ದುಬೈ: ಅಕ್ಟೋಬರ್, ನವೆಂಬರ್ನಲ್ಲಿ ದುಬೈನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‍ಗೆ ಈಗಾಗಲೇ ಹಲವು ದೇಶಗಳು ತಮ್ಮ ತಂಡವನ್ನು ಪ್ರಕಟಿಸಿದೆ. ಈ ನಡುವೆ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ತಂಡದಲ್ಲಿ ಟಿ20 ಸ್ಪೇಷಲಿಸ್ಟ್ ಎನಿಸಿಕೊಂಡಿರುವ ಸ್ಟಾರ್ ಆಟಗಾರರು ಸ್ಥಾನ ಪಡೆಯಲು ವಿಫಲರಾಗಿದ್ದಾರೆ.
ಪ್ರತಿ ದೇಶಗಳು ಕೂಡ ಮಹತ್ವದ ಕ್ರಿಕೆಟ್ ಟೂರ್ನಿಗೆ ಬಲಿಷ್ಠ ತಂಡವನ್ನು ಕಟ್ಟಿ ದುಬೈಗೆ ಕಳುಹಿಸಿಕೊಡಲು ಪ್ಲ್ಯಾನ್ ಹಾಕಿಕೊಂಡಿದೆ. ಅದರಲ್ಲೂ ಕೂಡ ಟಿ20 ಕ್ರಿಕೆಟ್‍ನಲ್ಲಿ ತಮ್ಮ ಬ್ಯಾಟಿಂಗ್, ಬೌಲಿಂಗ್ ಮೂಲಕ ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿರು ಕೆಲ ಆಟಗಾರರು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಸಿಗದೆ ನಿರಾಸೆ ಅನುಭವಿಸಿದ್ದಾರೆ. ಇದನ್ನೂ ಓದಿ: ಇದೇ ಧೋನಿಯ ಕೊನೆಯ ಐಪಿಎಲ್?
ದಕ್ಷಿಣ ಆಫ್ರಿಕಾದ ಟಿ20 ಸ್ಪೇಷಲಿಸ್ಟ್ ಆಟಗಾರರಾದ ಫಾಫ್ ಡು ಪ್ಲೆಸಿಸ್, ಕ್ರೀಸ್ ಮೋರಿಸ್, ಇಮ್ರಾನ್ ತಾಹೀರ್ ಟಿ20 ವಿಶ್ವಕಪ್‍ಗಾಗಿ ಆಯ್ಕೆ ಮಾಡಿರುವ ರಾಷ್ಟ್ರೀಯ ತಂಡದಲ್ಲಿ ಆಯ್ಕೆಯಾಗಿಲ್ಲ. ಇವರೊಂದಿಗೆ ಇಂಗ್ಲೆಂಡ್ ತಂಡದ ಆಲ್‍ರೌಂಡರ್ ಗಳಾದ ಬೆನ್ ಸ್ಟೋಕ್ಸ್, ಜೋಫ್ರಾ ಆರ್ಚರ್ ಕೂಡ ತಂಡದಲ್ಲಿ ಸ್ಥಾನ ಪಡೆದಿಲ್ಲ. ಈ ಎಲ್ಲ ಆಟಗಾರರು ಕೂಡ ಟಿ20 ಕ್ರಿಕೆಟ್‍ಗೆ ಹೇಳಿ ಮಾಡಿಸಿದಂತಿರುವ ಆಟಗಾರರು. ಇವರು ವಿದೇಶಗಳಲ್ಲಿ ನಡೆಯುವ ಪ್ರಮುಖ ಟಿ20 ಲೀಗ್‍ಗಳಲ್ಲಿನ ತಾರಾ ಆಟಗಾರರು. ಹೀಗಿರುವಾಗ ರಾಷ್ಟ್ರೀಯ ತಂಡದಲ್ಲಿ ಇವರಿಗೆ ಸ್ಥಾನ ಸಿಕ್ಕಿಲ್ಲ. ಇದನ್ನೂ ಓದಿ: ಟೀಂ ಇಂಡಿಯಾ ಮೆಂಟರ್ ಸ್ಥಾನ ಸಿಗುತ್ತಿದ್ದಂತೆ ಧೋನಿಗೆ ಸ್ವಹಿತಾಸಕ್ತಿ ಸಂಕಷ್ಟ