ಜೂನಿಯರ್ ಚಿರುಗೆ 10 ತಿಂಗಳು ತುಂಬಿರುವ ಸಂಭ್ರಮ- ಮನಸಾರೆ ನಕ್ಕ ಮೇಘನಾ ರಾಜ್

Public TV
1 Min Read
Meghana Raj 1

ಬೆಂಗಳೂರು: ಸ್ಯಾಂಡಲವುಡ್ ನಟಿ ಮೇಘನಾ ರಾಜ್ ಜೂನಿಯರ್ ಚಿರುಗೆ 10 ತಿಂಗಳು ತುಂಬಿರೋ ಸಂಭ್ರಮಕ್ಕೆ ಜೂನಿಯರ್ ಚಿರುಗೆ ಹೊಸ ಸ್ನೇಹಿತನನ್ನು ಪರಿಚಯಿಸಿದ್ದಾರೆ.

ಮುದ್ದಿನ ಮಗ ಜೂನಿಯರ್ ಚಿರುಗೆ 10 ತಿಂಗಳು ತುಂಬಿದ ಸಂಭ್ರಮದಲ್ಲಿ ನಟಿ ಮೇಘನಾ ರಾಜ್ ಇದ್ದಾರೆ. ಈ ಸಂತೋಷದ ವಿಚಾರವನ್ನು ಇನ್‍ಸ್ಟಾಗ್ರಾಮಲ್ಲಿ ಹಂಚಿಕೊಂಡಿದ್ದಾರೆ. ಅಮ್ಮ, ಮಗನ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ಅಮ್ಮ ಮಗ ಇಬ್ಬರು ಒಂದೇ ರೀತಿ ಮ್ಯಾಚಿಂಗ್ ಡ್ರೆಸ್ ಧರಿಸಿ ಮುದ್ದಾಗಿ ಪೋಸ್ ಕೊಟ್ಟಿದ್ದಾರೆ. ಮೇಘನಾ ಮತ್ತು ಜೂನಿಯರ್ ಚಿರು ಕಾಣಿಸಿಕೊಂಡಿರುವ ವೀಡಿಯೋದಲ್ಲಿ ಜೂನಿಯರ್ ಚಿರುನ ಹೊಸ ಗೆಳಯನಿರುವುದು ವಿಶೇಷವಾಗಿದೆ.

 

View this post on Instagram

 

A post shared by Meghana Raj Sarja (@megsraj)

ಜೂನಿಯರ್ ಚಿರುಗೆ ಇಷ್ಟವಾಗಿರೋ ಹೊಸ ಸ್ನೇಹಿತ ಚ್ಯಾಂಪ್ ದಿ ಚಿಂಪ್ ಹೆಸರಿನ ಮುದ್ದಾದ ಕೋತಿ ಗೊಂಬೆಯಾಗಿದೆ. ಜೂನಿರ್ ಚಿರುಗೆ ಈ ಗೊಂಬೆ ಈಗ ತುಂಬಾ ಇಷ್ಟ. ಒಳ್ಳೆಯ ಗೆಳಯನಾಗಿದ್ದಾನೆ ಎಂದು ಮೇಘನಾ ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡು ವೀಡಿಯೋ ಶೇರ್ ಮಾಡಿದ್ದಾರೆ. ಅಮ್ಮ, ಮಗನ ಈ ಮುದ್ದಾದ ವೀಡಿಯೋವನ್ನು ನೋಡಿ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಯಾವಾಗಲೂ ನಗುತ್ತೀರಿ, ನೀವು ಪ್ರತಿಯೊಬ್ಬರಿಗೂ ಮಾದರಿಯಾಗಿದ್ದೀರ ನಾವು ನಿಮ್ಮನ್ನು ತುಂಬಾ ಪ್ರೀತಿಸುತ್ತೇವೆ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ತೂಕ ಕಳೆದುಕೊಂಡ ರಣಧೀರ ನಟಿ

 

View this post on Instagram

 

A post shared by Meghana Raj Sarja (@megsraj)

ಈ ಹಿಂದೆ ಮೇಘನಾ ಅಭಿಮಾನಿಗಳಿಗಾಗಿ ಮಂಡೇ ಮಾನಿರ್ಂಗ್ ಎನ್ನುವ ಫೆÇೀಟೋ ಶೇರ್ ಮಾಡಿದ್ದು ಇದರಲ್ಲಿ ಮಗನ ಜೊತೆ ಮೇಘನಾ ನಗುತ್ತಿದ್ದರು. ಅಮ್ಮನ ನೋಡಿ ಕ್ಯೂಟ್ ಆಗಿ ಸ್ಮೈಲ್ ಕೊಟ್ಟ ಜೂ. ಚಿರುವನ್ನು ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದರು. ಮೇಘನಾ – ಚಿರು ಮಗುವಿಗೆ ನಾಮಕರಣ ಮಾಡದ ಹಿನ್ನೆಲೆಯಲ್ಲಿ ಎಲ್ಲರೂ ಜೂ.ಚಿರು ಎಂದೇ ಕಂದನನ್ನು ಕರೆಯುತ್ತಿದ್ದಾರೆ. ಮುದ್ದಾದ ಹಾಲುಗಲ್ಲದ ಕಂದನ ಮುಗುಳುನಗೆ ನೆಟ್ಟಿಗರ ಮನಸು ಗೆದ್ದಿದ್ದು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *