ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಮ್ಯ ಅವರು ಆರೋಗ್ಯವೇ ಸಂಪತ್ತು, ಸೌಂದರ್ಯಕ್ಕಿಂತ ಆರೋಗ್ಯ ಮುಖ್ಯ ಎನ್ನುವ ಸಂದೇಶದೊಂದಿಗೆ ತನ್ನ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಕೆಲವು ಟಿಪ್ಸ್‌ಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಆರೋಗ್ಯವೇ ಸಂಪತ್ತಾಗಿದೆ. ನಿಮ್ಮ ನೈಜ ಸೌಂದರ್ಯದಲ್ಲಿ ಆರಾಮವಾಗಿರಿ. ಜೀವನವನ್ನು ಆನಂದಿಸಲು ನಿಮಗೆ ಆರೋಗ್ಯ ಇಲ್ಲದಿದ್ದರೆ ಜೀವನದ ಪ್ರಯೋಜನವೇನು? ನಿಮ್ಮನ್ನು ಇತರರೊಂದಿಗೆ ಹೋಲಿಸುವುದನ್ನು ನಿಲ್ಲಿಸಿ. ಮಹಿಳೆಯರಿಗೆ ಕಬ್ಬಿಣಾಂಶಗಳು ದೇಹಕ್ಕೆ ಅಗತ್ಯವಾಗಿರುತ್ತದೆ. ಯಾವುದೇ ಆರೋಗ್ಯ ಸಲಹೆಗಳು ಇದ್ದರೆ ದಯವಿಟ್ಟು ಕಾಮೆಂಟ್‍ಗಳಲ್ಲಿ ಹಂಚಿಕೊಳ್ಳಿ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದು ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡು ಒಂದು ವೀಡಿಯೋವನ್ನು ಹಂಚಿಕೊಂಡಿದ್ದಾರೆ.
ವೀಡಿಯೋದಲ್ಲಿ ಏನಿದೆ?
ಆರೋಗ್ಯದ ಕುರಿತಾಗಿ ನಾವು ಎಚ್ಚರಿಕೆಯಿಂದ ಇರಬೇಕು. ಆರೋಗ್ಯವೇ ಭಾಗ್ಯವಾಗಿದೆ. ಕೆಲಸವನ್ನು ಮಾಡಿ ಹಣ ಮಾಡುತ್ತೇವೆ. ಆದರೆ ನಮ್ಮ ಜೀವನವನ್ನು ಎಂಜಾಯ್ ಮಾಡಲು ನಾವು ಆರೋಗ್ಯವನ್ನು ಕಾಪಾಡಿಕೊಳ್ಳುವುದಿಲ್ಲ ಎಂದರೆ ಏನು ಪ್ರಯೋಜನ. ನಾನು ಈ ಹಿಂದೆ ಸಿನಿಮಾ ಎಂದು ಬ್ಯುಸಿಯಾಗಿರುತ್ತದ್ದೆನು. ಸರಿಯಾದ ಸಮಯಕ್ಕೆ ಊಟ ಮಾಡಲು ಆಗುತ್ತಿರಲಿಲ್ಲ ಹೀಗಾಗಿ ಆರೋಗ್ಯ ಹಾಳಾಗುತ್ತಿತ್ತು. ನನ್ನ ಪೋಷಕರು ಇಷ್ಟು ಕೆಸಲ ಮಾಡುತ್ತೀಯ, ಫೇಮಸ್ ಆಗುತ್ತೀಯ ಆದರೆ ಆರೋಗ್ಯವನ್ನು ಸರಿಯಾಗಿ ನೋಡಿಕೊಳ್ಳದೆ ಎಂಜಾಯ್ ಮಾಡೋದು ಯಾವಾಗ ಎಂದು ಕೇಳುತ್ತಿದ್ದರು. ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತೀಯ ಎಂದು ಹೇಳುತ್ತೀದ್ದರು. ಹೀಗಾಗಿ ನಾನು ಆರೋಗ್ಯ ಕುರಿತಾಗಿ ಕಾಳಜಿಯನ್ನು ತೆಗೆದುಕೊಂಡೆ ಎಂದಿದ್ದಾರೆ. ಇದನ್ನೂ ಓದಿ: ಬಿಜೆಪಿ ಓಕೆ, ಕಾಂಗ್ರೆಸ್ ಯಾಕೆ?:ಆರ್. ಅಶೋಕ್
View this post on Instagram
ಸರಿಯಾದ ಸಮಯಕ್ಕೆ ಊಟ ಮಾಡುತ್ತೇನೆ. ವ್ಯಾಯಾಮ ಮಾಡುತ್ತೇನೆ, ಹೆಚ್ಚಾಗಿ ನೀರು ಕುಡಿಯುತ್ತೇನೆ. ತರಕಾರಿ, ಹಣ್ಣುಗಳನ್ನು ಹೆಚ್ಚಾಗಿ ಸೇವಿಸುತ್ತೇನೆ. ಮಹಿಳೆಯರು ಹೆಚ್ಚಾಗಿ ಪ್ರೋಟಿನ್ ಅಂಶ ಇರುವ ಆಹಾರವನ್ನು ಸೇವಿಸುವುದು ಮುಖ್ಯವಾಗುತ್ತದೆ. ನಾವು ಮಹಿಳೆಯರು ಬೆಳ್ಳಗೆ ಇರಬೇಕು ಎಂದು ನಾವು ಎಲ್ಲರೂ ಅಂದುಕೊಳ್ಳುತ್ತೇವೆ. ಕಪ್ಪು ಇರುವವರೆ ಹೆಚ್ಚು ಚೆನ್ನಾಗಿ ಕಾಣಿಸಿಕೊಳ್ಳುತ್ತಾರೆ. ನಾನು ಅವರಂತೆ ಇರಬೇಕು ಚೆನ್ನಾಗಿ ಕಾಣಿಸಿಕೊಳ್ಳಬೇಕು ಎಂದು ಕೆಲವು ರಾಸಾಯನಿಕ ಕ್ರೀಮ್‍ಗಳನ್ನು ನಾವು ಬಳಸುತ್ತೇವೆ. ನಾನು ಹಾಗೆ ಇರಬೇಕು, ಹೀಗೆ ಇರಬೇಕು ಎನ್ನುವುದನ್ನು ತಲೆಯಿಂದ ಮೊದಲು ತೆಗೆದುಹಾಕಬೇಕು. ಇರುವ ನಮ್ಮ ಸೌಂದರ್ಯವನ್ನು ನಾವು ಹೇಗೆ ಕಾಪಾಡಿಕೊಳ್ಳುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. ನಮ್ಮ ಹತ್ತಿರ ಇಲ್ಲದಿರುವುದರ ಕುರಿತಾಗಿ ಯೋಚನೆ ಮಾಡುವ ಬದಲು ಇರುವುದರಲ್ಲಿಯೆ ಹೆಮ್ಮೆ ಪಡಬೇಕು. ನನಗೆ ಸೌಂದರ್ಯಕ್ಕಿಂತ ಆರೋಗ್ಯನೆ ಮುಖ್ಯ ಎಂದು ಹೆಂಗಳೆಯರಿಗೆ ಸೌಂದರ್ಯದ ಕುರಿತಾಗಿ ಕಿವಿ ಮಾತು ಹೇಳಿದ್ದಾರೆ.