ಮೀನು ಹಿಡಿಯಲು ಹೋದ ಯುವಕ ನೀರುಪಾಲು

Public TV
1 Min Read
FotoJet 5 2

ಬೀದರ್: ಮೀನು ಹಿಡಿಯಲು ಹೋದ ಯುವಕ ಈಜು ಬಾರದೇ ನೀರಿನಲ್ಲಿ ಮುಳುಗಿ ನೀರು ಪಾಲಾದ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ದಾಡಗಿ ಸೇತುವೆ ಬಳಿ ನಡೆದಿದೆ.

FotoJet 3 4

ಭಾಲ್ಕಿ ಪಟ್ಟಣದ ಬಸವನಗರ ನಿವಾಸಿ ಸಂತೋಷ್ ಧರ್ಮರಾಜ್ ಕಟ್ಟಿಮನಿ(30) ನೀರುಪಾಲಾದ ಯುವಕ. ಕಾರಂಜಾ ಜಲಾಶಯಕ್ಕೆ ಅಡ್ಡಲಾಗಿ ನಿರ್ಮಿಸಿರುವ ದಾಡಗಿ ಸೇತುವೆ ಬಳಿ ಸಂತೋಷ್ ಅವರು ಬಲೆಯೊಂದಿಗೆ ಮೀನು ಹಿಡಿಯಲು ನೀರಿಗೆ ಇಳಿದಿದ್ದಾರೆ. ಆದರೆ ಈ ವೇಳೆ ಸಂತೋಷ್ ಕಾಲು ಜಾರಿ ನೀರಿಗೆ ಬಿದ್ದಿದ್ದು, ಈಜುಬಾರದೇ ಮೃತಪಟ್ಟಿದ್ದಾರೆ. ಇದನ್ನೂ ಓದಿ:  ಶೇ.60-65 ಮತದಾನದ ನಡೆದರೆ ಪ್ರಿಯಾಂಕಾಗೆ ಗೆಲುವು: ಸುವೇಂದು

FotoJet 4 4

ಘಟನೆ ತಿಳಿದು ಕುಟುಂಬಸ್ಥರು ಸ್ಥಳಕ್ಕೆ ಆಗಮಿಸಿದ್ದು, ಅವರ ಆಕ್ರಂದನ ಮುಗಿಲುಮುಟ್ಟಿದೆ. ಖಟಕಚಿಂಚೋಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ:  ವೈಟ್ ಬೋರ್ಡ್ ವಾಹನದಲ್ಲಿ ಪ್ರಯಾಣಿಕರನ್ನು ಸಾಗಿಸೋದು ಅಕ್ಷಮ್ಯ ಅಪರಾಧ: ಸುಧಾಕರ್

Share This Article
Leave a Comment

Leave a Reply

Your email address will not be published. Required fields are marked *