ವಿಜಯಪುರ: ಶುಕ್ರವಾರ ಸಂಜೆ ಸುರಿದ ಭಾರೀ ಮಳೆಗೆ ಹಳ್ಳದಲ್ಲಿ ಯುವಕ ಕೊಚ್ಚಿ ಹೋದ ಘಟನೆ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ನೇಗಿನಾಳ-ಮುಳ್ಳಾಳ ಡೋಣಿ ಹಳ್ಳದಲ್ಲಿ ನಡೆದಿದೆ.
ಮಂಜುನಾಥ ಪಾಟೀಲ್ (23) ಹಳ್ಳದಲ್ಲಿ ಕೊಚ್ಚಿ ಹೋದ ಯುವಕ. ಬೈಕ್ ಮೇಲೆ ಹಳ್ಳ ದಾಟಲು ಮುಂದಾದಾಗ ಕೊಚ್ಚಿ ಹೋಗಿದ್ದಾನೆ. ರಾತ್ರಿ ಉಕ್ಕಿ ಹರಿಯುತ್ತಿದ್ದ ನೇಗಿನಾಳ-ಮುಳ್ಳಾಳ ಡೋಣಿ ಹಳ್ಳ ದಾಟಲು ಯುವಕರ ಯತ್ನಿಸಿದ್ದಾನೆ. ಇದನ್ನೂ ಓದಿ: ಆಲಮಟ್ಟಿ ಡ್ಯಾಂ 524 ಅಡಿಗೆ ಎತ್ತರಿಸಲು ಕ್ರಮ: ಸಿಎಂ ಬೊಮ್ಮಾಯಿ
ಹಳ್ಳದ ನೀರನ ರಭಸಕ್ಕೆ ಬೈಕ್ ಕೊಚ್ಚಿ ಹೋಗಿದೆ. ಬೈಕ್ ಮೇಲಿದ್ದ ಮಂಜುನಾಥ ಸಹ ನೀರು ಪಾಲಾಗಿದ್ದಾನೆ. ಮತ್ತೋರ್ವ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದು, ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ, ಮನಗೂಳಿ ಪೊಲೀಸರು ಭೇಟಿ ನೀಡಿ ಯುವಕನಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.