ಬೆಂಗಳೂರು: ಕಳೆದ ಎರಡು, ಮೂರು ದಿನಗಳಿಂದ ಬೆಂಗಳೂರು ಸೇರಿದಂತೆ ನಾನಾ ನಗರಗಳಲ್ಲಿ ತಾಪಮಾನ ವಾಡಿಕೆಗಿಂತ ಹೆಚ್ಚಾಗಿದೆ. ಮಳೆಗಾಲದಲ್ಲಿ ಸೆಖೆಯ ವಾತಾವರಣ ಸೃಷ್ಟಿಯಾಗಿದೆ.
ಸಾಮಾನ್ಯವಾಗಿ ಗೌರಿ, ಗಣೇಶ ಹಬ್ಬದ ಸಮಯದಲ್ಲಿ ಜಿಡಿ ಮಳೆಯಿರುತ್ತದೆ. ಬಿಸಿಲಿನ ತಾಪ ಕಡಿಮೆಯಿರುತ್ತದೆ. ಆದರೆ ರಾಜ್ಯದಲ್ಲಿ ಬೇಸಿಗೆಯ ವಾತಾವರಣ ಉಂಟಾಗಿದೆ. ಬೆಂಗಳೂರಿನಲ್ಲಿ ತಾಪಮಾನ ದಿಢೀರ್ 30 ಡಿಗ್ರಿಗೆ ಏರಿಕೆಯಾಗಿದೆ. ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ಭೇಟಿ ನೀಡಬಹುದು – ಜಿಲ್ಲಾಡಳಿತದಿಂದ ನಿರ್ಬಂಧ ತೆರವು
ಬೆಂಗಳೂರಿನಲ್ಲಿ ಶುಕ್ರವಾರ ಸಂಜೆ ಮಳೆಯಾದರೂ ಸೆಖೆಯ ವಾತಾವರಣ ಇತ್ತು. ಶನಿವಾರ ಕೂಡ ಹಬೆ ಹೆಚ್ಚಾಗಿತ್ತು. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಬಹುದು. ಇದು ವಾಡಿಕೆಗಿಂತ ಅಧಿಕ ತಾಪಮಾನ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದನ್ನೂ ಓದಿ: ದಾರಿ ಮಧ್ಯೆ ಹೋಟೆಲ್‍ನಲ್ಲಿ ಸಾರ್ವಜನಿಕರಂತೆ ಟೀ ಕುಡಿದ ಸಿಎಂ
ಈ ಬಾರಿ ಮಳೆಗಾಲದಲ್ಲಿ ಕೂಡ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಅದರಲ್ಲೂ ಮೈಸೂರು ಭಾಗದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಕೆರೆ-ಕಟ್ಟೆಗಳು ಬಣಗುಡುತ್ತಿವೆ. ಇದರ ನಡುವೆ ಸೆಪ್ಟೆಂಬರ್‌ನಲ್ಲಿ ತಾಪಮಾನ ಹೆಚ್ಚಾಗಿದ್ದು, ಸಾಕಷ್ಟು ಕಳವಳಕ್ಕೆ ಕಾರಣವಾಗಿದೆ.