ಬೆಂಗಳೂರು: ಪೋಷಕ ಪಾತ್ರದ ಮಹತ್ವವನ್ನು ಅರಿಯದೇ ಹಿಂದಕ್ಕೆ ತಳ್ಳಿ, ಪೋಷಕ ಕಲಾವಿದರಿಗೆ ಸಲ್ಲಬೇಕಾದ ಗೌರವ, ಸ್ಥಾನಮಾನವನ್ನು ಅವರಿಗೆ ಕೊಡುವುದನ್ನು ಮರೆತಿದ್ದೇವೆ. ಅವರನ್ನು ಗೌರವದಿಂದ ನಡೆಸಿಕೊಳ್ಳುವುದು ನಮ್ಮ ಕರ್ತವ್ಯ ಹಾಗೂ ಧರ್ಮ ಎಂದು ನಟಿ ಸುಧಾರಾಣಿ ಕಳವಳ ವ್ಯಕ್ತಪಡಿಸಿದ್ದಾರೆ.
ಇನ್‍ಸ್ಟಾಗ್ರಾಂನಲ್ಲಿ ಹಿರಿಯ ಕಲಾವಿದೆ ಎಂ.ಎನ್.ಲಕ್ಷ್ಮೀದೇವಿ ಅವರನ್ನು ಭೇಟಿ ಮಾಡಿದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಸುಧಾರಾಣಿ ಅವರ ಜೊತೆಗೆ ನಟಿಯರಾದ ಶೃತಿ ಹಾಗೂ ಮಾಳವಿಕಾ ಅವಿನಾಶ್ ಸೇರಿದಂತೆ ಇತರರು ಸಹ ಇದ್ದಾರೆ. ಇದೇ ವೇಳೆ ಲಕ್ಷ್ಮೀದೇವಿ ಅವರಿಗೆ ಸನ್ಮಾನವನ್ನು ಸಹ ಮಾಡಿದ್ದಾರೆ.
View this post on Instagram
ಫೋಟೋ ಹಂಚಿಕೊಂಡು ಸಾಲುಗಳನ್ನು ಬರೆದಿರುವ ಅವರು, ಯಾರು ಯಾರು ನೀ ಯಾರು ಎಂದರೆ, ನಾನು ಸಾಕ್ಷಾತ್ ಕಲಾದೇವತೆ ಸರಸ್ವತಿಯ ವರಪುತ್ರಿ ಎಂದವರೇ ಎಂ.ಎನ್.ಲಕ್ಷ್ಮೀದೇವಿ ಅಮ್ಮನವರು. ಚಿತ್ರರಂಗದಲ್ಲಿ ಇವರು ಮಾಡಿರುವ ಸಾಧನೆ ಅಸಮಾನ್ಯವಾದದ್ದು. ಪೋಷಕ ಪಾತ್ರಗಳಿಗೆ ಒಂದು ವಿಭಿನ್ನ ರೀತಿಯ ಮೆರುಗು, ವೈಭವ, ಗೌರವ ತಂದುಕೊಟ್ಟ ಕಲಾವಿದರ ಪೈಕಿ ಇವರ ಕೊಡುಗೆ ಬಹಳ ದೊಡ್ಡದು. ಪೋಷಕ ಕಲಾವಿದರು ಅಥವಾ ಪೋಷಕ ಪಾತ್ರಗಳು ಅಂದಾಗ ನನ್ನ ಮನಸ್ಸಿಗೆ ಬರುವುದು ‘ಪೋಷಕ’ ಎನ್ನುವ ಪದದ ಅರ್ಥ, ಅದರ ಅರ್ಥ ನಿಮಗೆಲ್ಲ ಗೊತ್ತೇ ಇದೆ. English ನಲ್ಲಿ ಈ ಪದಕ್ಕೆ ‘Guardian’ ಎಂದು ಅರ್ಥ, Guardian ಎನ್ನುವ ಪದವನ್ನು Guardian Angels ಎಂದು ಸಹ ಕರೆಯುತ್ತಾರೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ರಾಯನ್‍ಗೆ 11 ತಿಂಗಳು- ಕ್ಯೂಟ್ ವೀಡಿಯೋ ಹಂಚಿಕೊಂಡ ಮೇಘನಾ
ಇವರುಗಳು ನಮ್ಮ ಚಿತ್ರಗಳಿಗೆ ಅಥವಾ ಮುಖ್ಯ ಭೂಮಿಕೆ ನಿಭಾಯಿಸುವಂತಹ ನಟ, ನಟಿಯರಿಗೆ ನಿಜವಾಗಲೂ Guardian Angels ಗಳ ಹಾಗೆಯೇ ಇರುತ್ತಾರೆ. ಯಾಕಂದ್ರೆ ಪೋಷಕ ಕಲಾವಿದರು ತಮ್ಮ ಸರ್ವಸ್ವವನ್ನು ಅರ್ಪಿಸಿ, ಮುಖ್ಯ ಭೂಮಿಕೆ ನಿರ್ವಹಿಸುವ ಪಾತ್ರಗಳಿಗೆ ಅಥವಾ ಇಡೀ ಚಿತ್ರಕ್ಕೆ ಒಂದು ಬೆನ್ನೆಲುಬಾಗಿರುತ್ತಾರೆ ಅಥವಾ ಚಿತ್ರದ ಆಧಾರ ಸ್ತಂಭದಂತೆ ಇರುತ್ತಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಗುವಿನ ನೆರವಿಗೆ ಸಹಾಯ ಕೋರಿದ ಮಂಜು
ಇತ್ತೀಚಿನ ಕೆಲವು ವರ್ಷಗಳಲ್ಲಿ ಈ ಸತ್ಯವನ್ನು ಮರೆತು, ಪೋಷಕ ಪಾತ್ರದ ಮಹತ್ವವನ್ನು ಸರಿಯಾಗಿ ಅರಿಯದೆ, ಆ ಪಾತ್ರಗಳನ್ನು ಹಿಂದಕ್ಕೆ ತಳ್ಳಲಾಗುತ್ತಿದೆ. ಪೋಷಕ ಕಲಾವಿದರಿಗೆ ಸಲ್ಲಬೇಕಾದ ಗೌರವ, ಸ್ಥಾನ ಮಾನ ಇದೆಲ್ಲವನ್ನು ಅವರಿಗೆ ಸಂಪೂರ್ಣವಾಗಿ ಕೊಡುವುದನ್ನು ಮರೆತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಮ್ಮ ಚಿತ್ರರಂಗದ ಈ Guardian Angels ಅಥವಾ ನಮ್ಮ ಪೋಷಕರನ್ನು ಎಂದಿಗೂ ಮರೆಯದೆ, ಅವರನ್ನು ಗೌರವದಿಂದ ನಡೆಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ ಹಾಗೂ ಧರ್ಮ ಎಂದು ಸಲಹೆ ನೀಡಿದ್ದಾರೆ.