33 ಜನರಿಂದ 9 ತಿಂಗಳ ಕಾಲ 15ರ ಬಾಲಕಿ ಮೇಲೆ ನಿರಂತರ ಅತ್ಯಾಚಾರ

Public TV
2 Min Read
RAPE

– ಆರೋಪಿಗಳಲ್ಲಿ ಇಬ್ಬರು ಅಪ್ರಾಪ್ತರು

ಮುಂಬೈ: ಇಬ್ಬರು ಅಪ್ರಾಪ್ತರು ಸೇರಿ 30ಕ್ಕೂ ಹೆಚ್ಚು ಜನ 9 ತಿಂಗಳ ಕಾಲ 15 ವರ್ಷದ ಬಾಲಕಿ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಥಾಣೆಯ ಡೊಂಬಿವ್ಲಿಯಲ್ಲಿ ನಡೆದಿದೆ.

ಪೊಲೀಸರು ಇದೀಗ ಇಬ್ಬರು ಅಪ್ರಾಪ್ತರು ಸೇರಿ 28 ಆರೋಪಿಗಳನ್ನು ಬಂಧಿಸಿದ್ದು, 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ವಹಿಸಲಾಗಿದೆ. ಭಯಾನಕ ಪ್ರಕರಣವನ್ನು ಭೇದಿಸಲು ಎಸ್‍ಐಟಿ ತಂಡವನ್ನು ರಚಿಸಲಾಗಿದೆ. ಸಂತ್ರಸ್ತೆ ಒಟ್ಟು 30 ಜನರ ಹೆಸರನ್ನು ಹೇಳಿದ್ದು, ಅದರಲ್ಲಿ 28 ಜನರನ್ನು ಈಗಾಗಲೇ ಥಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಗ್ಯ ಸ್ಥಿತಿ ಸ್ಥಿರವಾಗಿದ್ದ ಕಾರಣ ಬಾಲಕಿಯನ್ನು ಪೊಲೀಸರು ಮನೆಗೆ ಕಳುಹಿಸಿದ್ದಾರೆ.

ಜನವರಿಯಿಂದ ನಿರಂತರ ಅತ್ಯಾಚಾರ
ಬಾಲಕಿಯ ಸ್ನೇಹಿತ ಜನವರಿಯಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿ, ವೀಡಿಯೋ ರೆಕಾರ್ಡ್ ಮಾಡಿದ್ದು, ಇಲ್ಲಿಂದ ಪ್ರಕರಣ ಶುರುವಾಗಿದೆ. ವೀಡಿಯೋ ರೆಕಾರ್ಡ್ ಮಾಡಿಕೊಂಡ ಬಳಿಕ ಆಕೆಯ ಸ್ನೇಹಿತ ಬಾಲಕಿಗೆ ಬೆದರಿಕೆ ಹಾಕಿ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ. ಬಳಿಕ ವೀಡಿಯೋವನ್ನು ತನ್ನ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದು, ಅವರೂ ಬೆದರಿಸಿ ಅತ್ಯಾಚಾರ ಎಸಗಿದ್ದಾರೆ. ಈ ಘಟನೆ ಬಳಿಕ ಆರೋಪಿಗಳ ಗುಂಪು ಡೊಂಬಿವ್ಲಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಹಲವು ಬಾರಿ ಅತ್ಯಾಚಾರ ಎಸಗಿದೆ. ಇದನ್ನೂ ಓದಿ: ಸ್ನಾನ ಮಾಡಲ್ಲವೆಂದು ಪತಿ ತಲಾಖ್ ನೀಡಿದ್ದಕ್ಕೆ ಠಾಣೆ ಮೆಟ್ಟಿಲೇರಿದ ಪತ್ನಿ!

ಬಾಲಕಿಯ ಸ್ನೇಹಿತ ಜನವರಿಯಲ್ಲಿ ಅತ್ಯಾಚಾರ ಎಸಗಿದ ಬಳಿಕ ಇದು ಆರಂಭವಾಗಿದೆ. ವೀಡಿಯೋ ರೆಕಾರ್ಡ್ ಮಾಡಿಕೊಂಡು ಬಾಲಕಿಯನ್ನು ಬ್ಲ್ಯಾಕ್‍ಮೇಲ್ ಮಾಡಲು ಆರಂಭಿಸಿದ್ದಾನೆ. ಬಳಿಕ ಆತನ ಸ್ನೇಹಿತರೆಲ್ಲ ಸೇರಿಕೊಂಡು ವಿವಿಧ ಸ್ಥಳಗಳಲ್ಲಿ ಕನಿಷ್ಟ ನಾಲ್ಕೈದು ಬಾರಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಡೊಂಬಿವ್ಲಿ, ಬದ್ಲಾಪುರ, ಮುರ್ಬಾದ್ ಹಾಗೂ ರಬಾಲೆಗಳಲ್ಲಿ ಕೃತ್ಯ ಎಸಗಿದ್ದಾರೆ ಎಂದು ಪೂರ್ವ ವಲಯದ ಎಸಿಪಿ ದತ್ತಾತ್ರೇಯ ಕರಾಳೆ ವಿವರಿಸಿದ್ದಾರೆ. ಇದನ್ನೂ ಓದಿ:  ರಾಮ, ಕೃಷ್ಣ, ಶಿವ ಭಾರತದ ಮುಸ್ಲಿಮರ ಪೂರ್ವಜರು: ಆನಂದ್ ಸ್ವರೂಪ್ ಶುಕ್ಲಾ

ಸಂತ್ರಸ್ತೆ ಬುಧವಾರ ಪೊಲೀಸರಿಗೆ ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಬಾಲಕಿ ದೂರು ನೀಡಿ ಎರಡು ದಿನ ಕಳೆದಿದೆ. ಈಗಾಗಲೇ 28 ಜನರನ್ನು ಬಂಧಿಸಿದ್ದೇವೆ. ಪ್ರಕರಣದಲ್ಲಿ ಒಟ್ಟು 33 ಜನ ಆರೋಪಿಗಳ ಹೆಸರು ಕೇಳಿ ಬಂದಿದೆ. ಬಂಧಿತರಲ್ಲಿ ಇಬ್ಬರು 17 ವರ್ಷದವರಾಗಿದ್ದಾರೆ. ಸಂತ್ರಸ್ತೆಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಬಾಲಕಿ ಮೇಲೆ ವಿವಿಧ ಸ್ಥಳಗಳಲ್ಲಿ ಅತ್ಯಾಚಾರ ಎಸಗಲಾಗಿದೆ. ಎಲ್ಲ ಆರೋಪಿಗಳೂ ಸಂತ್ರಸ್ತೆಗೆ ಪರಿಚಿತರು, ಕೆಲವರು ಸಾಮಾಜಿಕ ಜಾಲತಾಣಗಳ ಮೂಲಕ ಸ್ನೇಹಿತರಾದವರು. ವಾಟ್ಸಪ್ ಗ್ರೂಪ್ ಹಾಗೂ ವೀಡಿಯೋ ಕುರಿತು ತನಿಖೆ ನಡೆಸಲಾಗುತ್ತಿದೆ. ಯಾವುದೇ ಆರೋಪಿಗೆ ರಾಜಕೀಯ ವ್ಯಕ್ತಿಗಳ ಸಂಬಂಧ ಇಲ್ಲ ಎಂದು ತನಿಖೆ ನಿರ್ವಹಿಸುತ್ತಿರುವ ಎಸಿಪಿ ಸೋನಾಲಿ ಧೋಲ್ ಮಾಹಿತಿ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *