ವಿಧಾನಸಭೆಯಲ್ಲಿ ನಾಗ್ಪುರ vs ಇಟಲಿ ಫೈಟ್

Public TV
1 Min Read
SIDDRAMAIHA AND CT RAVI

ಬೆಂಗಳೂರು: ವಿಧಾನಸಭೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಮಾತಿನ ಚಕಮಕಿ ನಡೆದಿದೆ. ಇದು ನಾಗ್ಪುರ ಎಜುಕೇಶನ್ ಪಾಲಿಸಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗುಡುಗಿದ್ದಾರೆ. ಸರ್ಕಾರದ ಪರ ಸಿ.ಟಿ ರವಿ ಇದು ಇಟಲಿ ಎಜುಕೇಶನ್ ಪಾಲಿಸಿ ಅಲ್ಲ ಎಂದು ತಿರುಗೇಟು ನೀಡಿದರು.

VIDANASABHA

ವಿಧಾನಸಭೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಚರ್ಚೆಗೆ ಮುಂದಾಗುತ್ತಿದ್ದಂತೆ ಸಿದ್ದರಾಮಯ್ಯ ಮಾತನಾಡಿ, ಧರಣಿ ಮಾಡಬಾರದು ಅಂದುಕೊಂಡಿದ್ದೆವು, ಸಭಾತ್ಯಾಗ ಮಾಡವುದು ಮಾತ್ರ ನಮ್ಮ ನಿರ್ಧಾರ ಆಗಿತ್ತು. ಆದರೆ ನಮ್ಮ ಶಾಸಕರು ಹಲವು ವಿಚಾರಗಳು ಚರ್ಚೆ ಆಗಬೇಕು. ಸರ್ಕಾರ ಜನರ ಸಮಸ್ಯೆಯ ಬಗ್ಗೆ ಚರ್ಚೆ ಮಾಡುತ್ತಿಲ್ಲ. ಚರ್ಚೆ ಮಾಡಲು ಸಾಧ್ಯ ಆಗುತ್ತಿಲ್ಲ, ಸಮಯ ಇಲ್ಲ ಹಾಗಾಗಿ ಒಂದು ವಾರ ಸದನವನ್ನು ಮುಂದೂಡಿ ಎಂದು ಮನವಿ ಮಾಡಿಕೊಂಡರು. ರಾಷ್ಟ್ರೀಯ ಶಿಕ್ಷಣ ನೀತಿಗೆ ಚರ್ಚೆಗೆ ಅವಕಾಶ ಕೊಡಿ ಎಂದು ಕಾಂಗ್ರೆಸ್ ಸದಸ್ಯರ ಧರಣಿ, ಗದ್ದಲ ಎಬ್ಬಿಸಿದರು. ಇದನ್ನೂ ಓದಿ: ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ

SIDDARAMIHA 1

ನ್ಯಾಷನಲ್ ಎಜುಕೇಶನ್ ಪಾಲಿಸಿ ಅಲ್ಲ ಅದು ನಾಗ್ಪುರ ಎಜುಕೇಶನ್ ಪಾಲಿಸಿ ಎಂದು ಬಿಜೆಪಿ ಸರ್ಕಾರ ಜಾರಿಗೆ ಮುಂದಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಈ ವೇಳೆ ಮಧ್ಯಪ್ರವೇಶ ಮಾಡಿದ ಡಿ.ಕೆ ಶಿವಕುಮಾರ್ ನಾಗ್ಪುರ ಎಜುಕೇಶನ್ ಪಾಲಿಸಿ ಅಲ್ಲ ಅದು ಸಿ.ಟಿ.ರವಿ ಎಜುಕೇಶನ್ ಪಾಲಿಸಿ ಎಂದು ಟಾಂಗ್ ನೀಡಿದರು. ಇದನ್ನೂ ಓದಿ: ಮಾನಮರ್ಯಾದೆ ಇಲ್ಲದ ಸರ್ಕಾರದ ವಿರುದ್ಧ ಜನರ ಧ್ವನಿಯಾಗಿ ಹೋರಾಟ: ಡಿ.ಕೆ ಶಿವಕುಮಾರ್

BASAVARJ BOMMAI 1 3

ಈ ವೇಳೆ ಮಾತಿಗಿಳಿದ ಸಿ.ಟಿ.ರವಿ, ಇದು ಇಟಲಿ ಎಜುಕೇಶನ್ ಪಾಲಿಸಿ ಅಲ್ಲ ಎಂದು ತಿರುಗೇಟು ನೀಡಿದರು. ನಂತರ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಆರ್‌ಎಸ್‌ಎಸ್‌ ಅಂದ್ರೆ ರಾಷ್ಟ್ರೀಯ ಶಿಕ್ಷಣ ವ್ಯವಸ್ಥೆ. ಕಾಂಗ್ರೆಸ್‍ನವರು ಆರ್‌ಎಸ್‌ಎಸ್‌ ಎಜುಕೇಶನ್ ಪಾಲಿಸಿ ಅನ್ನಲಿ ಅವರು, ನಾವು ತಲೆಕೆಡಿಸಿಕೊಳ್ಳಲ್ಲ. ರಾಷ್ಟ್ರೀಯ ಶಿಕ್ಷಣ ನೀತಿ ಹೊಸದಿಕ್ಕು, ಹೊಸ ಶಿಕ್ಷಣ ವ್ಯವಸ್ಥೆ ಅದನ್ನು ಜಾರಿಗೆ ತರುತ್ತೇವೆ ಎಂದು ಟಕ್ಕರು ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *