ಸಿದ್ದರಾಮಯ್ಯನ ಕಾಲಿಗೆ ಹಗ್ಗ ಕಟ್ಟಿ ಎಳೆದುಕೊಂಡು ಹೋಗ್ತಿದ್ರು: ಸದಾನಂದಗೌಡ ತಿರುಗೇಟು

Public TV
2 Min Read
DV Sadananda Gowda Chikkaballapur 1

ಚಿಕ್ಕಬಳ್ಳಾಪುರ: ಬಿಜೆಪಿಯದ್ದು ತಾಲಿಬಾನ್ ಸಂಸ್ಕೃತಿ ಅಂತ ಕಿಡಿಕಾರಿರುವ ಮಾಜಿ ಸಿಎಂ ಸಿದ್ದರಾಮಯ್ಯನವರ ಹೇಳಿಕೆಗೆ ಚಿಕ್ಕಬಳ್ಳಾಪುರದಲ್ಲಿ ಮಾಜಿ ಸಿಎಂ ಸದಾನಂದಗೌಡ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯನವರಿಗೆ ಪೂರ್ತಿ ತಲೆ ಕೆಟ್ಟಿದೆ. ರಾಜಕಾರಣದಲ್ಲಿ ಸ್ವಲ್ಪ ಕೆಟ್ಟರು ಪರವಾಗಿಲ್ಲ. ಬಿಜೆಪಿಯವರು ತಾಲಿಬಾನ್‍ಗಳು ಆಗಿದ್ದರೆ, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಕಾರಿನಲ್ಲಿ ಓಡಾಡಲು ಸಾಧ್ಯವಾಗುತ್ತಿತ್ತೇ? ಅವರ ಕಾಲಿಗೆ ಹಗ್ಗ ಕಟ್ಟಿ ಬೀದಿಯಲ್ಲಿ ಎಳೆದಾಡಿಕೊಂಡು ಹೋಗುತ್ತಿದ್ದರು ಅಂತ ಖಾರವಾಗಿ ಸಿದ್ದರಮಯ್ಯನವರಿಗೆ ತಿರುಗೇಟು ನೀಡಿದ್ದಾರೆ.


ಚಿಕ್ಕಬಳ್ಳಾಪುರ ತಾಲೂಕಿನ ಗೊಲ್ಲಹಳ್ಳಿ ಬಳಿ ಸಿರಿ ಅಕ್ವಾ ಕಲ್ಚರ್ ಫಾರಂಗೆ ಭೇಟಿ ನೀಡಿ ಮಾತನಾಡಿ ಅವರು, ಸಿದ್ದರಾಮಯ್ಯನವರು ಅರ್ಥ ಮಾಡಿಕೊಳ್ಳಬೇಕು. ಬಾಯಿಗೆ ಬಂದ ಹಾಗೆ ಮಾತನಾಡಬಾರದು. ಬಿಜೆಪಿಯವರ ಪ್ಯಾಂಟ್ ಲೂಸ್ ಆಗಿದೆ ಅನ್ನೋ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಾರದ್ದು ಏನೇನೋ ಲೂಸ್ ಆಗಿದಿಯೋ ನನಗೆ ಗೊತ್ತಿಲ್ಲ, ಆದರೆ ಸಿದ್ದರಾಮಯ್ಯನವರ ತಲೆ ಮಾತ್ರ ಲೂಸ್ ಆಗಿದೆ ಎಂದು ವಾಗ್ದಾಳಿ ಮಾಡಿದ್ದಾರೆ.

ಚುನಾವಣೆ ಬಂದಾಗ ಮಾತ್ರ ಕಾಂಗ್ರೆಸ್‍ನವರಿಗೆ ಅಹಿಂದ ಹೋರಾಟ ಮಾಡ್ತಾರೆ. ಬಾಯಿಗೆ ಬಂದ ಹಾಗೆ ಮಾತಾಡೋದು ಅವರ ಯೋಜನೆಗಳನ್ನ ಕಾರ್ಯಗತ ಮಾಡಲು ಮುಂದಾಗುತ್ತಾರೆ ಅಂತ ಆಕ್ರೋಶದ ನುಡಿಗಳನ್ನ ವ್ಯಕ್ತಪಡಿಸಿದರು.

DV Sadananda Gowda Chikkaballapur

ಇದೇ ವೇಳೆ ಜೊತೆಯಲ್ಲಿದ್ದ ಮೀನುಗಾರಿಕಾ ಸಚಿವ ಅಂಗಾರ ಕೂಡ ಸಿದ್ದರಾಮಯ್ಯನವರೇ ಕೆಟ್ಟು ಹೋಗಿದ್ದಾರೆ. ಅವರ ಕೆಟ್ಟು ಹೋದ ಕಾರಣ ಕೆಟ್ಟ ಸಂಸ್ಕೃತಿ ಅವರಲ್ಲಿದೆ. ನಾವು ತಲೆಕೆಡೆಸಿಕೊಳ್ಳುವುದಿಲ್ಲ, ಮತಾಂತರಕ್ಕೆ ನಮ್ಮ ಸರ್ಕಾರ ಆಸ್ಪದ ಕೊಡುವುದಿಲ್ಲ ಎಂದರು.

Share This Article
Leave a Comment

Leave a Reply

Your email address will not be published. Required fields are marked *