ದೇವಸ್ಥಾನ ಕೆಡವಿ ಹಿಂದೂ ಧರ್ಮಕ್ಕೆ ದ್ರೋಹ: ದಿಂಗಾಲೇಶ್ವರ ಶ್ರೀ

Public TV
2 Min Read
dwd dingaleshwara swamiji 1

ಧಾರವಾಡ: ಅಧ್ಯಯನ ಮಾಡದೇ ದೇವಸ್ಥಾನ ಕೆಡವಿದ್ದು ಹಿಂದೂ ಧರ್ಮಕ್ಕೆ ಮಾಡಿದ ದ್ರೋಹ ಎಂದು ದಿಂಗಾಲೇಶ್ವರ ಶ್ರೀಗಳು ಸರ್ಕಾರದ ವಿರುದ್ಧ ಕಿಡಿಕಾರಿದರು.

swamiji

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಅಧಿಕಾರಿಗಳು ಮೈಸೂರಿನಲ್ಲಿ ದೇವಸ್ಥಾನ ಕೆಡವಿ ವಿವಾದಕ್ಕೆ ಸೃಷ್ಟಿ ಮಾಡಿದ್ದಾರೆ. ಇದರಿಂದ ಸರ್ಕಾರದಲ್ಲಿ ಎಷ್ಟು ಬುದ್ಧಿಗೇಡಿ ಅಧಿಕಾರಿಗಳು ಕೆಲಸ ಮಾಡುತಿದ್ದಾರೆ ಎಂದು ತಿಳಿಯುತ್ತಿದೆ. ಯಾವುದೇ ಅಧ್ಯಯನ ನಡೆಸದೇ ದೇವಸ್ಥಾನ ಕೆಡವಿ ಹಿಂದೂ ಧರ್ಮಕ್ಕೆ ದ್ರೋಹ ಮಾಡಿದ್ದಾರೆ ಎಂದು ಬಾಲೇಹೊಸೂರ ಮಠದ ದಿಂಗಾಲೇಶ್ವರ ಶ್ರೀಗಳು ಹೇಳಿದರು. ಇದನ್ನೂ ಓದಿ: ಲಸಿಕೆಯಲ್ಲಿ ಭಾರತದ ವಿಶ್ವ ದಾಖಲೆ ನೋಡಿ ರಾಜಕೀಯ ಪಕ್ಷವೊಂದಕ್ಕೆ ಜ್ವರ ಬಂದಿದೆ: ಮೋದಿ

temple 6

ಇದೇ ವೇಳೆ ಮೈಸೂರಿನ ನಿರಂಜನ ಮಠ ವಿವಾದಕ್ಕೆ ಪ್ರತಿಕ್ರಿಯಿಸಿದ ಅವರು, ಅದು ವೀರಶೈವ ಮಠ. 1892 ರಲ್ಲಿ ಸ್ವಾಮಿ ವಿವೇಕಾನಂದರು ಪ್ರವಚನ ಮಾಡಲು ಬಂದಿದ್ದರು. ಸದಾನಂದಗೌಡರು ಸಿಎಂ ಇದ್ದಾಗ ನಿರಂಜನ ಮಠದ ಜಾಗವನ್ನು ಯಾರನ್ನು ಕೇಳದೇ ರಾಮಕೃಷ್ಣ ಆಶ್ರಮಕ್ಕೆ ಬಿಟ್ಟು ಕೊಟ್ಟಿದ್ದಾರೆ. ಆಗ ಸರ್ಕಾರ ತೆಗೆದುಕೊಂಡ ಈ ನಿರ್ಧಾರ ತಪ್ಪು. ಈಗಲೂ ಬಿಜೆಪಿ ಸರ್ಕಾರ ಇದೆ. ಆ ತಪ್ಪನ್ನ ಸರಿಪಡಿಸಲಿ ಎಂದರು.

swamiji 1

ಬಿಜೆಪಿ ಸರ್ಕಾರ ವೀರಶೈವ ದೇವಾಲಯ ಕೆಡವಿ ಕೆಟ್ಟ ಪ್ರವೃತ್ತಿ ತರುತ್ತಿದೆ. ಸಿಎಂ ಅವರದೇ ಕ್ಷೇತ್ರದಲ್ಲಿ ಇರುವ ಬಂಕಾಪೂರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅನ್ಯ ಧರ್ಮದ ದೇವಾಲಯ ಇದೆ. ಅದನ್ನ ಕೆಡವಲು ತಾಕತ್ ಇದೀಯಾ ಎಂದ ದಿಂಗಾಲೇಶ್ವರ ಶ್ರೀಗಳು, ವೀರಶೈವ ಮಠ ಮಂದಿರಗಳನ್ನ ರಕ್ಷಣೆ ಮಾಡಬೇಕು ಕೆಡವಿದ ದೇವಾಲಯ ನಿರ್ಮಾಣ ಮಾಡಲು ಮುಂದಾಗಬೇಕು ಎಂದರು.  ಇದನ್ನೂ ಓದಿ: ನೆಲ್ಯಾಡಿಯ ಉದನೆ ತೂಗು ಸೇತುವೆಯಲ್ಲಿ ಬ್ಯಾಗ್, ಚಪ್ಪಲಿ ಪತ್ತೆ- ಆತ್ಮಹತ್ಯೆ ಶಂಕೆ

ಇದೇ ವೇಳೆ ಕೂಡಲ ಸಂಗಮ ಜಯಮೃತ್ಯುಂಜಯ ಸ್ವಾಮೀಜಿ ಪಾದಯಾತ್ರೆ ಮಾಡಿದ ವಿಚಾರವಾಗಿ ಮಾತನಾಡಿದ ಶ್ರೀಗಳು, ಅದು ಅವರ ಹಕ್ಕು, ನನಗೆ ವೀರಶೈವ ಲಿಂಗಾಯತರ ಎಲ್ಲಾ ಪಂಗಡಗಳನ್ನು ಒಬಿಸಿ ಪಟ್ಟಿಗೆ ಸೇರಿಸಬೇಕು ಎಂಬ ಆಸೆಯಿದೆ. ನಾವು ಇಬ್ಬರು ಕ್ಲಬ್ ಆಗಿ ಕೆಲಸ ಮಾಡುತ್ತೇವೆ. ಆ ಬಗ್ಗೆ ನಾನು ಅವರ ಜೊತೆ ಮಾತನಾಡಿದ್ದೇನೆ. ನನ್ನ ಆರೋಗ್ಯ ಸರಿಯಿರದ ಕಾರಣ ಅವರ ಪಾದಯಾತ್ರೆಗೆ ಹೋಗಲಿಲ್ಲ ಎಂದು ಹೇಳಿದರು.

ನಾವು ತಪ್ಪು ಮಾಡಿದವರಿಗೆ ಶಿಕ್ಷಿಸುವಷ್ಟು ಸಮರ್ಥರಿದ್ದೇವೆ. ರಾಜಕಾರಣಿಗಳಿಗೆ ಧಾರ್ಮಿಕ ಮನೋಭಾವನೆ ಕಡಿಮೆಯಾಗುತ್ತಿದೆ. ತಿದ್ದಿಕೊಂಡರೆ ಒಂದು ತಿದ್ದಿಕೊಳ್ಳದಿದ್ದರೆ ಮತ್ತೊಂದು ಎಂದರು ಎಚ್ಚರಿಕೆ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *