ಛತ್ತೀಸ್​ಗಢ ಮುಖ್ಯಮಂತ್ರಿ ತಂದೆ ವಿರುದ್ಧವೇ ಎಫ್‍ಐಆರ್

Public TV
1 Min Read
Bhupesh Baghel

ಛತ್ತೀಸಗಢ: ಬ್ರಾಹ್ಮಣರನ್ನು ಬಹಿಷ್ಕರಿಸುವುದಾಗಿ ಹೇಳಿಕೆ ನೀಡಿದ್ದ ಛತ್ತೀಸ್ ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ತಂದೆ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

ಸಿಎಂ ಭೂಪೇಶ್ ಬಘೇಲ್‍ರವರ ತಂದೆ ನಂದ ಕುಮಾರ್ ಬಘೇಲ್ ಇತ್ತೀಚೆಗಷ್ಟೇ ಉತ್ತರ ಪ್ರದೇಶದಲ್ಲಿ, ನಾನು ಬ್ರಾಹ್ಮಣರನ್ನು ಭಾರತದಲ್ಲಿರುವ ಎಲ್ಲಾ ಗ್ರಾಮಗಳಿಗೆ ಸೇರಿಸದಂತೆ ಒತ್ತಾಯಿಸುತ್ತೇನೆ. ಅವರನ್ನು ಬಹಿಷ್ಕಾರ ಹಾಕಲು ಎಲ್ಲ ಸಮುದಾಯಗಳಿಗೆ ತಿಳಿಸುತ್ತೇನೆ. ಅವರನ್ನು ವೋಲ್ಗಾ ನದಿಯ ದಡಕ್ಕೆ ವಾಪಸ್ ಕಳುಹಿಸಬೇಕು ಎಂದು ಹೇಳಿದ್ದರು. ಇದನ್ನೂ ಓದಿ: ಸೈಯದ್ ಅಲಿ ಶಾ ಗೀಲಾನಿ ಮೃತದೇಹಕ್ಕೆ ಪಾಕ್ ಧ್ವಜ ಹೊದಿಸಿದ ಕುಟುಂಬಸ್ಥರ ವಿರುದ್ಧ

Bhupesh Baghel

ಈ ಬಗ್ಗೆ ಭೂಪೇಶ್ ಬಘೇಲ್ ಕಾನೂನು ಮತ್ತು ಸರ್ಕಾರ ಎಲ್ಲರ ಪರವಾಗಿ ನಿಂತಿದೆ. ನನ್ನ ತಂದೆಗೆ 86 ವರ್ಷ ವಯಸ್ಸಾಗಿದ್ದರೂ ಕಾನೂನಿನ ಮುಂದೆ ಯಾರು ದೊಡ್ಡವರಲ್ಲ. ಛತ್ತೀಸ್ ಗಢ ಸರ್ಕಾರವು ಪ್ರತಿಯೊಂದು ಧರ್ಮ, ಪಂಗಡ, ಸಮುದಾಯ ಮತ್ತು ಅವರ ಭಾವನೆಗಳನ್ನು ಗೌರವಿಸುತ್ತದೆ. ನನ್ನ ತಂದೆ ನಂದ ಕುಮಾರ್ ಬಘೇಲ್ ಅವರು ನೀಡುವ ಹೇಳಿಕೆ ಕೋಮು ಶಾಂತಿಗೆ ಭಂಗ ತಂದಿದೆ. ಅವರ ಹೇಳಿಕೆ ನನಗೂ ಬೇಸರ ತಂದಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಶಾರೂಖ್, ನಯನ ತಾರಾ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರಾ ರಾಣಾ ದಗ್ಗುಬಾಟಿ

ನಾವು ರಾಜಕೀಯವನ್ನು ನೋಡುವ ದೃಷ್ಟಿಗೂ ಮತ್ತು ನಂಬಿಕೆಗೂ ವ್ಯತ್ಯಾಸವಿದೆ. ಒಬ್ಬ ಮಗನಾಗಿ ನಾನು ಅವರನ್ನು ಗೌರವಿಸುತ್ತೇನೆ. ಆದರೆ ಮುಖ್ಯಮಂತ್ರಿಯಾಗಿ ನಾನು ಅವರು ಮಾಡಿರುವ ತಪ್ಪನ್ನು ಕ್ಷಮಿಸಲು ಸಾಧ್ಯವಿಲ್ಲ. ಇದು ಸಾರ್ವಜನಿಕ ಸುವ್ಯವಸ್ಥೆಗೆ ಭಂಗವನ್ನುಂಟು ಮಾಡುತ್ತದೆ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *