ಎಚ್ಚರಿಕೆ ನೀಡಿದ್ರೂ ಅಕ್ರಮ ಸಂಬಂಧ – ಕಟ್ಟಿಗೆಯಿಂದ ಪತ್ನಿಯನ್ನು ಕೊಲೆಗೈದ

Public TV
1 Min Read
GLB 12

– ಕೊಲೆ ನೋಡಿದ ಮಗಳ ಮೇಲೂ ಹಲ್ಲೆ
– ರಕ್ತ ಸ್ರಾವದಿಂದ ಮಗಳ ಸಾವು

ಕಲಬುರಗಿ: ಅನೈತಿಕ ಸಂಬಂಧಕ್ಕೆ ರೊಚ್ಚಿಗೆದ್ದು ಪತಿಯೊಬ್ಬ ಪತ್ನಿ ಹಾಗೂ ಮಗಳು ಇಬ್ಬರನ್ನು ಹತ್ಯೆ ಮಾಡಿರುವ ಘಟನೆ ಸೇಡಂನಲ್ಲಿ ನಡೆದಿದೆ.

GLB 13 1ಪತ್ನಿ ಜಗದೀಶ್ವರಿ (45) ಮತ್ತು ಪ್ರಿಯಾಂಕಾ (11) ಕೊಲೆಯಾದ ದುರ್ದೈವಿಗಳಾಗಿದ್ದಾರೆ. 46 ವರ್ಷದ ದಿಗಂಬರ ತನ್ನ ಪತ್ನಿ ಹಾಗೂ ಮಗಳು ರಾತ್ರಿ ಮಲಗಿದ್ದ ಸಮಯದಲ್ಲಿ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ ಎಂಬ ಆರೋಪ ಬಂದಿದೆ. ಇದನ್ನೂ ಓದಿ: ವಿಶಾಲ ಗಾಣಿಗ ಮರ್ಡರ್ ಪ್ರಕರಣ ಭೇದಿಸಿದ ಪೊಲೀಸರಿಗೆ 50 ಸಾವಿರ ಬಹುಮಾನ

GLB 13ಜಿಲ್ಲೆಯ ಸೇಡಂ ಪಟ್ಟಣದ ಈಶ್ವರ್ ನಗರದಲ್ಲಿ ನಿನ್ನೆ ತಡ ರಾತ್ರಿ ಈ ಘಟನೆ ನಡೆದಿದೆ. ಶೀಲ ಶಂಕೆ, ಕೊಲೆಗೆ ಕಾರಣ ಅಂತಾ ಆರೋಪಿ ತಪೋಪ್ಪಿಕೊಂಡಿದ್ದಾನೆ. ಆರೋಪಿ ಪೊಲೀಸರ ಮುಂದೆ ಕೊಲೆಗೆ ಕಾರಣ ತಿಳಿಸಿದ್ದು, ಪತ್ನಿ ಜಗದೀಶ್ವರಿ ಬೇರೆಯವರ ಜೊತೆ ಅನೈತಿಕ ಸಂಬಂಧ ಇಟ್ಟಿಕೊಂಡಿದ್ದಳು, ಈ ಬಗ್ಗೆ ಹಲವು ಬಾರಿ ಆಕೆಗೆ ಎಚ್ಚರಿಕೆ ನೀಡಿದರೂ ಅಕ್ರಮ ಸಂಬಂಧ ಮುಂದುವರೆಸಿದ್ದಳು ಎಂದು ಹೇಳಿದ್ದಾನೆ. ಇದನ್ನೂ ಓದಿ: ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಗುವಿನ ನೆರವಿಗೆ ಸಹಾಯ ಕೋರಿದ ಮಂಜು

GLB 14ಆಕೆಯಿಂದ ಗ್ರಾಮದ ಜನ ನನ್ನ ಹಾಗೂ ನಮ್ಮ ಕುಟುಂಬದವರ ಬಗ್ಗೆ ಇಲ್ಲ ಸಲ್ಲದ ಮಾತುಗಳನ್ನು ಆಡುತ್ತಿದ್ದರು. ಇದರಿಂದ ಮನನೊಂದು ಆಕೆಯನ್ನು ಕೊಲೆ ಮಾಡಿದ್ದೇನೆ. ಹಲ್ಲೆ ಘಟನೆ ಕಂಡ ಹಿನ್ನೆಲೆ ಮಗಳಿಗೂ ಸಹ ಹೊಡೆದೆ. ಆಕೆ ರಕ್ತ ಸ್ರಾವದಿಂದ ಸ್ಥಳದಲ್ಲೇ ಸಾವನಪ್ಪಿದ್ದಳು ಎಂದು ಆರೋಪಿ ಒಪ್ಪಿಕೊಂಡಿದ್ದಾನೆ.

SEDAMಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕೊಲೆ ಆರೋಪಿ ದಿಗಂಬರನನ್ನು ಬಂಧಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *