ಬೆಂಗಳೂರು: ರಾಯನ್ ಇಷ್ಟು ಬೇಗ ಬೆಳೆಯುತ್ತಿದ್ದಾನಾ, ಆಗಲೇ 11 ತಿಂಗಳು ಆಗೋಯ್ತಾ ಎಂದು ಮೇಘನಾ ರಾಜ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ರಾಯನ್ ಆಟವಾಡುತ್ತಿರುವ ಕ್ಯೂಟ್ ವೀಡಿಯೋವನ್ನು ಹಂಚಿಕೊಂಡಿದ್ದಾರೆ.
ಈ ಕುರಿತು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಅವರು, ಆಗಲೇ 11 ತಿಂಗಳಾ?! ರಾಯನ್ ಎಷ್ಟು ಬೇಗ ಬೆಳೆಯುತ್ತಿದ್ದಾನೆ. ನನ್ನ ಪ್ರೀತಿಯ ಅಭಿಮಾನಿಗಳು ಖಂಡಿತವಾಗಿಯೂ ಯಾವಾಗಲೂ ನಮ್ಮೊಂದಿಗೆ ಪ್ರತಿ ತಿಂಗಳು ಆಚರಿಸುತ್ತಾರೆ. ಅವರಿಗಾಗಿ ರಾಯನ್ ವೀಡಿಯೋ ಹಂಚಿಕೊಳ್ಳುತ್ತಿದ್ದೇನೆ. ನಿಮ್ಮೆಲ್ಲರಿಗೂ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಸೂಪರ್ ಮ್ಯಾನ್ ಆದ ರಾಯನ್
ವೀಡಿಯೋದಲ್ಲಿ ಯಲ್ಲೋ ಟಿಶರ್ಟ್ ಹಾಕಿರುವ ರಾಯನ್, ಗೊಂಬೆ ಜೊತೆ ಆಟವಾಡುತ್ತಿದ್ದಾನೆ. ಈ ವೇಳೆ ಯಾರದು ನಿನ್ನ ತರಾನೆ ಇದಾರೆ ಎಂದು ಮೇಘನಾ ಕೇಳಿದ್ದಾರೆ. ಆಗ ರಾಯನ್ ಕೂಗಾಡಿ, ನಕ್ಕಿದ್ದಾನೆ.
View this post on Instagram
ಮೇಘನಾ ರಾಜ್ ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟಿವ್ ಆಗಿದ್ದು, ರಾಯನ್ ರಾಜ್ ಸರ್ಜಾ ಫೋಟೋ ಹಾಗೂ ವೀಡಿಯೋಗಳನ್ನು ಆಗಾಗ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಇತ್ತೀಚೆಗಷ್ಟೇ ರಾಯನ್ ಸೂಪರ್ ಮ್ಯಾನ್ ಬ್ಯಾಂಡ್ ಧರಿಸಿರುವ ಫೋಟೋವನ್ನು ಹಂಚಿಕೊಂಡಿದ್ದರು. ಇದನ್ನೂ ಓದಿ: ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಗುವಿನ ನೆರವಿಗೆ ಸಹಾಯ ಕೋರಿದ ಮಂಜು
ಇತ್ತೀಚೆಗಷ್ಟೇ ರಾಯನ್ ರಾಜ್ ಸರ್ಜಾ ನಾಮಕರಣವನ್ನು ಅದ್ಧೂರಿಯಾಗಿ ಹಿಂದೂ ಹಾಗೂ ಕ್ರೈಸ್ತ ಸಂಪ್ರದಾಯದಂತೆ ಮಾಡಲಾಗಿದ್ದು, ಸಿನಿ ತಾರೆಯರು, ಗಣ್ಯರು, ಕುಟುಂಬಸ್ಥರು ಹಾಗೂ ಸ್ನೇಹಿತರು ಭಾಗಿಯಾಗಿದ್ದರು. ಈ ವೇಳೆ ಪೋಸ್ಟ್ ಮಾಡಿ, ಪುಟ್ಟ ರಾಯನ್ ರಾಜ್ ಸರ್ಜಾಗೆ ದೇವರು ಪ್ರಪಂಚದ ಪ್ರತಿಯೊಂದು ಸಂತೋಷವನ್ನು ನೀಡಲಿ ಎಂದು ಬರೆದುಕೊಂಡಿದ್ದರು. ರಾಯನ್ ರಾಜ್ ಸರ್ಜಾ ಎಂಬ ಹೆಸರಿನ ಬಗ್ಗೆ ಸಹ ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತವಾಗಿತ್ತು. ಇದಕ್ಕೆ ಖುದ್ದು ಮೇಘನಾ ಸ್ಪಷ್ಟನೆ ನೀಡಿದ್ದರು.