ಧಾರವಾಡ: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಚಿರತೆ ಬಂತು ಚಿರತೆ ಕಥೆಯಿಂದ ಜನರಲ್ಲಿ ಅತಂಕ ಮನೆ ಮಾಡಿದೆ.
ಮೊದಲು ಹುಬ್ಬಳ್ಳಿ ನಗರದ ನೃಪತುಂಗ ಬೆಟ್ಟದಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂದು ಜನರು ಮಾಹಿತಿ ಕೊಟ್ಟಿದ್ದರು. ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಬೆಟ್ಟದಲ್ಲಿ ಹುಟುಕಾಟ ನಡೆಸಿತ್ತು. ಆದರೆ ನಿನ್ನೆಯಷ್ಟೇ ಅದೇ ಚಿರತೆ ಧಾರವಾಡ ಸಮೀಪದ ಕವಲಗೇರಿ ಗ್ರಾಮದ ಬಳಿ ರೈತರ ಹೊಲದಲ್ಲಿ ಕಾಣಿಸಿಕೊಂಡಿದೆ. ಇದನ್ನೂ ಓದಿ: ಅಂಗನವಾಡಿ ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್ ಮಿಕ್ಸ್
ಈಗ ಮತ್ತೊಂದು ಮಾಹಿತಿ ಸಿಕ್ಕಿದ್ದು, ಆ ಚಿರತೆ ಈಗ ಧಾರವಾಡ ಬೆಳಗಾವಿ ಗಡಿ ಭಾಗದ ತುಪ್ಪರಿ ಹಳ್ಳದ ಕಬ್ಬೇನೂರ ಹಾಗೂ ಕಲ್ಲೇ ಗ್ರಾಮದ ಕಡೆ ಬಂದಿದೆ ತಿಳಿದು ಬಂದಿದೆ. ಈ ಚಿರತೆ ಅರಣ್ಯ ಇಲಾಖೆಯ ಕಣ್ಣಿಗೆ ಸಿಗುತ್ತಿಲ್ಲ. ಆದರೆ ಜನರ ಕಣ್ಣಿಗೆ ಮಾತ್ರ ಕಾಣಿಸುತ್ತಿದೆ.
ಎಲ್ಲಿ ಚಿರತೆ ಬಂದಿದೆ ಅಂತಾ ಮಾಹಿತಿ ಬರುತ್ತೋ, ಅಲ್ಲಿಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಹೋಗಿ ಸಂಜೆವರೆಗೆ ಹುಡುಕಾಟ ನಡೆಸಿ ವಾಪಸ್ ಬರುತ್ತಿದ್ದಾರೆ. ಮತ್ತೆ ಮರುದಿನ ಚಿರತೆಗಾಗಿ ಹುಡುಕಾಟ ನಡೆದಿದೆ. ಸದ್ಯ ಚಿರತೆ ಹುಡುಕಾಟದಲ್ಲಿರುವ ಸಿಬ್ಬಂದಿಗೆ ಚಿರತೆ ಸಿಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾತ್ರ ಚಿರತೆ ಬಂತು ಚಿರತೆ ಎಂಬ ಜನರ ಆಟಕ್ಕೆ ತಾಳ ಹಾಕುವಂತಾಗಿದೆ. ಇದನ್ನೂ ಓದಿ: ಅಮೆರಿಕದಲ್ಲಿ ಕೋವಿಡ್ 19, ಭಯೋತ್ಪಾದನೆ, ಹವಾಮಾನ ವೈಪರೀತ್ಯ ಬಗ್ಗೆ ಮಾತನಾಡುತ್ತೇನೆ – ಮೋದಿ