ಲಂಡನ್: ಕ್ರಿಕೆಟ್ ಜನಪ್ರಿಯತೆ ಹೆಚ್ಚಾಗುತ್ತಿದ್ದಂತೆ ಹೊಸ ಹೊಸ ತಂತ್ರಜ್ಞಾನ ಕ್ರಿಕೆಟ್ ಲೋಕದಲ್ಲಿ ಕಾಣ ಸಿಗುತ್ತಿದೆ. ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ಇದೀಗ ಸ್ಮಾರ್ಟ್ ಬಾಲ್ ಕ್ರಿಕೆಟ್ ಅಂಗಳಕ್ಕೆ ಕಾಲಿಟ್ಟಿದೆ.
ಸ್ಮಾರ್ಟ್ ಬಾಲ್ ಎಂದರೇನು?
ಕ್ರಿಕೆಟ್‍ನಲ್ಲಿ ಬಳಸುವ ಬಾಲ್ ಇದೀಗ ಹೊಸ ಸ್ಪರ್ಶದೊಂದಿಗೆ ಸ್ಮಾರ್ಟ್ ಬಾಲ್ ಆಗಿದೆ. ಸಾಂಪ್ರದಾಯಿಕವಾಗಿ ಬಳಸುವ ಬಾಲ್‍ಗೆ ತಂತ್ರಜ್ಞಾನವನ್ನು ಅಳವಡಿಕೆ ಮಾಡಿ ಸ್ಮಾರ್ಟ್ ಬಾಲ್ ಆಗಿ ಮಾರ್ಪಡಿಸಲಾಗಿದೆ. ಈ ಬಾಲ್‍ಗಳಲ್ಲಿ ಎಲೆಕ್ಟ್ರಾನಿಕ್ ಮೈಕ್ರೋ ಚಿಪ್ ಅಳವಡಿಕೆ ಮಾಡಲಾಗಿದ್ದು, ಅದರೊಳಗೆ ಇರುವ ಸೆನ್ಸರ್ ಗಳು ವಿವಿಧ ದತ್ತಾಂಶಗಳನ್ನು ಸಂಗ್ರಹಿಸುವ ಕಾರ್ಯ ಮಾಡುತ್ತದೆ. ಸ್ಮಾರ್ಟ್ ಬಾಲ್ ಸಂಗ್ರಹಿಸುವ ವಿವಿಧ ಮಾಹಿತಿಯನ್ನು ಸ್ಮಾರ್ಟ್ ಫೋನ್, ಟ್ಯಾಬ್ಲೆಟ್, ಕಂಪ್ಯೂಟರ್ ಮತ್ತು ಲ್ಯಾಪ್‍ಟಾಪ್‍ಗಳಲ್ಲಿ ವೀಕ್ಷಿಸಬಹುದಾಗಿದೆ. ಇದಲ್ಲದೆ ಇದಕ್ಕಾಗಿ ವಿಶೇಷ ಅಪ್ಲಿಕೇಷನ್(ಆ್ಯಪ್) ಕೂಡ ಹೊರತರಲಾಗಿದೆ. ಇದನ್ನೂ ಓದಿ: ತಾಲಿಬಾನಿಗಳ ಮುಂದಿನ ಪ್ರಧಾನಿ ಅಫ್ರಿದಿ – ನೆಟ್ಟಿಗರಿಂದ ಫುಲ್ ಟ್ರೋಲ್
ಕ್ರೀಡಾ ತಂತ್ರಜ್ಞಾನ ಸಂಸ್ಥೆಯಾದ ಸ್ಟೋಟ್ರ್ಸ್ ಕೋರ್ ತನ್ನ ಅತ್ಯುನ್ನತ ತಂತ್ರಜ್ಞಾನದೊಂದಿಗೆ ಕುಕಾಬುರಾ ಸಹಯೋಗದಲ್ಲಿ ಈ ಸ್ಮಾರ್ಟ್ ಬಾಲ್ ಅಭಿವೃದ್ಧಿ ಪಡಿಸಿದೆ. ಸ್ಮಾರ್ಟ್ ಬಾಲ್ ಉಳಿದ ಚೆಂಡಿನಂತೆ ಇರಲಿದ್ದು, ಚೆಂಡಿನ ಒಳಗೆ ಸ್ಮಾರ್ಟ್ ಚಿಪ್ ಒಂದನ್ನು ಮಾತ್ರ ಅಳವಡಿಸಲಾಗುತ್ತದೆ. ಇದನ್ನು ಹೊರತು ಪಡಿಸಿ ಈ ಚೆಂಡಿನ ಗಾತ್ರ, ತೂಕಗಳಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಕುಕಾಬುರಾ ಸಂಸ್ಥೆ ತಿಳಿಸಿದೆ. ಇದನ್ನೂ ಓದಿ: ಎಸ್‍ಜಿ ಚೆಂಡಿನ ವಿರುದ್ಧ ಅಶ್ವಿನ್ ಅಸಮಾಧಾನ – 1 ಎಸ್‍ಜಿ ಚೆಂಡಿಗೆ ಎಷ್ಟು ರೂ.? ಯಾವ ದೇಶದಲ್ಲಿ ಯಾವ ಬಾಲ್ ಬಳಕೆಯಿದೆ?
ಈ ಸ್ಮಾರ್ಟ್ ಬಾಲ್‍ನ ಒಳಗೆ ಇರುವ ಸ್ಮಾರ್ಟ್ ಚಿಪ್ ಬೌಲರ್ ಎಸೆಯುವ ಚೆಂಡು ಬೌನ್ಸ್ ಆಗುವ ಮುನ್ನ ಚೆಂಡಿನ ವೇಗ, ಬೌನ್ಸ್ ಆದ ಬಳಿಕ ಚೆಂಡಿನ ವೇಗ, ಸ್ಪಿನ್ ಬೌಲರ್ ಎಸೆದ ಬಾಲ್ ಎಷ್ಟರ ಮಟ್ಟಿಗೆ ತಿರುವು ಪಡೆದುಕೊಂಡಿದೆ ಮತ್ತು ಚೆಂಡಿನ ಮೇಲೆ ಬೌಲರ್‍ನ ಶಕ್ತಿಯ ಪ್ರಯೋಗವನ್ನು ಕೇವಲ ಐದು ಸೆಕೆಂಡುಗಳಲ್ಲಿ ತಿಳಿದುಕೊಳ್ಳಲು ಸಹಾಯವಾಗುವಂತೆ ಅಭಿವೃದ್ಧಿ ಪಡಿಸಲಾಗಿದೆ. ಒಂದು ಗಂಟೆ ಚಾರ್ಜ್ ಮಾಡಿದರೆ 30 ಗಂಟೆಗಳ ಕಾಲ ಬಳಸಬಹುದಾಗಿದೆ. ಸರಾಸರಿ 300 ಕಿಮೀ. ವೇಗದವರೆಗೂ ಯಾವುದೇ ತೊಂದರೆಗಳಿಲ್ಲದೆ ಈ ಬಾಲ್‍ನ್ನು ಬಳಸಬಹುದಾಗಿದೆ. ಇದನ್ನೂ ಓದಿ: ವಿಶೇಷ ಅತಿಥಿಯನ್ನು ಹಿಡಿದುಕೊಂಡು ಪೃಥ್ವಿ ಶಾ ಪ್ರಯಾಣ
ಈಗಾಗಲೇ ಸ್ಮಾರ್ಟ್‍ಗಳನ್ನು ಕೆರಿಬಿಯನ್ ಪ್ರೀಮಿಯರ್ ಲೀಗ್‍ನಲ್ಲಿ ಪ್ರಯೋಗ ಮಾಡಲು ತಯಾರಿಗಳು ನಡೆದಿದ್ದು ಇಲ್ಲಿ ಯಶಸ್ವಿಯಾದರೆ ಮುಂದೆ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಸ್ಮಾರ್ಟ್ ಬಾಲ್‍ಗಳನ್ನು ಕಾಣಬಹುದಾಗಿದೆ.