ಸರ್ಕಾರಿ ನೌಕರರ ವಿರುದ್ಧ ಅವಾಚ್ಯ ಪದ ಬಳಕೆ – ರಮೇಶ್ ಕುಮಾರ್ ವಿಷಾದ ವ್ಯಕ್ತಪಡಿಸಲಿ

Public TV
2 Min Read
govt sivamogga

– ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಆಗ್ರಹ

ಶಿವಮೊಗ್ಗ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಿರಿಯ, ಸಜ್ಜನ ರಾಜಕಾರಣಿಯಾಗಿದ್ದು ಸರ್ಕಾರಿ ನೌಕರರ ಬಗ್ಗೆ ಅವಾಚ್ಯ ಪದ ಬಳಕೆ ಮಾಡಿರುವುದು ಅವರಿಗೆ ಶೋಭೆ ತರುವುದಿಲ್ಲ. ರಮೇಶ್ ಕುಮಾರ್ ಅವರು ಈ ಕೂಡಲೇ ವಿಷಾದ ವ್ಯಕ್ತಪಡಿಸಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಆಗ್ರಹಿಸಿದ್ದಾರೆ.

ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ರಮೇಶ್ ಕುಮಾರ್ ಅವರು ಈ ಹಿಂದೆ ಪೊಲೀಸರ ಕರ್ತವ್ಯದ ಬಗ್ಗೆ ಸಾರ್ವಜನಿಕವಾಗಿ ತಮ್ಮ ನಾಲಿಗೆ ಹರಿಬಿಟ್ಟಿದ್ದರು. ಇದೀಗ ಕಂದಾಯ ಇಲಾಖೆಯ ನೌಕರನ ವಿರುದ್ಧ ಅವಾಚ್ಯ ಪದ ಬಳಕೆ ಮಾಡುವ ಮೂಲಕ ಅವರ ಘನತೆ, ಗೌರವವನ್ನು ಅವರೇ ಕಡಿಮೆ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಜಪಾನ್ ನೂತನ ಪ್ರಧಾನಿಗೆ ಮೋದಿ ಅಭಿನಂದನೆ

ramesh shivamogga

ಸರ್ಕಾರಿ ನೌಕರರು ಸದಾ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಕೋವಿಡ್ ಸಮಯದಲ್ಲಿ, ಪ್ರವಾಹದ ಸಂದರ್ಭದಲ್ಲಿ ಕುಟುಂಬದವರಿಂದ ದೂರ ಉಳಿದು ಕೆಲಸ ಮಾಡಿದ್ದಾರೆ. ಕೋವಿಡ್ ನಿಯಂತ್ರಣಕ್ಕೆ ಬರಲು ಶ್ರಮ ಹಾಕಿದ್ದಾರೆ. ಎಲ್ಲ ಕ್ಷೇತ್ರದಲ್ಲೂ ಸಮಸ್ಯೆ ಇದೆ. ಆದರೆ ಸಮಸ್ಯೆ ಇದೆ ಎಂದು ಸಾರ್ವಜನಿಕವಾಗಿ ಸರ್ಕಾರಿ ನೌಕರರ ಬಗ್ಗೆ ಅವಾಚ್ಯ ಪದ ಬಳಕೆ ಸರಿಯಲ್ಲ. ಇಂತಹ ಪದ ಬಳಕೆಯಿಂದ ತಮ್ಮ ಗೌರವ ಘನತೆಯನ್ನು ಕಡಿಮೆ ಮಾಡಿಕೊಳ್ಳುತ್ತಿದ್ದಾರೆ ಎಂದರು.

ರಾಜ್ಯದಲ್ಲಿ ಲಕ್ಷಾಂತರ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಅದರ ನಡುವೆಯೂ ಸಾರ್ವಜನಿಕರಿಗೆ ಅನುಕೂಲ ಆಗಲಿ ಎಂಬ ಕಾರಣದಿಂದಾಗಿ ಇರುವ ಸಿಬ್ಬಂದಿಯೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೀಗಿರುವಾಗ ಏನೇ ಸಮಸ್ಯೆ ಇದ್ದರೂ ಅದನ್ನು ನಾಲ್ಕು ಗೋಡೆ ಮಧ್ಯೆ ಕುಳಿತು ಚರ್ಚಿಸಬಹುದಿತ್ತು. ನೌಕರರ ಸಂಘದವರು ಬಂದರೆ ಸೀಮೆ ಎಣ್ಣೆ ಹಾಕಿ ಸುಟ್ಟು ಹಾಕುತ್ತೀವಿ ಎಂದು ಕೂಡ ಮಾತನಾಡಿದ್ದಾರೆ. ಅವರು ನೌಕರರು ಉದ್ವೇಗಗೊಳ್ಳುವ ರೀತಿ ಮಾತನಾಡಿದ್ದಾರೆ. ನಿಮ್ಮ ವಿರುದ್ಧ ಪ್ರತಿಭಟನೆ ಮಾಡುವುದು ದೊಡ್ಡ ವಿಷಯವಲ್ಲ. ಆದರೆ ಆ ರೀತಿ ಮಾಡಲು ನಾವು ಹೋಗುವುದಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ದಿಢೀರ್ ಎರಡು ಹೋಳಾಗಿ ಧರೆಗುರುಳಿದ ನೂರಾರು ವರ್ಷದ ಅರಳಿಮರ

ಬಹಳಷ್ಟು ಮಂದಿ ಶಾಸಕರು ನೌಕರರ ಜೊತೆ ಈ ರೀತಿ ನಡೆದುಕೊಳ್ಳುತ್ತಿದ್ದಾರೆ. ದಯಮಾಡಿ ಸರ್ಕಾರಿ ನೌಕರರನ್ನು ಬೈಯುವ ಮೊದಲು ಮತ್ತೊಮ್ಮೆ ಯೋಚನೆ ಮಾಡಿ. ನೌಕರ ಸರಿ ಇಲ್ಲ ಅಂದರೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರುವ ಪ್ರಯತ್ನ ಮಾಡಿ. ವರ್ಗಾವಣೆ ಮಾಡಿಸಿ, ಇಲ್ಲದಿದ್ದರೆ ಕಾನೂನು ಚೌಕಟ್ಟಿನಲ್ಲಿ ಕ್ರಮಕೈಗೊಳ್ಳಲು ಅವಕಾಶ ಇದೆ. ಆ ರೀತಿಯ ಕೆಲಸ ಮಾಡಿ. ಅದನ್ನು ಬಿಟ್ಟು ಅವಾಚ್ಯ ಪದ ಬಳಕೆ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *