Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bellary

ಗಾಂಧಿ ಜಯಂತಿಯಂದು 31ನೇ ಜಿಲ್ಲೆ ವಿಜಯನಗರಕ್ಕೆ ಅಧಿಕೃತ ಚಾಲನೆ

Public TV
Last updated: September 19, 2021 9:16 am
Public TV
Share
2 Min Read
ANAND SINGH
SHARE

ವಿಜಯನಗರ: ರಾಜ್ಯದ 31ನೇ ಜಿಲ್ಲೆಯಾಗಿ ಉದಯವಾಗಿರುವ ವಿಜಯನಗರ ಜಿಲ್ಲೆಯ ಉದ್ಘಾಟನೆ ಅಕ್ಟೋಬರ್ 2 ರ ಗಾಂಧಿ ಜಯಂತಿಯಂದು ನಡೆಯಲಿದೆ. ಕಳೆದ ಫೆಬ್ರವರಿಯಲ್ಲಿ ಅಧಿಕೃತ ಘೋಷಣೆಯಾಗಿದ್ದ ವಿಜಯನಗರ ಜಿಲ್ಲೆಗೆ ಹಾಲಿ ಸಿಎಂ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಇಬ್ಬರು ಸೇರಿ ಸರಳವಾಗಿ ಚಾಲನೆ ನೀಡಲಿದ್ದಾರೆ.

Anand Singh 3

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಳ್ಳಾರಿ ವಿಜಯನಗರ ಜಿಲ್ಲೆಗಳ ಉಸ್ತುವಾರಿ ಸಚಿವ ಆನಂದ್ ಸಿಂಗ್, ಗಾಂಧಿ ಜಯಂತಿ ದಿನ ರಾಜ್ಯದ ನೂತನ ಜಿಲ್ಲೆ ವಿಜಯನಗರಕ್ಕೆ ಚಾಲನೆ ಸಿಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಬೋಟ್‍ನಲ್ಲಿ ನದಿ ದಾಟಿ ರೈತರ ಮನೆಯಂಗಳದಲ್ಲಿ ‘ಅನ್ನದಂಗಳದ ಮಾತುಕತೆ’

ಸಾಕಷ್ಟು ವಿರೋಧದ ನಡುವೆಯೂ ಬಳ್ಳಾರಿ ಜಿಲ್ಲೆಯನ್ನು ವಿಭಜನೆ ಮಾಡಿ ವಿಜಯನಗರ ಜಿಲ್ಲೆಯನ್ನು ಘೋಷಣೆ ಮಾಡಿರೋ ರಾಜ್ಯ ಸರ್ಕಾರದ ನಡೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಕಳೆದ ಫೆಬ್ರವರಿ 8 ರಂದು ಅಧಿಕೃತವಾಗಿ ವಿಜಯನಗರ ಜಿಲ್ಲೆಯನ್ನು ಘೋಷಣೆ ಮಾಡಲಾಗಿತ್ತು. ಆದರೆ ಯಾವುದೇ ವ್ಯವಸ್ಥೆಗಳನ್ನು ನೀಡಿರಲಿಲ್ಲ. ಆದರೆ ಇದೀಗ ಅ.2 ರಂದು ಸಿಎಂ ಬಸವರಾಜ್ ಬೊಮ್ಮಾಯಿ ಮತ್ತು ಮಾಜಿ ಸಿಎಂ ಯಡಿಯೂರಪ್ಪನವರು ಸೇರಿದಂತೆ ಅನೇಕ ಗಣ್ಯರು ನೂತನ ಜಿಲ್ಲೆಗೆ ಚಾಲನೆ ನೀಡಲಿದ್ದಾರೆ ಎಂದರು.

Anand Singh 1

ಸಿಎಂ ಬಸವರಾಜ್ ಬೊಮ್ಮಾಯಿಯವರು ವಿಜಯನಗರ ಜಿಲ್ಲೆಗೆ ಚಾಲನೆ ನೀಡುವುದರ ಜೊತೆಗೆ ನಾನಾ ಅಭಿವೃದ್ಧಿ ಕಾರ್ಯಗಳಿಗೂ ಕೂಡ ಚಾಲನೆ ನೀಡಲಿದ್ದಾರೆ. ಜಿಲ್ಲೆ ಕಾರ್ಯಾರಂಭ ಮಾಡುವ ಸಂದರ್ಭದಲ್ಲಿ ಅನೇಕ ಸವಾಲುಗಳಿರುತ್ತವೆ. ಕಚೇರಿಗಳ ಕಾರ್ಯಾರಂಭ ಮಾಡುವುದು, ಯುವ ಮತ್ತು ಉತ್ಸಾಹಿ ಹಾಗೂ ಅನುಭವಿ ಅಧಿಕಾರಿಗಳನ್ನು ಕರೆತರುವುದು. ಈ ಭಾಗದ ಜನರು ವಿವಿಧ ಸರ್ಕಾರಿ ಸೌಲಭ್ಯಗಳಿಗೆ ಬಳ್ಳಾರಿಗೆ ಅಲೆದಾಡುವುದನ್ನು ತಪ್ಪಿಸಿ, ಎಲ್ಲ ಸೌಲಭ್ಯಗಳನ್ನು ವಿಜಯನಗರದಲ್ಲಿ ಸಿಗುವಂತೆ ನೋಡಿಕೊಳ್ಳಬೇಕಿದೆ. ಕೊಪ್ಪಳ ಮತ್ತು ಯಾದಗಿರಿ ಜಿಲ್ಲೆಗಳು ಆರಂಭ ಮಾಡುವ ಸಂದರ್ಭದಲ್ಲಾದ ಲೋಪಗಳನ್ನು ಗಮನದಲ್ಲಿಟ್ಟುಕೊಂಡು ಈ ಜಿಲ್ಲೆಯಲ್ಲಿ ಆ ರೀತಿಯ ಸಮಸ್ಯೆಗಳಾಗದಂತೆ ಜಿಲ್ಲೆಯನ್ನು ಕಟ್ಟುವ ಮೂಲಕ ಮಾದರಿ ಜಿಲ್ಲೆಯನ್ನಾಗಿ ರೂಪಿಸಲಾಗುವುದು ಎಂದು ಸಚಿವ ಆನಂದ್ ಸಿಂಗ್ ಆಶಾಭಾವನೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು ಹೊರವಲಯದಲ್ಲಿ ರೇವ್ ಪಾರ್ಟಿ- ಅರೆನಗ್ನ ಸ್ಥಿತಿಯಲ್ಲಿ ಯುವತಿಯರ ಡ್ಯಾನ್ಸ್

anand singh

ಹೊಸಪೇಟೆಯ ಟಿಎಸ್‍ಪಿ ಕಚೇರಿ ಆವರಣದಲ್ಲಿ ಸ್ಥಾಪಿಸಲಾಗುತ್ತಿರುವ ಜಿಲ್ಲಾಡಳಿತ ಕಟ್ಟಡ 6 ಕೋಟಿ ರೂ. ವೆಚ್ಚದಲ್ಲಿ ನವೀಕರಣಗೊಳ್ಳುತ್ತಿದೆ. ಈಗಾಗಲೇ 3 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಕಾರಿಗನೂರ ಬಳಿಯ ಇಎಸ್‍ಐ ಕಟ್ಟಡದಲ್ಲಿ ಎಸ್ಪಿ ಕಚೇರಿ ಸ್ಥಾಪಿಸಲಾಗುತ್ತಿದೆ. ಟಿಎಸ್‍ಪಿ ಕಚೇರಿ ಆವರಣದಲ್ಲಿಯೇ 35 ಎಕರೆ ವಿಶಾಲ ಜಾಗದಲ್ಲಿ ಮೆಡಿಸಿಟಿ ಸ್ಥಾಪಿಸಲಾಗುತ್ತಿದೆ ಎಂದರು. ಇದರಲ್ಲಿ 110 ಕೋಟಿ ವೆಚ್ಚದ 250 ಹಾಸಿಗೆ ಆಸ್ಪತ್ರೆ, ಮೆಡಿಕಲ್ ಕಾಲೇಜು, ನಸಿರ್ಂಗ್ ಕಾಲೇಜುಗಳಿರಲಿವೆ. ಒಟ್ಟಾರೆ ವಿಜಯನಗರ ಜಿಲ್ಲೆಯ ಜಿಲ್ಲಾಡಳಿತ ಕಾರ್ಯಾರಂಭಕ್ಕೆ ಮುಹೂರ್ತ ಕೂಡಿ ಬಂದಿದ್ದು, ಈ ಭಾಗದ ಜನರಿಗೆ ಸಾಕಷ್ಟು ಖುಷಿ ತಂದಿದೆ.

TAGGED:B.S.YadiyurappaBasavaraja Bommaibellaryvijayanagaraಆನಂದ್ ಸಿಂಗ್ಗಾಂಧಿ ಜಯಂತಿಬಸವರಾಜ ಬೊಮ್ಮಾಯಿಬಳ್ಳಾರಿಬಿ.ಎಸ್.ಯಡಿಯೂರಪ್ಪವಿಜಯನಗರ
Share This Article
Facebook Whatsapp Whatsapp Telegram

Cinema news

Sushmita Bhat
ಕರಾವಳಿ ಟೀಮ್ ಸೇರಿಕೊಂಡ ನಟಿ ಸುಷ್ಮಿತಾ ಭಟ್
Cinema Latest Sandalwood Top Stories
Nadubettu Appanna
ಕೋಲ್ಕತ್ತಾ ಸಿನಿಮೋತ್ಸವಕ್ಕೆ ನಡುಬೆಟ್ಟು ಅಪ್ಪಣ್ಣ; ಶರಧಿ ಡೈರೆಕ್ಟರ್
Cinema Latest Sandalwood Top Stories
Risha Gowda
ಗಿಲ್ಲಿಗೆ ಹೊಡೆದಿದ್ದಕ್ಕೆ ರಿಷಾಗೆ ಪಶ್ಚಾತ್ತಾಪ ಆಯ್ತಾ..?
Cinema Latest Top Stories TV Shows
bigg boss kannada 12
ಬಿಗ್‌ ಬಾಸ್‌ ಅರಮನೆಯಲ್ಲಿ ಸ್ಪೆಷಲ್‌ ಗೆಸ್ಟ್‌ಗಳ ದರ್ಬಾರ್‌; ಪಾರ್ಟಿ ಮಾಡೋಕೆ ಬಂದಿದ್ದಾರೆ ಮಾಜಿ ಸ್ಪರ್ಧಿಗಳು
Cinema Latest Top Stories TV Shows

You Might Also Like

Haveri Farmers Protest
Districts

Haveri | ಮೆಕ್ಕೆಜೋಳಕ್ಕೆ 3,000 ರೂ. ದರ ನೀಡುವಂತೆ ರೈತರ ಅನಿರ್ದಿಷ್ಟಾವಧಿ ಪ್ರತಿಭಟನೆ

Public TV
By Public TV
18 minutes ago
BY Vijayendra
Bengaluru City

ಅಂಧರ ಮಹಿಳಾ ಟಿ20 ಕ್ರಿಕೆಟ್ ವಿಶ್ವಕಪ್ ಗೆಲುವು ಚಾರಿತ್ರಿಕ ದಾಖಲೆ – ವಿಜಯೇಂದ್ರ

Public TV
By Public TV
38 minutes ago
dk shivakumar 1 6
Districts

ನಾಯಕತ್ವ ಬದಲಾವಣೆ ಐದಾರು ಜನರ ಗುಟ್ಟಿನ ವ್ಯಾಪಾರ, ಬಹಿರಂಗವಾಗಿ ಚರ್ಚಿಸಲ್ಲ: ಡಿಕೆಶಿ

Public TV
By Public TV
39 minutes ago
Shubhanshu Shukla Bengaluru
Bengaluru City

20 ದಿನಗಳ ಗಗನಯಾನಕ್ಕೆ 5 ವರ್ಷಗಳ ತರಬೇತಿ ಪಡೆದಿದ್ದೆ: ಶುಭಾಂಶು ಶುಕ್ಲಾ

Public TV
By Public TV
40 minutes ago
Himanta Biswa Sarma
Latest

ಜುಬೀನ್ ಗಾರ್ಗ್ ಸಾವು – ಇದು ಆಕಸ್ಮಿಕವಲ್ಲ, ಕೊಲೆ: ಹಿಮಂತ ಬಿಸ್ವಾ ಶರ್ಮಾ ಸ್ಫೋಟಕ ಹೇಳಿಕೆ

Public TV
By Public TV
58 minutes ago
H Vishwanath
Bengaluru City

ಸಿದ್ದರಾಮಯ್ಯ ಡಿಕೆಶಿಗೆ ಸಿಎಂ ಸ್ಥಾನ ಬಿಟ್ಟುಕೊಡಬೇಕು: ಹೆಚ್.ವಿಶ್ವನಾಥ್

Public TV
By Public TV
60 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?