100 ರೂ.ಗೆ ಉಗಾಂಡ ಪ್ರಜೆಗಳ ಕಿರಿಕ್ – ಕ್ಯಾಬ್ ಚಾಲಕನಿಗೆ ಅಂಗಾಂಗ ತೋರಿಸಿ ಯುವತಿಯರ ವಿಕೃತಿ

Public TV
2 Min Read
uganda man detained Who Attacked OLA Cab Driver Bengaluru 1

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಉಗಾಂಡ ಪ್ರಜೆಗಳ ಅಟ್ಟಹಾಸ ಇನ್ನೂ ನಿಂತಿಲ್ಲ. ಜಿಸಿ ನಗರದಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿದ ಬಳಿಕ ಸೈಲೆಂಟ್ ಆಗಿದ್ದ ಉಗಾಂಡ ಪ್ರಜೆಗಳು ಶನಿವಾರ ಕ್ಯಾಬ್ ಚಾಲಕನಿಗೆ ಚಪ್ಪಲಿ ತೋರಿಸಿ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಮಹಿಳೆಯರು ಖಾಸಗಿ ಅಂಗಾಂಗ ತೋರಿಸಿ ವಿಕೃತಿ ಮೆರೆದಿದ್ದಾರೆ.

ರಾತ್ರಿ ಕಾಲೇಜು ಒಂದರ ಕಾರ್ಯಕ್ರಮದ ನಿಮಿತ್ತ ರಾಜಾಜಿನಗರದ ಪ್ರತಿಷ್ಠಿತ ಹೋಟೆಲ್‍ನಲ್ಲಿ ಉಗಾಂಡ ಪ್ರಜೆಗಳು ಸೇರಿದ್ದರು. 10 ಗಂಟೆಗೆ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಓಲಾ ಕ್ಯಾಬ್ ಬುಕ್ ಮಾಡಿದ್ದಾರೆ. ಸ್ಥಳಕ್ಕೆ ಬಂದ ಕ್ಯಾಬ್ ಚಾಲಕ ಶ್ರೀಕಾಂತ್ ಅವರು ಪ್ಯಾಸೆಂಜರ್ ಬಳಿ ಓಟಿಪಿ ಪಡೆದು ಓಕೆ ಮಾಡಿದ್ದಾರೆ.

uganda man detained Who Attacked OLA Cab Driver Bengaluru 5

ಕ್ಯಾಬ್ ಬುಕ್ ಮಾಡುವಾಗ 4 ಮಂದಿ ಮಾತ್ರ ಸ್ಥಳದಲ್ಲಿ ಇದ್ದರು. ಕಾರು ಬಂದ ಬಳಿಕ ಮತ್ತೊಬ್ಬ ಬಂದಿದ್ದಾನೆ. ಐವರು ಇರುವುದನ್ನು ನೋಡಿ ಕಾರಿನಲ್ಲಿ 5 ಮಂದಿಯನ್ನು ಕರೆದುಕೊಂಡು ಹೋಗಲು ಸಾಧ್ಯವಿಲ್ಲ ಎಂದು ಶ್ರೀಕಾಂತ್ ಹೇಳಿದ್ದಾರೆ.

uganda man detained Who Attacked OLA Cab Driver Bengaluru 4

4 ಮಂದಿ ಬರುವುದಿದ್ದರೆ ಮಾತ್ರ ನಾನು ಕಾರಿನಲ್ಲಿ ಕರೆದುಕೊಂಡು ಹೋಗುತ್ತೇನೆ ಎಂದಿದ್ದಾರೆ. ಇದಕ್ಕೆ ಅವರು ಒಪ್ಪದೇ ಟ್ರಿಪ್ ಕ್ಯಾನ್ಸಲ್ ಮಾಡಿದ್ದಾರೆ. ಇದನ್ನು ಕಂಡು ಟ್ರಿಪ್ ರದ್ದು ಮಾಡಿದ್ದಕ್ಕೆ 100 ರೂ. ಚಾರ್ಜ್ ಕೇಳಿದ್ದಾರೆ. ಇದಕ್ಕೆ ರಾದ್ಧಾಂತವೇ ನಡೆದಿದ್ದು, ಕೆರಳಿ ನಿಂತ ಉಗಾಂಡ ಯುವತಿಯರು ಮನಬಂದಂತೆ ಅಸಭ್ಯವಾಗಿ ವರ್ತಿಸಿದ್ದಾರೆ. ಅಂಗಾಂಗ ತೋರಿಸಿ ವಿಕೃತಿ ಮರೆದಿದ್ದಾರೆ.

uganda man detained Who Attacked OLA Cab Driver Bengaluru 2

ಹೋಟೆಲ್ ಆವರಣದಲ್ಲಿ ಮತ್ತಷ್ಟು ಉಗಾಂಡ ಪ್ರಜೆಗಳು ಜಮಾಯಿಸಿದ್ದಾರೆ. ಕ್ಯಾಬ್ ಚಾಲಕ ಶ್ರೀಕಾಂತ್ ಅವರನ್ನು ಹಿಗ್ಗಾಮುಗ್ಗ ಎಳೆದಾಡಿದ್ದಾರೆ. ಮಹಿಳೆಯರು ಚಪ್ಪಲಿಯಿಂದ ಥಳಿಸಿದ್ದಾರೆಂದು ಶ್ರೀಕಾಂತ್ ಆರೋಪಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ಕ್ಯಾಬ್ ಚಾಲಕ ಶ್ರೀಕಾಂತ್ ಅವರ ಸ್ನೇಹಿತರು ಕೂಡ ಅಲ್ಲಿಗೆ ಬಂದಿದ್ದಾರೆ. ಇದನ್ನೂ ಓದಿ: ಬೆಂಗಳೂರು ಹೊರವಲಯದಲ್ಲಿ ರೇವ್ ಪಾರ್ಟಿ- ಅರೆನಗ್ನ ಸ್ಥಿತಿಯಲ್ಲಿ ಯುವತಿಯರ ಡ್ಯಾನ್ಸ್ 

uganda man detained Who Attacked OLA Cab Driver Shrikanth Bengaluru

ಘಟನೆಗೆ ಸಂಬಂಧ ಪಟ್ಟಂತೆ ಸುಬ್ರಹ್ಮಣ್ಯನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಕಿರಿಕ್ ಮಾಡಿದ್ದ ಉಗಾಂಡ ಪ್ರಜೆ ಲುಬೆಗಾ ರೇಮಂಡ್ ನನ್ನು ವಶಕ್ಕೆ ಪಡೆಯಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಲುಬೆಗಾ ರೇಮಂಡ್ ನನ್ನು  ವಶಕ್ಕೆ ಪಡೆದ ವಿಚಾರ ತಿಳಿದ ಆಫ್ರಿಕನ್ ವಿದ್ಯಾರ್ಥಿಗಳ ಮುಖಂಡ ಪೊಲೀಸ್ ಠಾಣೆಗೆ ಆಗಮಿಸಿದ್ದ. ಇದನ್ನೂ ಓದಿ: ಪಂಜಾಬ್ ಸಿಎಂ ರೇಸ್‍ನಲ್ಲಿ ಅಚ್ಚರಿಯ ಹೆಸರು?

ಘಟನೆಯಲ್ಲಿ ಭಾಗಿಯಾಗಿದ್ದ ಯುವತಿಯರನ್ನ ಇಂದು 10 ಗಂಟೆಗೆ ಠಾಣೆಗೆ ವಿಚಾರಣೆಗೆ ಕರೆತರುವಂತೆ ಉಗಾಂಡ ವಿದ್ಯಾರ್ಥಿಗಳ ಮುಖಂಡನಿಗೆ ಪೊಲೀಸರು ನೋಟಿಸ್ ಕೊಟ್ಟು ಕಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *