83 ತಾಲೂಕುಗಳು ಪ್ರವಾಹಪೀಡಿತ ಎಂದು ಘೋಷಣೆ: ಆರ್.ಅಶೋಕ್

Public TV
2 Min Read
r ashok

ಬೆಂಗಳೂರು: ಈ ಹಿಂದೆ 61 ತಾಲೂಕುಗಳು ಪ್ರವಾಹ ಪೀಡಿತವೆಂದು ಘೋಷಣೆ ಮಾಡಲಾಗಿತ್ತು. ಮಳೆ ಹೆಚ್ಚಾಗಿ ಇದೀಗ ಮತ್ತೆ ಹಾನಿಯಾಗಿದೆ. ಹೀಗಾಗಿ ಹೊಸದಾಗಿ 22, ಒಟ್ಟು 83 ತಾಲೂಕುಗಳನ್ನು ಪ್ರವಾಹ ಪೀಡಿತವೆಂದು ಘೋಷಣೆ ಮಾಡಿದ್ದೇವೆ ಎಂದು ಕಂದಾಯ ಸಚಿವ ಆರ್.ಅಶೊಕ್ ತಿಳಿಸಿದ್ದಾರೆ.

hvr rescue 2 1

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ, ಚಿಕ್ಕಮಗಳೂರು, ಕಡೂರು, ತರಿಕೆರೆ, ಸೂಪ, ಬಬಲೇಶ್ವರ, ಕೊಲ್ಹಾರ, ಮುದ್ದೆಬಿಹಾಳ, ಮೂಡಿಗೆರೆ ಹಾಗೂ ಹೊಸನಗರಗಳನ್ನ ಪ್ರವಾಹ ಪೀಡಿತವೆಂದು ಘೋಷಿದ್ದೇವೆ. ಪ್ರವಾಹ ಪೀಡಿತ ಸ್ಥಳಗಳಿಗೆ ಒಂದೆರಡು ಬಾರಿ ನಾನು ಭೇಟಿ ನೀಡಿದ್ದೇನೆ. ಪ್ರವಾಹ ಸಂದರ್ಭಗಳಲ್ಲಿ ಮುನ್ನೆಚ್ಚರಿಕೆ ತೆಗೆದುಕೊಂಡಿದ್ದೇವೆ. ಸಿಡಿಲಿನಿಂದ ಹಲವರು ಸಾಯುತ್ತಿದ್ದಾರೆ. ಅದರ ಎಚ್ಚರಿಕೆ ಬಗ್ಗೆ ಯೋಜನೆ ಇದೆ. ಒಂದೂವರೆ ಕಿ.ಮೀ.ವರೆಗೆ ಕೇಳಿಸುವಷ್ಟು ಅಲರ್ಟ್ ಮಾಡಲಾಗುತ್ತದೆ. ಮೈಕ್ ಸಿಸ್ಟಂ ಮೂಲಕ ಅಲರ್ಟ್ ಮಾಡಲಾಗುತ್ತದೆ. ಗ್ರಾಮಪಂಚಾಯಿತಿಗಳಲ್ಲಿ ಅಲರ್ಟ್ ಆಗಲಿದೆ. ಶೀಘ್ರವೇ ಈ ಹೊಸ ಸಿಸ್ಟಂನ್ನು ಅಳವಡಿಕೆ ಮಾಡುತ್ತೇವೆ ಎಂದು ವಿವರಿಸಿದರು. ಇದನ್ನೂ ಓದಿ: ರೈತನ ಮಗಳನ್ನು ಗುರುತಿಸಿ ಪ್ರಧಾನಿ ಮೋದಿ ಕೃಷಿ ಖಾತೆ ನೀಡಿದ್ದಾರೆ: ಶೋಭಾ ಕರಂದ್ಲಾಜೆ

ckd rain flood 2 1

ಚಂಡಮಾರುತದ ಅಬ್ಬರದ ಬಗ್ಗೆಯೂ ಅಲರ್ಟ್ ಮಾಡಲಾಗುತ್ತದೆ. ಇದನ್ನು ಕರಾವಳಿ ಭಾಗದ 40 ಕಡೆ ಅನುಷ್ಠಾನ ಮಾಡುತ್ತೇವೆ. ಅಲಾರಾಂ ಸಿಸ್ಟಂಗಳನ್ನ ಮಾಡುತ್ತೇವೆ. ಕೇಂದ್ರ ಸರ್ಕಾರದಿಂದ ಇದಕ್ಕೆ ಹಣ ಬರಲಿದೆ. ಒಂದೊಂದು ಸಿಸ್ಟಂಗೆ 12 ಕೋಟಿ ಖರ್ಚಾಗುತ್ತದೆ. ಆರೇಳು ಕಿ.ಮೀ.ವರೆಗೆ ಇದು ಸೈರನ್ ಮಾಡಲಿದೆ. ಚಂಡಮಾರುತಗಳ ಸುಳಿವನ್ನು ನೀಡಲಿದೆ. ಇದು ಕರಾವಳಿ ಭಾಗದ ಜನರಿಗೆ, ಮೀನುಗಾರರಿಗೆ ಇದು ಹೆಚ್ಚು ಉಪಯೋಗವಾಗಲಿದೆ ಎಂದು ತಿಳಿಸಿದರು.

kwr rain 2 1 1

ಕಡೆಗೂ ಮೂಡಿಗೆರೆಯನ್ನು ನೆರೆ ಪೀಡಿತ ಪ್ರದೇಶದ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಏಕಾಂಗಿಯಾಗಿ ವಿಧಾನಸೌಧದಲ್ಲಿ ಪ್ರತಿಭಟನೆ ಮಾಡಿದ್ದರು. ಈ ವೇಳೆ ಸರ್ಕಾರ ಭರವಸೆ ನೀಡಿತ್ತು.

ckd rain flood 2 6

ಬೆಂಗಳೂರಿನಲ್ಲೂ 50ಕ್ಕೂ ಹೆಚ್ಚು ರಸ್ತೆಗಳಲ್ಲಿ ನೀರು ನಿಲ್ಲುತ್ತಿದೆ. ಅಧಿಕಾರಿಗಳಿಗೆ ಇದರ ಬಗ್ಗೆ ಸೂಚಿಸಿದ್ದೇನೆ. ನೀರು ನಿಲ್ಲುವ ಡ್ರೈನ್ ಬಗ್ಗೆ ಸೂಚಿಸಿದ್ದೇನೆ. ಜೊತೆಗೆ ಸಮಸ್ಯೆ ಪರಿಹಾರಕ್ಕೂ ಸೂಚಿಸಿದ್ದೇನೆ, ನೀರು ನಿಲ್ಲುವ ಜಾಗಗಳ ಬಗ್ಗೆ ಕೇಳಿದ್ದೇನೆ. ತುರ್ತು ಕಾಮಗಾರಿ ಮುಗಿಸುವ ಬಗ್ಗೆ ಸೂಚಿಸಲಾಗಿದೆ. ಬೆಂಗಳೂರಿನಲ್ಲಿ ಕಾಮಗಾರಿ ನಿರಂತರವಾಗಿ ನಡೆಯುತ್ತದೆ. ಮಿತಿಯೊಳಗೆ ಕಾಮಗಾರಿ ಮಾಡುತ್ತಿಲ್ಲ. ನಿರಂತರವಾಗಿ ಕೆಲಸ ನಡೆಯುತ್ತಲೇ ಇರುತ್ತದೆ ಎಂದರು. ಕಮರ್ಷಿಯಲ್ ಸ್ಟ್ರೀಟ್ ನಲ್ಲಿ ಕಳಪೆ ಕಾಮಗಾರಿ ನಡೆದಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಕಲರಿಂಗ್ ಮಾಡುವುದು ಸರಿಯಾಗಿಲ್ಲ. ಕಳಪೆ ಕಾಮಗಾರಿ ಬಗ್ಗೆ ಕ್ರಮ ಕೈಗೊಳ್ಳತ್ತೇನೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *