ಅವಳಿ ನಗರದಲ್ಲಿ ಹದಗೆಟ್ಟ ರಸ್ತೆ- ಸಾರ್ವಜನಿಕರ ಆಕ್ರೋಶ

Public TV
2 Min Read
gadag15

ಗದಗ: ಕಳೆದ 3 ದಿನಗಳಿಂದ ಸುರಿದ ಮಳೆಗೆ ರಸ್ತೆಗಳು ಹದಗೆಟ್ಟು ಹೋಗಿದ್ದು, ವಾಹನ ಸಂಚಾರ ಹಾಗೂ ಪಾದಾಚಾರಿಗಳು ಈ ಭಾಗದಲ್ಲಿ ಓಡಾಡುವುದು ದುಸ್ತರವಾಗಿದೆ. ಬಿದ್ದಿರುವ ಗುಂಡಿಗೆ ಮಣ್ಣು ಹಾಕಿ ಸಮನಾಗಿ ಮಾಡಿದರೂ ಸಂಚಾರ ಸುಗಮವಾಗುತ್ತದೆ. ಇದನ್ನು ಮಾಡಲು ನಗರಸಭೆ ಮನಸ್ಸು ಮಾಡುತ್ತಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

gadag 13

ಜಿಲ್ಲೆಯ ಬೆಟಗೇರಿ ಭಾಗದಲ್ಲಿರುವ 6, 9, 10, 13ನೇ ವಾರ್ಡ್‍ಗಳಲ್ಲಿನ ರಸ್ತೆಗಳಲ್ಲಿ ದೊಡ್ಡ ಗುಂಡಿಗಳು ಬಿದ್ದು ನೀರು ತುಂಬಿಕೊಂಡಿವೆ. ಸಂಚರಿಸಲು ಕಷ್ಟವಾಗಿದೆ. ಮನೆಯಿಂದ ಮಕ್ಕಳು ಹಿರಿಯರು ನಡೆದುಕೊಂಡು ಹೋಗುವುದು ದುಸ್ತರವಾಗಿದೆ. ಈ ಭಾಗದ ರಸ್ತೆಗಳು ಬಹುತೇಕವಾಗಿ ಮಣ್ಣಿನಿಂದ ಕೂಡಿದ್ದು, ಸ್ವಲ್ಪ ಮಳೆಯಾದರೆ ಸಾಕು ಜನರು ಓಡಾಡಲು ಹರಸಾಹಸ ಪಡಬೇಕಾಗುತ್ತೆ ಎಂದು ನಗರಸಭೆ ವಿರುದ್ಧ ಸಾರ್ವಜನಿಕರು ಹಿಡಿಶಾಪ ಹಾಕಿದ್ದಾರೆ.

gadag 14

ಬೆಟಗೇರಿಯ ಭಗೀರಥ ನಗರ, ಶರಣಬಸವೇಶ್ವರ ನಗರ, ವೀರನಾರಾಯಣ ಬಡಾವಣೆ, ಎಸ್.ಕೃಷ್ಟಾ ಈ ಎಲ್ಲಾ ಬಡಾವಣೆಗಳು ಸುಮಾರು ಎರಡೂ ದಶಕಗಳ ಹಿಂದೆ ನಿರ್ಮಾಣ ಮಾಡಲಾಗಿದೆ. ಆದರೆ ಇದುವರೆಗು ಸಹ ಮೂಲಭೂತ ಸೌಲಭ್ಯಗಳಿಂದ ಈ ಭಾಗದ ಜನರು ವಂಚಿತರಾಗಿದ್ದಾರೆ. ಸರಿಯಾದ ರಸ್ತೆ, ಚರಂಡಿ, ಕುಡಿಯುವ ನೀರಿನ ಸೌಲಭ್ಯಗಳು ಮರೀಚಿಕೆಯಾಗಿದೆ. ಇದನ್ನೂ ಓದಿ: ಅ. 1ರಿಂದ ಥಿಯೇಟರ್‌ಗಳು ಹೌಸ್‍ಫುಲ್- ಕಂಡೀಷನ್ಸ್ ಅಪ್ಲೈ

gadag 12

ನಾವು ಜಿಲ್ಲಾ ಕೇಂದ್ರದಲ್ಲಿ ವಾಸವಾಗಿದ್ದೇವಾ ಅಥವಾ ಗ್ರಾಮೀಣ ಭಾಗದಲ್ಲಿ ಇದ್ದೇವೆ ಎಂಬ ಅನುಮಾನ ನಮ್ಮಲ್ಲೇ ವ್ಯಕ್ತವಾಗುತ್ತದೆ. ಈ ಬಾರಿ ನಡೆಯುವ ನಗರಸಭೆ ಚುನಾವಣೆಯನ್ನು ಬಹಿಷ್ಕಾರ ಮಾಡುವ ಚಿಂತನೆ ಮಾಡುತ್ತಿದ್ದೇವೆ. ಈ ಭಾಗದಲ್ಲಿ ಸಿಸಿ ರಸ್ತೆಗಳು ಮಾಡಬೇಕು. ಸರಿಯಾಗಿ ನೀರಿನ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವವರಿಗೆ ಚುನಾವಣೆ ಬಹಿಷ್ಕಾರ ಮಾಡುವುದಾಗಿ ಸ್ಥಳಿಯ ನಿವಾಸಿಗಳು ಹೇಳಿದರು. ಇದನ್ನೂ ಓದಿ: ನಟ ದುನಿಯಾ ವಿಜಯ್ ನೋಡಲು ಮುಗಿಬಿದ್ದ ಅಭಿಮಾನಿಗಳು!

ಅವಳಿ ನಗರದ ಪ್ರಮುಖ ರಸ್ತೆಗಳಲ್ಲಿ ಸ್ವಲ್ಪ ಮಳೆಯಾದರು ಸಾಕು, ಹೊಸ ಬಸ್ ಸ್ಟಾಂಡ್ ರಸ್ತೆ, ಭೂಮರಡ್ಡಿ ವೃತ್ತ, ಹಳೇ ಡಿಸಿ ಆಫೀಸ್ ರಸ್ತೆ, ಎಪಿಎಂಸಿ ರೋಡ್ ಮುಂತಾದ ರಸ್ತೆಗಳು ಸಂಪೂರ್ಣ ಹಾಳಾಗುತ್ತವೆ. ಇದು ಗೊತ್ತಿದ್ದರೂ ಸಹ ಜಿಲ್ಲಾಡಳಿತ ಮತ್ತು ನಗರಸಭೆಯ ಇತ್ತ ಕಡೆಗೆ ಗಮನ ಹರಿಸಿಲ್ಲ. ನಗರಸಭೆ ವ್ಯಾಪ್ತಿಯ ನಗರಗಳಾದ ಪಂಚಾಕ್ಷರಿ ನಗರ, ಬಳ್ಳಾರಿ ಗೇಟ್, ಝೆಂಡಾ ಸರ್ಕಲ್, ಕುರಹಟ್ಟಿ ಪೇಟೆ ರಸ್ತೆ, ಬೆಟಗೇರಿಯ ತರಕಾರಿ ಮಾರುಕಟ್ಟೆ, ಬೆಟಗೇರಿ ಪೆÇಲೀಸ್ ಠಾಣೆ, ಕಂಬಾರ ಗಲ್ಲಿ, ಸಿದ್ಧಲಿಂಗ ನಗರದ ಸರಕಾರ ಪ್ರೌಢ ಶಾಲೆಯ ಆಟದ ಮೈದಾನವೂ ದುಸ್ಥಿತಿಯಿಂದ ಕೂಡಿವೆ. ಇಂತಹ ರಸ್ತೆಯಲ್ಲೇ ಜನರು ನಿತ್ಯ ಸಂಚರಿಸುವುದು ಅನಿವಾರ್ಯವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *