ನಮ್ಮ ಪಕ್ಷದಲ್ಲಿ ಕಾರ್ಯಕರ್ತರು ಸರಿಯಿಲ್ಲ: ಹೆಚ್.ಡಿ. ಕುಮಾರಸ್ವಾಮಿ

Public TV
2 Min Read
HDK

– ಮಮತಾ ಬ್ಯಾನರ್ಜಿಯವರೇ ನನಗೆ ಸ್ಫೂರ್ತಿ

ಹುಬ್ಬಳ್ಳಿ: ನಮ್ಮ ಪಕ್ಷದಲ್ಲಿ ಕಾರ್ಯಕರ್ತರು ಸರಿಯಿಲ್ಲ. ಕಾರ್ಯಕರ್ತರಲ್ಲಿ ಇಚ್ಛಾಶಕ್ತಿ ಕೊರತೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಬೆಂಗಳೂರಿಗೆ ಹೋಗುತ್ತಿದ್ದಂತೆ ಅವರು ಮನೆಗೆ ಹೋಗಿ ಮಲಗುತ್ತಾರೆ. ಹೀಗಾಗಿ ನಮ್ಮ ಪಕ್ಷ. ಉತ್ತರ ಕರ್ನಾಟಕದಲ್ಲಿ ಸಂಘಟನೆ ಆಗುತ್ತಿಲ್ಲ. ಯಾರು ಪಕ್ಷ ಬಗ್ಗೆ ಸಿರಿಯಸ್ ಆಗಿ ಕೆಲಸ ಮಾಡ್ತಾರೆ ಅವರಿಗೆ ಮಣೆ ಹಾಕಿತ್ತೇವೆ. ಜನತಾ ಪರಿವಾರದ ಹಳಬರನ್ನ ಒಟ್ಟುಗೂಡಿಸುವ ಆಸಕ್ತಿ ಇಲ್ಲ ಎಂದು ಬಹಿರಂಗವಾಗಿಯೇ ಬೇಸರ ವ್ಯಕ್ತಪಡಿಸಿದರು.

JDS flag 760x400 medium

ಹೊಸಬರಿಂದಲೇ ಪಕ್ಷ ಕಟ್ಟುತ್ತೇನೆ. ನನಗೆ ಮಮತಾ ಬ್ಯಾನರ್ಜಿಯವರೇ ಸ್ಫೂರ್ತಿ. ನಾನು ಬಹಳ ತಿಂಗಳುಗಳ ನಂತರ ಹುಬ್ಬಳ್ಳಿಗೆ ಬಂದಿರುವೆ. ಕಳೆದ ಒಂದು ವರ್ಷದಿಂದ ರಾಜ್ಯ ಪ್ರವಾಸ ಮಾಡಿಲ್ಲ. ಪಕ್ಷದ ಸಂಘಟನೆ ವಿಚಾರದಲ್ಲಿ ನಿರಂತರ ಸಂಪರ್ಕದಲ್ಲಿ ಇರುವೆ ಎಂದರು. ಇದನ್ನೂ ಓದಿ: ಪಾಕ್‍ಗೆ ಹಣದ ನೆರವು ನೀಡುವುದನ್ನು ಅಮೆರಿಕ ನಿಲ್ಲಿಸಲಿ: ಅಫ್ಘಾನ್ ಪಾಪ್ ತಾರೆ

ರಾಜ್ಯದಲ್ಲಿ ಕೋವಿಡ್ ಅನಾಹುತದಿಂದ ಸಾವು ನೋವುಗಳು ಆಗಿವೆ. ಒಂದು ಕಡೆ ಸರ್ಕಾರ ಸಾಮಾಜಿಕ ಅಂತರ ಕಾಪಾಡಬೇಕು. ಗೈಡ್ ಲೈನ್ ಪಾಲಿಸಬೇಕಾಗಿದೆ. ಆದರೆ 2 ರಾಷ್ಟೀಯ ಪಕ್ಷಗಳು ಕೋವಿಡ್ ನಿಯಮಗಳನ್ನ ಪಾಲಿಸುತ್ತಿಲ್ಲ. ಕಾಂಗ್ರೆಸ್ – ಬಿಜೆಪಿ ಕೋವಿಡ್ ನಿಯಮಗಳನ್ನು ಪಾಲಿಸುತ್ತಿಲ್ಲ. ಕಾಂಗ್ರೆಸ್ ಉಸ್ತುವಾರಿ ನೇತೃತ್ವದಲ್ಲಿ ವಲಯವಾರು ನೇತೃತ್ವದಲ್ಲಿ ಸಭೆ ನಡೆಸುತ್ತಿದೆ. ಕಾಂಗ್ರೆಸ್ ಸಹ ನಿಯಮಗಳನ್ನ ಪಾಲನೆ ಮಾಡುತ್ತಿಲ್ಲ. ಜನಾರ್ಶೀವಾದ ಯಾತ್ರೆಯಲ್ಲೂ ಯಾವುದೇ ಸಂದೇಶಗಳು ಇಲ್ಲ ಎಂದು ಕಿಡಿಕಾರಿದರು.

CONGRESS BJP

ನಾಡಬಂದೂಕ ಪ್ರದರ್ಶನ ಮಾಡಿ ನಿಯಮಗಳನ್ನ ಉಲ್ಲಂಘನೆ ಮಾಡುತ್ತಿದ್ದಾರೆ. ನಂತರ ಮಾಧ್ಯಮಗಳ ಮುಂದೆ ಕ್ಷಮೆ ಕೇಳುತ್ತಾರೆ. ಹುಬ್ಬಳ್ಳಿ ಧಾರವಾಡ ಪಾಲಿಕೆ ಚುನಾವಣೆಯಲ್ಲಿ ಎಲ್ಲ ಪಕ್ಷಗಳು ತಜ್ಞರು ಕೊಟ್ಟ ಮಾರ್ಗಸೂಚಿಗಳನ್ನ ಪಾಲಿಸಬೇಕು. ಮೂರನೇ ಅಲೆಗೆ ಆಹ್ವಾನ ನಾವೇ ಮಾಡಿಕೊಡಬಾರದು. ಹುಬ್ಬಳ್ಳಿ ಧಾರವಾಡದಲ್ಲಿ ಹೊಸ ಪದಾಧಿಕಾರಿಗಳನ್ನ ನೇಮಕ ಮಾಡಿದ್ದೇವೆ. ಈ ಬಾರಿ ಪಾಲಿಕೆ ಚುನಾವಣೆಯಲ್ಲಿ ಹೆಚ್ಚಿನ ಅಭ್ಯರ್ಥಿಗಳನ್ನ ಕಣಕ್ಕೆ ಇಳಿಸಿದ್ದೇವೆ. ಕಲಬುರಗಿಯಲ್ಲಿ 54 ಅಭ್ಯರ್ಥಿಗಳನ್ನ ಕಣಕ್ಕೆ ಇಳಿಸುತ್ತಿದ್ದೇವೆ. ಬೆಳಗಾವಿಯಲ್ಲಿ ಸ್ವಲ್ಪ ಕಡಿಮೆ ಅಭ್ಯರ್ಥಿಗಳನ್ನ ಕಣಕ್ಕೆ ಇಳಿಸಿದ್ದೇವೆ. ಹುಬ್ಬಳ್ಳಿ-ಧಾರವಾಡ 60ಕ್ಕೂ ಹೆಚ್ಚು ಸ್ಥಾನಗಳಲ್ಲಿ ಸ್ಪರ್ದೆ ಮಾಡುತ್ತೇವೆ. ಕೊನೆ ಕ್ಷಣದಲ್ಲಿ ಕೆಲವು ವಾರ್ಡ್ ಗಳಿಗೆ ಅಭ್ಯರ್ಥಿಗಳನ್ನ ಘೋಷಣೆ ಮಾಡುತ್ತೇವೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *