ಹುಬ್ಬಳ್ಳಿ: ಸಿಎಂ ಬಸವರಾಜ ಬೊಮ್ಮಾಯಿ ಆಪ್ತ ಸ್ನೇಹಿತ ಹಾಗೂ ಸಂಬಂಧಿಯಾಗಿದ್ದ ರಾಜು ಪಾಟೀಲ ಹೃದಯಾಘಾತದಿಂದ ಮೃತಪಟ್ಟ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿಯ ಶಕ್ತಿನಗರದ ನಿವಾಸಿಯಾಗಿದ್ದ ರಾಜು ಪಾಟೀಲ್, ಬೊಮ್ಮಾಯಿಯವರಿಗೆ ದಶಕದಿಂದಲೂ ಪರಮಾಪ್ತ ಸ್ನೇಹಿತರಾಗಿದ್ದರು. ಅಲ್ಲದೇ ತಾಯಿಯ ಕಡೆಯಿಂದ ಸಂಬಂಧಿಯ ಸಹ ಆಗಿದ್ದರು.
ರಾಜು ಪಾಟೀಲ್ ಇಂದು ಸಂಜೆ ಹೃದಯಾಘಾತದಿಂದ ಸಾವನಪ್ಪಿದ್ದು, ರಾಜು ಪಾಟೀಲರ ಅಂತ್ಯಕ್ರಿಯೆ ನಾಳೆ ಹುಬ್ಬಳ್ಳಿಯಲ್ಲಿ ನಡೆಯಲಿದೆ. ಸ್ನೇಹಿತನ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಸಿಎಂ ಬಸವರಾಜ ಬೊಮ್ಮಾಯಿ ನಾಳೆ ಮುಂಜಾನೆ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ. ಇದನ್ನೂ ಓದಿ: ವಾಜಪೇಯಿ ಬಳಸಿದ್ದ ಕ್ರಿಮಿನಲ್ ಲೂಟ್ ಸರ್ಕಾರ್ ಪದ ಬಳಸಿದ ಮಾಜಿ ಸಿಎಂ ಸಿದ್ದರಾಮಯ್ಯ