ಬಿಗ್‍ಬಾಸ್‍ನಿಂದ ಹೊರಬಂದ ಬಳಿಕ ದಾಖಲೆ ಬರೆದ ವೈಷ್ಣವಿ

Public TV
2 Min Read
vaishnavi

ಬೆಂಗಳೂರು: ಬಿಗ್‍ಬಾಸ್ ಶೋಗೆ ಹೋಗಿಬಂದ ಬಳಿಕ ನಟಿ ವೈಷ್ಣವಿ ಹೊಸ ದಾಖಲೆ ಬರೆಯುವ ಮೂಲಕವಾಗಿ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಲ್ಲಿದ್ದಾರೆ.

ನಟಿ ವೈಷ್ಣವಿ ಗೌಡ (Vaishnavi Gowda) ಅವರು ಮೊದಲು ಕಿರುತೆರೆ ಮೂಲಕ ಎಲ್ಲರಿಗೂ ಪರಿಚಿತಗೊಂಡರು. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಅಗ್ನಿಸಾಕ್ಷಿ’ ಧಾರಾವಾಹಿ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಅದರಲ್ಲಿನ ಅವರ ಸನ್ನಿಧಿ ಪಾತ್ರಕ್ಕೆ ಫಿದಾ ಆದವರ ಸಂಖ್ಯೆ ಲೆಕ್ಕವಿಲ್ಲ. ಆನಂತರ ಬಿಗ್ ಬಾಸ್‍ಗೆ ಹೋದಮೇಲಂತೂ ಅಭಿಮಾನಿಗಳಿಗೆ ವೈಷ್ಣವಿ ಮೇಲಿನ ಪ್ರೀತಿ ಹೆಚ್ಚಾಗಿತ್ತು. ಅವರ ತಾಳ್ಮೆ, ಸಹನೆ ಕಂಡು ವಾವ್ ಎಂದಿದ್ದರು. ಇದೀಗ ವೈಷ್ಣವಿ ಹೊಸದೊಂದು ದಾಖಲೆ ಬರೆದಿದ್ದಾರೆ.

 

View this post on Instagram

 

A post shared by Vaishnavi (@iamvaishnavioffl)

ವೈಷ್ಣವಿ ಈಗ ಇನ್‍ಸ್ಟಾಗ್ರಾಮ್‍ನಲ್ಲಿ ಬರೋಬ್ಬರಿ 1 ಮಿಲಿಯನ್ ಫಾಲೋವರ್ಸ್ ಆಗಿದ್ದಾರೆ. ಅಂದರೆ, 10 ಲಕ್ಷ ಮಂದಿ ಅವರನ್ನು ಫಾಲೋ ಮಾಡ್ತಾ ಇದ್ದಾರೆ. ಇನ್‍ಸ್ಟಾಗ್ರಾಮ್‍ನಲ್ಲಿ ವೈಷ್ಣವಿಗೆ 10 ಲಕ್ಷ ಜನರು ಫಾಲೋ ಮಾಡ್ತಾ ಇದ್ದು, ಆ ಖುಷಿಯನ್ನು ಒಂದು ಫೋಟೋ ಹಂಚಿಕೊಳ್ಳುವ ಮೂಲಕ ಹೇಳಿಕೊಂಡಿದ್ದಾರೆ ವೈಷ್ಣವಿ. ನನ್ನ ಕಡೆ 10 ಲಕ್ಷ ಹೃದಯಗಳು ಇವೆ ಎಂದು ಖುಷಿಯಾಗುತ್ತಿದೆ. ನಿಮ್ಮೆಲ್ಲರ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾಗಳು ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಮೋದಿ ಹುಟ್ಟುಹಬ್ಬದ ಪ್ರಯುಕ್ತ ಉಡುಪಿಯಲ್ಲಿ ಹಾಲು ಪಾಯಸ ವಿತರಣೆ

 

View this post on Instagram

 

A post shared by Vaishnavi (@iamvaishnavioffl)

ಬಿಗ್‍ಬಾಸ್ ಮನೆಗೆ ಹೋಗಿ ಬಂದಮೇಲೆ ವೈಷ್ಣವಿ ಜನಪ್ರಿಯತೆ ಹೆಚ್ಚಾಗಿರುವುದಕ್ಕೆ ಇದೇ ಸಾಕ್ಷಿಯಾಗಿದೆ. ಅಂದಹಾಗೆ, ಇನ್‍ಸ್ಟಾಗ್ರಾಮ್‍ನಲ್ಲಿ ಒಂದು ಮಿಲಿಯನ್‍ಗಿಂತಲೂ ಜಾಸ್ತಿ ಫಾಲೋವರ್ಸ್ ಹೊಂದಿರುವ ಕಿರುತೆರೆ ನಟಿಯರಲ್ಲಿ ವೈಷ್ಣವಿ 3ನೇ ಸ್ಥಾನದಲ್ಲಿದ್ದಾರೆ. ಮೊದಲೆರಡು ಸ್ಥಾನದಲ್ಲಿ ಅನುಶ್ರೀ ಮತ್ತು ದೀಪಿಕಾ ದಾಸ್ ಇದ್ದಾರೆ. ವಿಶೇಷವೆಂದರೆ, ಇವರೂ ಕೂಡ ಬಿಗ್‍ಬಾಸ್‍ಗೆ ಹೋಗಿಬಂದ ನಟಿಯರೇ ಆಗಿದ್ದಾರೆ. ಇದನ್ನೂ ಓದಿ:  ಜನ ಅಸಮಾನ್ಯ, ಅಭಿಮಾನಿಗಳ ತಲೆಗೆ ಹುಳ ಬಿಟ್ಟ ಉಪೇಂದ್ರ

vaishnavi 2 1

ಬಿಗ್‍ಬಾಸ್ ಶೋನಲ್ಲಿ ತಮ್ಮನ್ನು ಮದುವೆ ಆಗುವ ಹುಡುಗ ಹೇಗಿರಬೇಕು ಎಂದು ವೈಷ್ಣವಿ ಹೇಳಿಕೊಂಡಿದ್ದರು. ಮೀಸೆ-ದಾಡಿ ಇರಬೇಕು, ಆಡಂಬರವಿಲ್ಲದೇ ಸರಳವಾಗಿ ಇರಬೇಕು. ಈಗ ಜಗತ್ತು ಹೇಗೆ ನಡೆಯುತ್ತೆ ಅಂದ್ರೆ, ಜನರು ತುಂಬ ಗೊಂದಲ ಮಾಡ್ಕೊಂಡು ಯೋಚನೆ ಮಾಡ್ಕೊಂಡು ಇರ್ತಾರೆ. ಎಲ್ಲ ವಿಷಯವನ್ನು ಲೈಟ್ ಆಗಿ ತಗೋಬೇಕು. ಜೀವನವನ್ನು ಎಂಜಾಯ್ ಮಾಡಬೇಕು. ಜೀವನ ಅಂದ್ರೆನೇ ಕಷ್ಟ ಸುಖ ಎಲ್ಲ ಇರತ್ತೆ. ಅದನ್ನು ಸಿಂಪಲ್ ಆಗಿ ತಗೋಬೇಕು. ನಗ್ ನಗ್ತಾ ಇರಬೇಕು. ಅವರ ಪಾಡಿಗೆ ಅವರು ಆರಾಮಾಗಿದ್ರೆ ಸಾಕು. ಮಿಕ್ಕಿದ್ದೆಲ್ಲ ನಾನು ನೋಡ್ಕೋತಿನಿ ಎಂದು ಹೇಳಿದ್ದರು. ಬಿಗ್ ಬಾಸ್‍ನ ಮೊದಲ ಇನಿಂಗ್ಸ್ ಹೊರಬಂದಿದ್ದಾಗ ಅವರಿಗೆ 200ರಿಂದ 300 ಪ್ರಪೋಸಲ್‌  ಬಂದಿದ್ದವಂತೆ ಇನ್ನು, ನಾನು ಅರೆಂಜ್ ಮ್ಯಾರೇಜೇ ಆಗೋದು ಅಂತ ಮಂಜು ಬಳಿ ವೈಷ್ಣವಿ ಒಮ್ಮೆ ಹೇಳಿಕೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *