ಸೋನು ಸೂದ್ ‘ದೇಶ್ ಕೆ ಮೆಂಟರ್ಸ್’ ಕಾರ್ಯಕ್ರಮದ ಬ್ರ್ಯಾಂಡ್ ಅಂಬಾಸಿಡರ್: ಅರವಿಂದ್ ಕೇಜ್ರಿವಾಲ್

Public TV
2 Min Read
sonu sood

ನವದೆಹಲಿ: ಬಾಲಿವುಡ್ ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಸೋನು ಸೂದ್‍ರವರು ದೆಹಲಿ ಸರ್ಕಾರದ ‘ದೇಶ್ ಕೆ ಮೆಂಟರ್ಸ್’ ಕಾರ್ಯಕ್ರಮದ ಬ್ರ್ಯಾಂಡ್ ಅಂಬಾಸಿಡರ್ ಆಗಲಿದ್ದಾರೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ.

FotoJet 4 9

ಶುಕ್ರವಾರ ಬೆಳಗ್ಗೆ ಅರವಿಂದ್ ಕೇಜ್ರಿವಾಲ್ ಹಾಗೂ ಸೋನು ಸೂದ್ ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಸೋನು ಸೂದ್‍ರವರು ನಮ್ಮ ‘ದೇಶ್ ಕೆ ಮೆಂಟರ್ಸ್’ ಕಾರ್ಯಕ್ರಮದ ಬ್ರ್ಯಾಂಡ್ ಅಂಬಾಸಿಡರ್ ಆಗಲು ಒಪ್ಪಿಕೊಂಡಿದ್ದಾರೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಇದನ್ನೂ ಓದಿ:ಯುವಕರ ಗುಂಪುಗಳ ನಡುವೆ ಮಾರಾಮಾರಿ- ವೀಡಿಯೋ ಸಿಸಿಟಿವಿಯಲ್ಲಿ ಸೆರೆ

ARAVIND KEJRIWAL

ಇದೇ ಸಂದರ್ಭದಲ್ಲಿ ಸೋನು ಸೂದ್, ಇಂದು ನನಗೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಅವಕಾಶ ದೊರೆತಿದೆ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವುದಕ್ಕಿಂತ ದೊಡ್ಡ ಸೇವೆ ಮತ್ತೊಂದಿಲ್ಲ. ನಾವೆಲ್ಲರೂ ಸೇರಿ ಒಟ್ಟಾಗಿ ಸೇವೆ ಮಾಡಬಹುದು ಮತ್ತು ನಾವೆಲ್ಲರೂ ಮಾಡುತ್ತೇವೆ ಎಂಬ ನಂಬಿಕೆ ಇದೆ ಎಂದು ಹೇಳಿದ್ದಾರೆ.

FotoJet 15 8

ಲಾಕ್‍ಡೌನ್ ವೇಳೆ, ನಾವು ಸಾಕಷ್ಟು ಜನರೊಂದಿಗೆ ಬೆರೆತೆವು. ಆಗ ಶಿಕ್ಷಣವು ಒಂದು ದೊಡ್ಡ ಸಮಸ್ಯೆಯಾಗಿರುವುದರ ಬಗ್ಗೆ ತಿಳಿದುಕೊಂಡೆವು. ಆದರೆ ಈ ಮಧ್ಯೆ ಮುಂದೆ ಏನು ಮಾಡಬೇಕೆಂದು ಮಕ್ಕಳಿಗೆ ತಿಳಿಯದೇ ದೊಡ್ಡ ಪ್ರಶ್ನೆಯಾಗಿದೆ. ನೀವು ಮಕ್ಕಳಿಗೆ ಶಿಕ್ಷಣ ನೀಡುತ್ತೀರಾ. ಆದರೆ ಅವರಿಗೆ ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ನೀಡುವವರು ಕೂಡ ಇರಬೇಕು ಎಂದು ತಿಳಿಸಿದ್ದಾರೆ.  ಇದನ್ನೂ ಓದಿ:ಅಫ್ಘಾನ್ ಮುಸ್ಲಿಮರಿಗೆ ಭಾರತದಲ್ಲಿ ಆಶ್ರಯ ಕಲ್ಪಿಸಬಾರದು: ಪ್ರವೀಣ್ ತೊಗಾಡಿಯಾ

ಸದ್ಯ ರಾಜಕೀಯಕ್ಕೆ ಸೇರುತ್ತೀರಾ ಎಂದು ಪ್ರಶ್ನೆಗೆ, ನನಗೆ ಜನರು ನೀವು ಒಳ್ಳೆಯ ಕೆಲಸವನ್ನು ಮಾಡುತ್ತಿದ್ದೀರಾ. ರಾಜಕೀಯಕ್ಕೆ ಸೇರಿಕೊಳ್ಳಿ ಎಂದು ಹೇಳುತ್ತಾರೆ. ಆದರೆ ಯಾವುದೇ ಒಳ್ಳೆಯ ಕೆಲಸ ಮಾಡುವುದಕ್ಕೆ ರಾಜಕೀಯಕ್ಕೆ ಸೇರುವ ಅವಶ್ಯಕತೆ ಇಲ್ಲ. ನನಗೆ ಆಫರ್‍ಗಳು ಬರುತ್ತಲೇ ಇರುತ್ತದೆ. ಆದರೆ ನಾನು ಅದರ ಬಗ್ಗೆ ಎಂದಿಗೂ ಯೋಚಿಸಿಲ್ಲ. ನಾನು ರಾಜಕೀಯ ವಿಚಾರವಾಗಿ ಕೇಜ್ರಿವಾಲ್‍ರವರೊಂದಿಗೆ ಕೂಡ ಮಾಡನಾಡಿಲ್ಲ ಎಂದು ಸೋನು ಸೂದ್ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *