ಕಾಸರಕೋಡು ಇಕೋ ಬೀಚ್‍ಗೆ ಎರಡನೇ ಬಾರಿ ಅಂತರಾಷ್ಟ್ರೀಯ ಮಟ್ಟದ ಬ್ಲೂ ಫ್ಲಾಗ್ ಮಾನ್ಯತೆ

Public TV
2 Min Read
kasarkod eco beach

ಕಾರವಾರ: ವಿಶ್ವ ಮಟ್ಟದಲ್ಲಿ ಹೆಸರು ಮಾಡಿದ್ದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡ್ ಕಡಲತೀರದ ಇಕೋ ಬೀಚ್‍ನಲ್ಲಿ ಮಳೆಯ ಅಬ್ಬರ, ಸುನಾಮಿ ನಡುವೆಯೂ ಈ ವರ್ಷ ತನ್ನ ಗುಣಮಟ್ಟವನ್ನು ಕಾಯ್ದುಕೊಳ್ಳುವ ಮೂಲಕ ಅಂತರಾಷ್ಟ್ರೀಯ ಮಾನ್ಯತೆಯ ಬ್ಲೂ ಫ್ಲ್ಯಾಗ್ ಮಾನ್ಯತೆಯನ್ನು ಮತ್ತೆ ಪಡೆದಿದೆ.

kasarkod eco beach

ಪರಿಸರ ಸ್ನೇಹಿ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ಕಡಲ ತೀರವನ್ನು ಪ್ರವಾಸೋದ್ಯಮ ಸ್ನೇಹಿಯಾಗಿ ಜಿಲ್ಲಾಡಳಿತ ನಿರ್ಮಾಣ ಮಾಡಿತ್ತು. ಕಳೆದ ವರ್ಷ ಸುಮಾರು 8 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು, ಕಡಲತೀರದ ಸುಮಾರು 750 ಮೀಟರ್ ವ್ಯಾಪ್ತಿಯಲ್ಲಿ ಪ್ರವಾಸಿಗರು ಕುಳಿತುಕೊಳ್ಳಲು ವಿನೂತನ ಬಗೆಯ ಆಸನ ವ್ಯವಸ್ಥೆ, ವಾಚ್ ಟವರ್, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಪರಿಸರ ಸ್ನೇಹಿ ಸೌಲಭ್ಯಗಳ ವ್ಯವಸ್ಥೆಯನ್ನು ಮಾಡಲಾಗಿತ್ತು. ಇದನ್ನೂ ಓದಿ: ಸ್ಟೈಲಿಷ್ ಕೇಶ ವಿನ್ಯಾಸ, ಕ್ಲೀನ್ ಶೇವ್, ಟ್ರಿಮ್‍ಗೂ ತಾಲಿಬಾನ್ ನಿಷೇಧ

kasarkod eco beach

ಇದರೊಂದಿಗೆ ಮಕ್ಕಳ ಆಟಿಕೆಗಳನ್ನು ಸಹ ಅಳವಡಿಸಲಾಗಿದ್ದು, ಅಂತರಾಷ್ಟ್ರೀಯ ಗುಣಮಟ್ಟವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕಡಲತೀರದಲ್ಲಿ ಸ್ವಚ್ಛತೆಯನ್ನು ಸಹ ಕಾಯ್ದುಕೊಳ್ಳಲಾಗಿದೆ. ಇದಲ್ಲದೇ ಈ ಬಾರಿ ಸಹ ಬೀಚ್‍ಗೆ ಹಾನಿಯಾಗಿದ್ದರೂ, ಎಲ್ಲವನ್ನೂ ಸಮರ್ಪಕವಾಗಿ ಪುನಃ ನಿರ್ಮಿಸುವ ಮೂಲಕ ಇದೀಗ ಮತ್ತೊಮ್ಮೆ ವಿಶ್ವ ಮಟ್ಟದಲ್ಲಿ ತನ್ನನ್ನು ಗುರುತಿಸಿಕೊಂಡಿದೆ. ಇದನ್ನೂ ಓದಿ: ಬೆಳಗಾವಿ ಜನರ ಪ್ರೀತಿಗೆ ಬಿ.ಸಿ.ಪಾಟೀಲ್ ಸಂತಸ -“ರೈತರೊಂದಿಗೊಂದು ದಿನ” ಬಗ್ಗೆ ಕೌರವನ ಮಾತು

kasarkod eco beach
ಜಿಲ್ಲೆಯ ಇಕೋ ಕಡಲತೀರಕ್ಕೆ ಎರಡನೇಯ ಬಾರಿ ಅಂತರಾಷ್ಟ್ರೀಯ ಮಾನ್ಯತೆಯ ಬ್ಲೂ ಫ್ಲ್ಯಾಗ್ ಮನ್ನಣೆ ಸಿಕ್ಕಿರುವುದು ನಿಜಕ್ಕೂ ಹೆಮ್ಮೆಯ ವಿಚಾರವೇ. ಸದ್ಯ ಕೊರೊನಾ ಅಬ್ಬರದಿಂದಾಗಿ ಮಂಕಾಗಿರುವ ಉತ್ತರ ಕನ್ನಡ ಪ್ರವಾಸೋದ್ಯಮಕ್ಕೆ ಇದರಿಂದ ಒಂದಿಷ್ಟು ಚೇತರಿಕೆ ಕಾಣಲಿದೆ. ಇದನ್ನೂ ಓದಿ: ಮೂಕಜೀವಿಗಳ ಸಂಕಷ್ಟಕ್ಕೆ ಮಿಡಿಯುವ ಕೋಟೆನಾಡಿನ ಮಾನವೀಯತೆಯ ಹೃದಯ

ಕಳೆದ ವರ್ಷ ಕೊರೊನಾ ಮೊದಲನೇಯ ಅಲೆಯ ಬಳಿಕ ಸಾಕಷ್ಟು ಪ್ರವಾಸಿಗರು ಬ್ಯೂಫ್ಲಾಗ್ ಕಡಲತೀರಕ್ಕೆ ಭೇಟಿ ನೀಡಿದ್ದರು. ಕುಟುಂಬಸ್ಥರು, ಮಕ್ಕಳು ಸಹ ಕಡಲತೀರಕ್ಕೆ ಆಗಮಿಸಿ ಎಂಜಾಯ್ ಮಾಡಲು ಅನುಕೂಲಕರ ವಾತಾವರಣ ಇರುವುದರಿಂದಾಗಿ ಪ್ರವಾಸಿಗರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಜೊತೆಗೆ ಕಡಲತೀರದ ನಿರ್ವಹಣೆಗಾಗಿಯೇ ಸಿಬ್ಬಂದಿ ನಿಯೋಜನೆ ಮಾಡಿದ್ದು, ಪ್ರತಿನಿತ್ಯ ಬೀಚ್‍ನ್ನು ಸ್ವಚ್ಛವಾಗಿಟ್ಟುಕೊಳ್ಳುವುದರ ಜೊತೆಗೆ ಪ್ರವಾಸಿಗರ ಸುರಕ್ಷತೆಗೂ ಇದರಿಂದ ಅನುಕೂಲವಾಗಿತ್ತು. ಈ ಬಾರಿ ತೌಕ್ತೆ ಚಂಡಮಾರುತ ಅಪ್ಪಳಿಸಿದ ವೇಳೆ ಕಡಲತೀರದ ಒಂದು ಬದಿಗೆ ಕೊಂಚ ಹಾನಿಯಾಗಿತ್ತಾದರೂ ಇಲ್ಲಿನ ಸಿಬ್ಬಂದಿ ಕಡಲತೀರವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವ ಕೆಲಸ ಮಾಡಿದ್ದರು. ಈ ಹಿನ್ನಲೆ ಈ ಬಾರಿಯೂ ಸಹ ಕಡಲತೀರಕ್ಕೆ ಬ್ಯೂಫ್ಲ್ಯಾಗ್ ಮನ್ನಣೆ ಲಭಿಸುವಂತಾಗಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಜಿಲ್ಲೆಯ ಖ್ಯಾತಿಯನ್ನು ಹೆಚ್ಚಿಸುವಂತಾಗಿದೆ.

Share This Article
Leave a Comment

Leave a Reply

Your email address will not be published. Required fields are marked *