ಚೀನಾ+ಪಾಕಿಸ್ತಾನ+ಮಿ.56 ಇಂಚು=ಚೀನಾ ಯೋಧರ ಆಕ್ರಮಣ ಹೆಚ್ಚಳ

Public TV
2 Min Read
modi rahul

ನವದೆಹಲಿ: ಲಡಾಖ್ ಮತ್ತು ಉತ್ತರಾಖಂಡದಲ್ಲಿ ಚೀನಾದ ಆಕ್ರಮಣದ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಚೀನಾ ಸೇನಾ ಪಡೆ ಲಡಾಖ್‍ನಲ್ಲಿ ನೀಡುತ್ತಿರುವ ಉಪಟಳದ ವಿಚಾರ ಇಟ್ಟುಕೊಂಡು ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಕಿಡಿಕಾರುತ್ತಿರುವುದು ಇದೇ ಮೊದಲೇನೂ ಇಲ್ಲ. ಹಿಂದೆ ಚೀನಾ ಸೈನಿಕರ ದಾಳಿಗೆ ಭಾರತದ ಸುಮಾರು 20 ಯೋಧರು ಮಡಿದಾಗಲೂ ಕಾಂಗ್ರೆಸ್‍ನ ರಾಹುಲ್ ಗಾಂಧಿ ಸೇರಿ ಹಲವು ಮುಖಂಡರು ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದರು. ಇದನ್ನೂ ಓದಿ: ದೃಷ್ಟಿ ಹೀನ ಶಿಕ್ಷಕನ ಪಾಠ – ನೃತ್ಯ ಮಾಡಿ ಅವಮಾನ, ವಿದ್ಯಾರ್ಥಿಗಳಿಗೆ ಗೇಟ್‌ಪಾಸ್‌

ಚೀನಾ+ಪಾಕಿಸ್ತಾನ+ಮಿ.56 ಇಂಚು= ಉತ್ತರ ಭಾರತದಲ್ಲಿ ಚೀನಾ ಯೋಧರ ಆಕ್ರಮಣ ಹೆಚ್ಚಳ ಎಂಬ ಉತ್ತರ ಬರುತ್ತದೆ ಎಂದು ಟ್ವೀಟ್ ಮಾಡಿದ್ದಾರೆ. ಲಡಾಖ್ ಮತ್ತು ಉತ್ತರಾಖಂಡವನ್ನು ಉಲ್ಲೇಖಿಸಿ ಹಿಂದಿಯಲ್ಲಿ ಟ್ವೀಟ್ ಮಾಡಿ ಕೇಂದ್ರ ಸರ್ಕಾರದ ವಿರುದ್ಧವಾಗಿ ವಾಗ್ದಾಳಿ ಮಾಡಿದ್ದಾರೆ.

ಆಗಸ್ಟ್ 30ರಂದು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ(ಪಿಎಲ್‌ಎ)ಯ ಸುಮಾರು 100ಕ್ಕೂ ಸೈನಿಕರು ಉತ್ತರಾಖಂಡದ ಬಾರಹೋಟಿ ಸೆಕ್ಟರ್‌ನಲ್ಲಿ ವಾಸ್ತವ ನಿಯಂತ್ರಣ ರೇಖೆಯನ್ನು(ಎಲ್‌ಎಸಿ) ಉಲ್ಲಂಘಿಸಿದ್ದಾರೆ. ಕೆಲವು ಗಂಟೆಗಳ ಕಾಲ ಕಳೆದ ನಂತರ ಚೀನಾದ ಸೈನಿಕರು ಈ ಪ್ರದೇಶದಿಂದ ಮರಳಿದರು ಎಂದು ಸ್ಥಳೀಯರು ಹೇಳಿದ್ದಾರೆ. ಚೀನಾದ ಅತಿಕ್ರಮಣದ ಬಗ್ಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಇಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ನೆರೆಮನೆಯ ಹೆಣ್ಣು ನಾಯಿಯನ್ನು ರೇಪ್ ಮಾಡಿದ 67ರ ವೃದ್ಧ

Rahul Gandhi PM Modi

ಲಡಾಖ್ ಮತ್ತು ಉತ್ತರಾಖಂಡ್ ಗಡಿಗಳಲ್ಲಿ ಚೀನಾ ಸೇನಾ ಪಡೆಯ ನಿಯೋಜನೆ ಪ್ರಮಾಣ ಹೆಚ್ಚುತ್ತಿದೆ. ಪೂರ್ವ ಮತ್ತು ಉತ್ತರ ಲಡಾಖ್‍ನಲ್ಲಿ ಚೀನಾದ ಸೈನಿಕರ ಸಂಖ್ಯೆ ಹೆಚ್ಚುತ್ತಿದ್ದು, ಅವರನ್ನು ಎದುರಿಸಲು ಭಾರತ ಕೂಡ ಎಲ್ಲ ರೀತಿಯ ಸಿದ್ಧತೆಯಲ್ಲಿ ತೊಡಗಿದೆ. ನಿನ್ನೆ ಈ ಬಗ್ಗೆ ಮಾತನಾಡಿದ್ದ ಸೇನಾ ಮುಖ್ಯಸ್ಥ ನರವಾನೆ ಕೂಡ, ತಾವು ಯಾವುದೇ ಸಂದರ್ಭ ಬಂದರೂ ಎದುರಿಸಲು ಸಜ್ಜಾಗಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಆದರೆ ಈ ಮಧ್ಯೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿ ಕೇಂದ್ರ ಸರ್ಕಾರ ಪ್ರಧಾನಿ ಮೋದಿಯನ್ನು ವ್ಯಂಗ್ಯಮಾಡಿದ್ದಾರೆ.

rahul

ಪೂರ್ವ ಲಡಾಖ್‍ನಲ್ಲಿ ಕಳೆದ ವರ್ಷ ಮೇ 5ರಿಂದಲೂ ಭಾರತ-ಚೀನಾ ಸೈನಿಕರ ನಡುವೆ ಸಂಘರ್ಷ ನಡೆಯುತ್ತಲೇ ಇದೆ. ಕಳೆದ ಜೂನ್‍ನಲ್ಲಿ ಗಲ್ವಾನ್ ಕಣಿವೆಯಲ್ಲಿ ಚೀನಾ ಸೈನಿಕರ ದಾಳಿಗೆ ಭಾರತದ 20 ಯೋಧರು ಹುತಾತ್ಮರಾಗಿದ್ದರು. ಅಂದಿನಿಂದಲೂ ಅಲ್ಲಿ ಆಗಾಗ ಉದ್ವಿಗ್ನ ಪರಿಸ್ಥಿತಿ ಉಂಟಾಗುತ್ತಿದೆ. ಎರಡೂ ದೇಶಗಳು ತಮ್ಮ ಮಿಲಿಟರಿ ಪ್ರಾಬಲ್ಯ ಹೆಚ್ಚಿಸುತ್ತಿವೆ. ಅದರಾಚೆ ಹಲವು ಸುತ್ತಿನ ರಾಜತಾಂತ್ರಿಕ, ಮಿಲಿಟರಿ ಹಂತದ ಮಾತುಕತೆಗಳೂ ಭಾರತ-ಚೀನಾ ಮಧ್ಯೆ ನಡೆದಿದೆ. ಆದರೆ ಚೀನಾ ಮತ್ತೆಮತ್ತೆ ಅಲ್ಲಿ ತನ್ನ ಉಪಟಳ ಮುಂದುವರಿಸಿದೆ. ಭಾರತ ಮತ್ತು ಚೀನಾ ಸೇನಾಪಡೆಗಳ ನಡುವಿನ ಹಿಂಸಾತ್ಮಕ ಘರ್ಷಣೆಯ ನಂತರ ಗಡಿ ಬಿಕ್ಕಟ್ಟು ಉಲ್ಬಣಗೊಂಡಿದೆ.

Share This Article
Leave a Comment

Leave a Reply

Your email address will not be published. Required fields are marked *