ಡೆಹ್ರಾಡೂನ್-ಹೃಷಿಕೇಶ್ ಹೆದ್ದಾರಿಯಲ್ಲಿ ಮುರಿದು ಬಿದ್ದ ಸೇತುವೆ- ಜನಜೀವನ ಅಸ್ತವ್ಯಸ್ತ

Public TV
1 Min Read
uttarakhand rani pokhari bridge

ಡೆಹ್ರಾಡೂನ್: ಕಳೆದ ಮೂರು ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹಲವೆಡೆ ಭೂಕುಸಿತವುಂಟಾಗಿದ್ದು, ಹೃಷಿಕೇಶ್-ದೇವಪ್ರಯಾಗ್, ಹೃಷಿಕೇಶ್-ತೆಹ್ರಿ ಮತ್ತು ಡೆಹ್ರಾಡೂನ್-ಮಸ್ಸೂರಿ ರಸ್ತೆಗಳನ್ನು ಮುಚ್ಚಲಾಗಿದೆ.

ಡೆಹ್ರಾಡೂನ್-ರಿಷಿಕೇಶ್ ರಸ್ತೆಯ ರಾಣಿ ಪೋಖರಿಯಲ್ಲಿ ಜಖಾನ್ ನದಿಯ ಮೇಲಿನ ಸೇತುವೆಯ ಒಂದು ಭಾಗವು ಭಾರೀ ಮಳೆ ಮತ್ತು ಬಲವಾದ ಪ್ರವಾಹದಿಂದಾಗಿ ಕುಸಿದಿದೆ. ಡೆಹ್ರಾಡೂನ್ ಹೃಷಿಕೇಶ್ ಹೆದ್ದಾರಿಯಲ್ಲಿ ರಾಣಿ ಪೋಖರಿ ಸೇತುವೆ ಕುಸಿದಿದ್ದು ಕಾರುಗಳು ಕೊಚ್ಚಿಕೊಂಡು ಹೋಗಿವೆ. ಸಾರ್ವಜನಿಕರು ದಯವಿಟ್ಟು ಮೇಲಿನ ಮಾರ್ಗವನ್ನು ಬಳಸಬೇಡಿ ಮತ್ತು ಇತರ ಪರ್ಯಾಯ ಮಾರ್ಗಗಳನ್ನು ಬಳಸಿ ಎಂದು ಉತ್ತರಾಖಂಡ್ ಪೊಲೀಸರು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಹೊಲಗಳು ಮರಳು ಆಗಲು ಬಿಡುವುದಿಲ್ಲ: ರಾಹುಲ್ ಗಾಂಧಿ

ಮಾಲ್ದೇವತಾ-ಸಹಸ್ರಧಾರ ಲಿಂಕ್ ರಸ್ತೆಯು ಡೆಹ್ರಾಡೂನ್‍ನಲ್ಲಿ ನಿರಂತರ ಮಳೆಯಿಂದಾಗಿ ಜಲಾವೃತವಾಗಿದೆ. ಭಾರತ ಹವಾಮಾನ ಇಲಾಖೆ (ಐಎಂಡಿ) ಉತ್ತರಾಖಂಡದಲ್ಲಿ ಆಗಸ್ಟ್ 29 ರವರೆಗೆ ಭಾರೀ ಮಳೆ ಮುಂದುವರಿಯುವ ಸೂಚನೆಯನ್ನು ನೀಡಿದೆ. ಹವಾಮಾನ ಸಹಜ ಸ್ಥಿತಿಗೆ ಬರುವವರೆಗೆ ಈ ಪ್ರದೇಶಗಳಲ್ಲಿ ಓಡಾಡುವುದು ಬೇಡ ಎಂದು ಪೊಲೀಸರು ಪ್ರಯಾಣಿಕರಿಗೆ ಸೂಚಿಸಿದ್ದಾರೆ.ಭಾರೀ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 58 ತಪೋವನದಿಂದ ಮಲೆತಾಗೆ ತೆರಳುವ ಪ್ರದೇಶದ ರಸ್ತೆಯನ್ನು ಮುಚ್ಚಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *