ಬೆಂಗಳೂರು: ಅಂತರಾಷ್ಟ್ರೀಯ ಪುತ್ರಿಯರ ದಿನಾಚರಣೆ ಪ್ರಯುಕ್ತ ಸೆ.26ರಂದು ಎಲ್ಲಾ ಪುತ್ರಿಯರಿಗೆ ಉಚಿತವಾಗಿ ಪಾಸ್ ನೀಡುವುದಾಗಿ ವಂಡರ್ ಲಾ ಪ್ರಕಟಿಸಿದೆ.
ಎಲ್ಲಾ ಹೆಣ್ಣು ಮಕ್ಕಳಿಗೂ ಅಂತಾರಾಷ್ಟ್ರೀಯ ಪುತ್ರಿಯರ ದಿನಾಚರಣೆ ಶುಭಕೋರಿರುವ ವಂಡರ್ ಲಾ, ಪುತ್ರಿಯರಿಗಾಗಿ ಉಚಿತ ಪಾಸ್ ನೀಡುತ್ತಿದೆ.

ಪುತ್ರಿಯರು ತಮ್ಮ ಪೋಷಕರ ಜೊತೆ ತೆರಳಿ ಯಾರ ಪುತ್ರಿ ಎಂಬುದನ್ನು ಖಚಿತ ಪಡಿಸಿ, ಸಂಬಂಧಪಟ್ಟ ದಾಖಲೆ ತೋರಿಸಬೇಕು.
ಹೆಚ್ಚಿನ ಮಾಹಿತಿಗಾಗಿ ವಂಡರ್ ಲಾ ವೆಬ್‍ಸೈಟ್ www.wonderla.com ಗೆ ಭೇಟಿ ನೀಡಬಹುದು.

