ಮಹೀಂದ್ರಾ ಎಕ್ಸ್‌ಯುವಿ700 ಬಿಡುಗಡೆ- ಬೆಲೆ ಎಷ್ಟು? ವಿಶೇಷತೆ ಏನಿದೆ?

Public TV
3 Min Read
suv 7

ಮಹೀಂದ್ರಾ ಕಂಪನಿಯು ತನ್ನ ಬಹುನೀರಿಕ್ಷಿತ ಎಕ್ಸ್ ಯುವಿ700 ಎಸ್‍ಯುವಿ ಮಾದರಿಯನ್ನು ಅನಾವರಣಗೊಳಿಸಿದೆ. ಎಕ್ಸ್ ಯುವಿ700 ಹೊಸ ಮಹಿಂದ್ರಾ ಲೋಗೋ ಹೊತ್ತು ಬರಲಿದೆ. ಈ ಕಾರಿನ ಬೆಲೆ ರೂ. 11.99ಲಕ್ಷದಿಂದ ಪ್ರಾರಂಭವಾಗುತ್ತದೆ.

SUV 700

ಹೊಸ ಎಕ್ಸ್ ಯುವಿ700 ಕಾರು ವಿನೂತನ ತಂತ್ರಜ್ಞಾನ, ಅತ್ಯಾಕರ್ಷಕ ವಿನ್ಯಾಸ ಹೊಂದಿದ್ದು ಮಧ್ಯಮ ಕ್ರಮಾಂಕದ ಎಸ್‍ಯುವಿ ಮಾದರಿಗಳಲ್ಲೇ ಅತಿ ಹೆಚ್ಚು ಪ್ರೀಮಿಯಂ ಫೀಚರ್ಸ್‍ಗಳನ್ನು ಹೊಂದಿದೆ. ಮಹೀಂದ್ರಾ ಕಂಪನಿಯು ಕೇವಲ 5 ಸೀಟ್ ಕಾರಿನ ಅವತರಣಿಕೆಗಳನ್ನು ಮಾತ್ರ ಅನಾವರಣಗೊಳಿಸಿದ್ದು, ಅಕ್ಟೋಬರ್ ತಿಂಗಳಲ್ಲಿ ಉಳಿದ ಎಲ್ಲ ಮಾದರಿಗಳನ್ನು ಪರಿಚಯಿಸಲಿದೆ.

suv 700 3

ಹೊಸ ಎಕ್ಸ್ ಯುವಿ700 ಎಸ್‍ಯುವಿ ಎಂಎಕ್ಸ್ ಸೀರಿಸ್ ಮತ್ತು ಅಡ್ರಿನೊಎಕ್ಸ್ ಸೀರಿಸ್ ಮಾದರಿಗಳಲ್ಲಿ ಲಭ್ಯವಿದೆ. ಎಂಎಕ್ಸ್ ಸೀರಿಸ್‍ನ ಪೆಟ್ರೋಲ್ ಅವತರಣಿಕೆಯ ಬೆಲೆ ರೂ.1..99 ಲಕ್ಷ ಮತ್ತು ಡೀಸೆಲ್ ಅವತರಣಿಕೆಯ ಬೆಲೆ ರೂ. 12.49 ಲಕ್ಷ ಇದೆ. ಅಡ್ರಿನೊಎಕ್ಸ್3 ಪೆಟ್ರೋಲ್ ಅವತರಣಿಕೆಯ ಬೆಲೆ ರೂ. 13.99 ಲಕ್ಷ ಮತ್ತು ಅಡ್ರಿನೊಎಕ್ಸ್5 ಪೆಟ್ರೋಲ್ ಕಾರಿನ ಬೆಲೆ ರೂ. 14.99ಲಕ್ಷ ಇದೆ. ಇದನ್ನೂ ಓದಿ: ಶಾಲೆ ಆರಂಭಕ್ಕೆ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ

SUV 700 1

ಹೊಸ ಎಕ್ಸ್ ಯುವಿ700 2.0-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 2.2-ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. 2.0-ಲೀಟರ್ ಎಂಸ್ಟಾಲಿಯನ್ ಪೆಟ್ರೋಲ್ ಮಾದರಿಯು 198-ಬಿಎಚ್‍ಪಿ, 300-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದರೆ, 2.2-ಲೀಟರ್ ಎಂಹಾಕ್ ಡೀಸೆಲ್ ಮಾದರಿಯು 183-ಬಿಎಚ್‍ಪಿ ಮತ್ತು 420-ಎನ್ಎಂ ಟಾರ್ಕ್ (450-ಎನ್ಎಂ ಟಾರ್ಕ್ ಎಟಿ) ಉತ್ಪಾದನೆ ಮಾಡುತ್ತದೆ.

suv 700 6

ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳಲ್ಲೂ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಆಯ್ಕೆಗಳು ಲಭ್ಯವಿದ್ದು, ಹೈ ಎಂಡ್ ಮಾದರಿಗಳಲ್ಲಿ ಎಕ್ಸ್ ಯುವಿ700 4×4 ಆಲ್ ವ್ಹೀಲ್ ಡ್ರೈವ್ ಸಿಸ್ಟಂನೊಂದಿಗೆ ಲಭ್ಯವಿರಲಿದೆ. ಎಕ್ಸ್ ಯುವಿ700 ಕಾರಿನಲ್ಲಿ ಜಿಪ್, ಜಾಪ್, ಜೂಮ್ ಮತ್ತು ಕಸ್ಟಮ್ ಎನ್ನುವ ನಾಲ್ಕು ಡ್ರೈವ್ ಮೋಡ್‍ಗಳಿದ್ದು, ಚಾಲಕನ ಅವಶ್ಯಕತೆಗೆ ತಕ್ಕಂತೆ ಬದಲಿಸಕೊಳ್ಳಬಹುದಾಗಿದೆ. ಐಷಾರಾಮಿ ಕಾರುಗಳಲ್ಲಿ ಕಂಡುಬರುವ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ(ಎಡಿಎಎಸ್) ತಂತ್ರಜ್ಞಾನವನ್ನು ಕೂಡ ಈ ಕಾರಿನಲ್ಲಿ ಲಭ್ಯವಿದೆ. ಇದನ್ನೂ ಓದಿ: ಅಕ್ಟೋಬರ್‍ ನಲ್ಲಿ ಮಾರುಕಟ್ಟೆಗೆ ಬರಲಿದೆ ಮಹೀಂದ್ರಾ ಎಕ್ಸ್ ಯುವಿ 700

ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ(ಎಡಿಎಎಸ್) ಸ್ವಯಂಚಾಲಿತ ಬ್ರೇಕಿಂಗ್, ಲೇನ್ ನಿರ್ಗಮನ ಎಚ್ಚರಿಕೆ, ಹೈ ಬೀಮ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಸ್ಮಾರ್ಟ್ ಪೈಲಟ್ ಅಸಿಸ್ಟ್, ಟ್ರಾಫಿಕ್ ಚಿಹ್ನೆಗಳ ಗುರುತಿಸುವಿಕೆ ಮತ್ತು ಡ್ರೈವರ್ ಅರೆನಿದ್ರಾವಸ್ಥೆ ಪತ್ತೆ ಮಾಡುವ ತಂತ್ರಜ್ಞಾನವನ್ನು ಹೊಂದಿದೆ. 7-ಏರ್‍ಬ್ಯಾಗ್, ಎಬಿಎಸ್ ಜೊತೆಗೆ ಇಬಿಡಿ, ಎಲೆಕ್ಟ್ರಾನಿಕ್ ಲಾಕಿಂಗ್, ಟ್ರಾಕ್ಷನ್ ಕಂಟ್ರೋಲ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಮುಂತಾದ ಸುರಕ್ಷತಾ ವೈಶಿಷ್ಟ್ಯಗಳನ್ನು ಎಕ್ಸ್ ಯುವಿ700 ಕಾರು ಹೊಂದಿದೆ.

suv 700 4

ಎಕ್ಸ್ ಯುವಿ700 ಕಾರು ಎಲ್ಇಡಿ ಹೆಡ್‍ಲ್ಯಾಂಪ್ಸ್, ಸಿ ಆಕಾರದಲ್ಲಿರುವ ಎಲ್ಇಡಿ ಡಿಆರ್‍ಎಲ್ಎಸ್, ಸಿಲ್ವರ್ ಕೋಟಿಂಗ್ ಹೊಂದಿರುವ ಫಾಕ್ಸ್ ಸ್ಕಿಡ್ ಪ್ಲೇಟ್, 18-ಇಂಚಿನ ಡ್ಯುಯಲ್ ಟೋನ್ ಮಲ್ಟಿ ಸ್ಪೋಕ್ ಅಲಾಯ್ ವ್ಹೀಲ್, ವಿನೂತನ ವಿನ್ಯಾಸದ ಬಂಪರ್, ರೂಫ್ ರೈಲ್ಸ್, ಶಾರ್ಕ್ ಫಿನ್ ಆಂಟೆನಾ, ರೂಫ್ ಸ್ಪಾಯ್ಲರ್ ಪಡೆದುಕೊಂಡಿದೆ.

suv 700 5

10.25 ಇಂಚಿನ ಡಿಜಿಟಲ್ ಮತ್ತು ಇನ್ಪೋಟೈನ್‍ಮೆಂಟ್ ಟಚ್‍ಸ್ಕ್ರೀನ್ ಡಿಸ್‍ಪ್ಲೇ, ಆಂಡ್ರಾಯಿಡ್ ಆಟೋ ಮತ್ತು ಆಟೋ ಕಾರ್‍ಪ್ಲೇ, ಅಮೆಜಾನ್ ಅಲೆಕ್ಸಾ, 60 ತಾಂತ್ರಿಕ ಸೌಲಭ್ಯಗಳನ್ನು ನಿಯಂತ್ರಿಸಬಹುದಾದ ಕಾರ್ ಕನೆಕ್ಟ್ ಟೆಕ್ನಾಲಜಿ, ವಾಯ್ಸ್ ಅಸಿಸ್ಟೆನ್ಸ್, ಆ್ಯಂಬಿಯೆಂಟ್ ಲೈಟಿಂಗ್ಸ್, ಡ್ಯುಯಲ್ ಜೋನ್ ಕ್ಲೈಮೇಟ್ ಕಂಟ್ರೋಲ್, 2 ಮತ್ತು 3ನೇ ಸಾಲಿನಲ್ಲಿ ಎಸಿ ವೆಂಟ್ಸ್, ಏರ್ ಪ್ಯೂರಿಫ್ಲೈರ್ ಮತ್ತು ಸ್ಕೈ ರೂಫ್ ಸೌಲಭ್ಯಗಳನ್ನು ಎಕ್ಸ್‍ಯುವಿ700 ಕಾರು ಪಡೆದುಕೊಂಡಿದೆ. ಇದನ್ನೂ ಓದಿ: ಪ್ರತಿ 2 ನಿಮಿಷಕ್ಕೆ 1 ಕಿಯಾ ಸೋನೆಟ್‌ ಕಾರು ಮಾರಾಟ

SUV 700 2

ಎಕ್ಸ್ ಯುವಿ700 ಕಾರು ಟಾಟಾ ಸಫಾರಿ, ಹುಂಡೈ ಅಲ್ಕಾಜರ್, ಎಂಜಿ ಹೆಕ್ಟರ್ ಪ್ಲಸ್ ಮಾದರಿಗಳಿಗೆ ಪೈಪೋಟಿ ನೀಡಲಿದ್ದು, ಅಕ್ಟೋಬರ್ ಮೊದಲ ವಾರದಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರಿನ ಖರೀದಿದಾಗಿ ಕಂಪನಿಯು ಈಗಾಗಲೇ ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಿಸಿದೆ.

Share This Article
Leave a Comment

Leave a Reply

Your email address will not be published. Required fields are marked *