೆದಾರರಿಗೆ ಕಾಣಿಸುತ್ತಿತ್ತು. Facebook ಪೇಜ್‌ ಲೋಡ್‌ ಆಗುತ್ತಿರಲಿಲ್ಲ.

Fb whatsapp down 1

Facebook, WhatsApp ಹಾಗೂ Instagram ಮೂರು ಆಪ್‌ಗಳು ಫೇಸ್‌ಬುಕ್ ಒಡೆತನದಲ್ಲಿವೆ. ಈ ಜಾಲತಾಣಗಳು ಡೌನ್‌ ಆಗುತ್ತಿದ್ದಂತೆಯೇ ಬಳಕೆದಾರರು ಟ್ವಿಟ್ಟರ್‌ನಲ್ಲಿ ತಾವು ಎದುರಿಸುತ್ತಿರುವ ತೊಂದರೆಗಳನ್ನು ಟ್ವೀಟ್‌ ಮಾಡಿ ಹೇಳಿಕೊಳ್ಳಲಾರಂಭಿಸಿದರು.

Fb whatsapp down 4

ಇದರಲ್ಲಿ ಕೆಲವು ಟ್ವೀಟ್‌ಗಳು ಸೀರಿಯಸ್‌ ಸ್ವಭಾವದ್ದಾಗಿದ್ದರೆ, ಇನ್ನು ಕೆಲವು ಫೇಸ್‌ಬುಕ್‌ ಸಂಸ್ಥೆಯನ್ನು ಕಾಲೆಳೆಯುವಂತಿದ್ದವು.

Fb whatsapp down 3

ಅಷ್ಟರಲ್ಲಿ ಫೇಸ್‌ಬುಕ್‌ ಸಂಸ್ಥೆ ತನ್ನ Twitter ಖಾತೆಯ ಮೂಲಕ ಸೇವೆ ವ್ಯತ್ಯಯವಾಗಿದ್ದನ್ನು ಖಚಿತಪಡಿಸಿತು. ಅಲ್ಲದೇ ಬಳಕೆದಾರರ ಕ್ಷಮೆ ಯಾಚಿಸಿತು. ‘ನಮ್ಮ App & Productಗಳ ಸೇವೆ ಪಡೆಯಲು ಕೆಲವು ಬಳಕೆದಾರರಿಗೆ ಸಮಸ್ಯೆಯಾಗುತ್ತಿದೆ ಎಂಬುದು ನಮ್ಮ ಅರಿವಿಗೆ ಬಂದಿದೆ. ನಾವು ಸಾಧ್ಯವಾದಷ್ಟು ಬೇಗ ಈ ಸಮಸ್ಯೆ ಬಗೆಹರಿಸುವ ಕೆಲಸದಲ್ಲಿ ನಿರತವಾಗಿದ್ದೇವೆ. ನಿಮಗಾಗುತ್ತಿರುವ ತೊಂದರೆಗೆ ನಾವು ಕ್ಷಮೆ ಯಾಚಿಸುತ್ತೇವೆ’ ಎಂದು Facebook ಅಧಿಕೃತವಾಗಿ ಟ್ವೀಟ್‌ ಮಾಡಿತು.

ಇದೇ ವೇಳೆ WhatsApp ಕೂಡಾ ತನ್ನ ಟ್ವಿಟ್ಟರ್‌ ಖಾತೆಯಲ್ಲಿ, ಕೆಲವು ಬಳಕೆದಾರರಿಗೆ ವಾಟ್ಸಪ್‌ ಬಳಸಲು ತೊಂದರೆಯಾಗುತ್ತಿರುವ ವಿಚಾರ ನಮ್ಮ ಗಮನಕ್ಕೆ ಬಂದಿದೆ. ನಾವು ಈ ಸಮಸ್ಯೆಯನ್ನು ಬಗೆಹರಿಸುವ ಕಾರ್ಯದಲ್ಲಿ ನಿರತರಾಗಿದ್ದೇವೆ. ಈ ಸಮಸ್ಯೆ ಬಗೆಹರಿಯುತ್ತಿರುವಂತೆಯೇ ನಾವು ನಿಮಗೆ ಅಪ್ಡೇಟ್‌ ಮಾಡುತ್ತೇವೆ. ನಿಮ್ಮ ತಾಳ್ಮೆಗೆ ಧನ್ಯವಾದಗಳು ಎಂದು ಬರೆದುಕೊಂಡಿದೆ. ಇದನ್ನೂ ಓದಿ: ಕ್ಯಾಚ್ ಬಿಟ್ಟು ಮ್ಯಾಚ್ ಸೋತ ಚೆನ್ನೈ – ಡೆಲ್ಲಿಗೆ 3 ವಿಕೆಟ್ ರೋಚಕ ಜಯ 

ವಾಟ್ಸಪ್‌ ಈ ಸಮಸ್ಯೆ ಎದುರಿಸುತ್ತಿರುವುದು ಇದೇ ಮೊದಲಲ್ಲ. ಇದೇ ವರ್ಷ ಮಾರ್ಚ್‌ ತಿಂಗಳಲ್ಲಿ ವಾಟ್ಸಪ ಡೌನ್‌ ಆಗಿತ್ತು.

Share This Article
Leave a Comment

Leave a Reply

Your email address will not be published. Required fields are marked *