ನಾನು ಶಾಲೆಗೆ ಹೋಗ್ಬೇಕು – ಅಫ್ಘಾನ್ ಬಾಲಕಿಯ ಖಡಕ್ ಭಾಷಣ

Public TV
1 Min Read
Afghanistan Girl

ಕಾಬೂಲ್: ಅಫ್ಘಾನಿಸ್ತಾನದ ಬಾಲಕಿಯೊಬ್ಬಳು ನಾನು ಶಾಲೆಗೆ ಹೋಗಬೇಕೆಂದು ಪ್ರತಿಭಟನೆ ಮಾಡುತ್ತಾ, ಖಡಕ್ ಭಾಷಣ ಮಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Afghanistan school

ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡು ಮಹಿಳೆಯರ ಸ್ವಾತಂತ್ರ್ಯವನ್ನು ಕಿತ್ತುಕೊಂಡಿದೆ ಮತ್ತು ಮಹಿಳೆಯರ ಶಿಕ್ಷಣ ಮತ್ತು ಕೆಲಸದ ಹಕ್ಕುಗಳ ಕುರಿತಂತೆ ಕಠಿಣ ನಿಯಮಗಳನ್ನು ಜಾರಿಗೊಳಿದೆ. ತಾಲಿಬಾನ್ ಮಹಿಳೆಯರಿಗೆ ಮಾಧ್ಯಮಿಕ ಶಾಲಾ ಶಿಕ್ಷಣವನ್ನು ನಿಷೇಧಿಸುವುದಾಗಿ ಘೋಷಿಸಿ ಅವರ ಆಸೆಗಳಿಗೆ ತಣ್ಣೀರು ಎರಚಿದೆ. ಸದ್ಯ ಅಫ್ಘಾನ್ ಬಾಲಕಿಯೊಬ್ಬಳು ಶಾಲೆಗೆ ಹೋಗುವ ಹಕ್ಕಿನ ಬಗ್ಗೆ ಚುರುಕಾದ ಭಾಷಣ ಮಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರ ಗಮನ ಸೆಳೆಯುತ್ತಿದೆ. ಇದನ್ನೂ ಓದಿ: ದೇವರಿಗೆ ಕೈ ಮುಗಿದು ಕಾಣಿಕೆ ಹಾಕಿ ಹುಂಡಿ ಮುಂದಿದ್ದ ಹಾಲಿನ ಬಾಟ್ಲಿ ಎಗರಿಸಿದ ಭೂಪ

Afghanistan Girl

ವೀಡಿಯೋದಲ್ಲಿ ಬಾಲಕಿ ಇಬ್ಬರು ಹುಡುಗಿಯರು ಮತ್ತು ಹುಡುಗರೊಂದಿಗೆ ಪ್ಲಾಕಾರ್ಡ್ ಹಿಡಿದು ನಿಂತುಕೊಂಡಿರುವುದನ್ನು ಕಾಣಬಹುದಾಗಿದೆ. ನಂತರ ಮಹಿಳೆಯರ ಶಿಕ್ಷಣದ ಹಕ್ಕು ಮತ್ತು ಅಫ್ಘಾನಿಸ್ತಾನದ ಅಭಿವೃದ್ಧಿಗೆ ಕೊಡುಗೆ ನೀಡುವ ಹಕ್ಕಿನ ಬಗ್ಗೆ ಮಾತನಾಡಿದ್ದಾಳೆ. ಆಕೆಯ ಸುಲಲಿತವಾದ ಇಂಗ್ಲೀಷ್ ಭಾಷಣಕ್ಕೆ ಅನೇಕ ಮಂದಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ವೈರಲ್ ಆಗುತ್ತಿರುವ ಈ ವೀಡಿಯೋವನ್ನು 68,200ಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, ಕಾಮೆಂಟ್‍ಗಳ ಸುರಿಮಳೆಯೇ ಹರಿದು ಬಂದಿದೆ. ಬಾಲಕಿಯ ಕೆಚ್ಚೆದೆಯ ಭಾಷಣವನ್ನು ಮೆಚ್ಚಿ ನೆಟ್ಟಿಗರು ದೇಶಕ್ಕೆ ಇಂತಹ ಧೈರ್ಯಶಾಲಿ ಹುಡುಗಿಯರು ಬೇಕು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಲೈಂಗಿಕ ದೌರ್ಜನ್ಯದಿಂದ ತಪ್ಪಿಸಿಕೊಳ್ಳಲು ತಂದೆಯನ್ನೇ ಹತ್ಯೆಗೈದ ಬಾಲಕಿ

Share This Article
Leave a Comment

Leave a Reply

Your email address will not be published. Required fields are marked *