ದಕ್ಷಿಣ ಕನ್ನಡದ ಕಬಕದಲ್ಲಿ ಸ್ವಾತಂತ್ರ್ಯ ರಥಕ್ಕೆ ಎಸ್‍ಡಿಪಿಐ ಕಾರ್ಯಕರ್ತರಿಂದ ತಡೆ: ಪ್ರಕರಣ ದಾಖಲು

Public TV
1 Min Read
mng

ಮಂಗಳೂರು: ಇಂದು ಪ್ರತಿ ಗ್ರಾಮ ಪಂಚಾಯತ್ ಸೇರಿದಂತೆ ದೇಶದೆಲ್ಲೆಡೆ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗಿದೆ. ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಬಕ ಗ್ರಾಮ ಪಂಚಾಯತ್ ನಲ್ಲಿಯೂ ಸ್ವಾತಂತ್ರ್ಯ ದಿನಾಚರಣೆ ನಡೆಸಲಾಗುತಿತ್ತು. ಆದರೆ ಈ ಸಂದರ್ಭ ಎಸ್‍ಡಿಪಿಐ ಕಾರ್ಯಕರ್ತರು ಸ್ವಾತಂತ್ರ್ಯ ರಥಕ್ಕೆ ತಡೆಯೊಡ್ಡಿ ಕಿರಿಕ್ ಮಾಡಿದ್ದಾರೆ.

ratha

ಪಂಚಾಯತ್ ವ್ಯಾಪ್ತಿಯಲ್ಲಿ ಸಂಚರಿಸಲು ರೆಡಿಯಾಗಿದ್ದ ಸ್ವಾತಂತ್ರ್ಯ ರಥದಲ್ಲಿ ವೀರ ಸಾವರ್ಕರ್ ಫೋಟೋ ಅಳವಡಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ತಡೆಯೊಡ್ಡಿದ್ದಾರೆ. ಸಾವರ್ಕರ್ ಫೋಟೋ ತೆಗೆದು ಟಿಪ್ಪು ಸುಲ್ತಾನ್ ಫೋಟೋ ಹಾಕುವಂತೆ ಒತ್ತಡ ಹಾಕಿ ಪಂಚಾಯತ್ ವಿರುದ್ಧ ದಿಕ್ಕಾರ ಕೂಗಿದ್ದಾರೆ. ಸ್ಥಳದಲ್ಲಿ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿ ಪರಸ್ಪರ ಕೈ, ಕೈ ಮಿಲಾಯಿಸುವ ಹಂತಕ್ಕೆ ತಲುಪಿದಾಗ ಪುತ್ತೂರು ಪೊಲೀಸರು ಬಂದು ಎಸ್‍ಡಿಪಿಐ ಕಾರ್ಯಕರ್ತರನ್ನು ಚದುರಿಸಿದ್ದಾರೆ.

matanduru

ಪ್ರಾರಂಭದಲ್ಲಿ ಪ್ರತಿಭಟನಕಾರರಿಗೆ ಪಂಚಾಯತ್ ಅಧ್ಯಕ್ಷರು, ಪಿಡಿಓ ತಿಳಿ ಹೇಳುವ ಪ್ರಯತ್ನ ನಡೆಸಿದ್ದಾರೆ. ಆದರೆ ಇವರ ಮಾತನ್ನು ಕೇಳದೆ ಎಸ್‍ಡಿಪಿಐ ಕಾರ್ಯಕರ್ತರು ವಾಗ್ವಾದ ಮುಂದುವರಿಸಿದ್ದಾರೆ. ಘಟನಾ ಸ್ಥಳಕ್ಕೆ ಪುತ್ತೂರು ಶಾಸಕ ಸಂಜೀವ ಮಠಂದೂರು ಭೇಟಿ ನೀಡಿ ಘಟನೆಯ ಬಗ್ಗೆ ತಿಳಿದುಕೊಂಡಿದ್ದಾರೆ. ತಕ್ಷಣ ಕೇಸು ದಾಖಲಿಸಿ ಆರೋಪಿಗಳ ಬಂಧಿಸುವಂತೆ ಪೋಲೀಸರಲ್ಲಿ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಸಮಾಜಘಾತುಕ ಕೃತ್ಯದ ಹಿಂದೆ ಯಾರೇ ಇದ್ರು ಅವರನ್ನು ಬಿಡುವ ಪ್ರಶ್ನೆಯೇ ಇಲ್ಲ: ಕಟೀಲ್

ratha 1

ಈ ಮತೀಯವಾದಿ ದೇಶದ್ರೋಹಿಗಳನ್ನು ಬಂಧಿಸಿ ಗಡಿಪಾರು ಮಾಡಬೇಕು. ಈ ಮತೀಯವಾದಿಗಳ ಹಿಂದೆ ಭಟ್ಕಳ, ಕಾಸರಗೋಡಿನ ಮತೀಯ ಸಂಘಟನೆಗಳ ಪಿತೂರಿ ಇದೆ. ಕಬಕ ಕಾಶ್ಮೀರ ಆಗೋದನ್ನು ಸಹಿಸಲ್ಲ, ಮಟ್ಟ ಹಾಕುವ ಕೆಲಸ ಆಗಬೇಕು. ಯಾವುದೇ ಸಂಘಟನೆ ಆಗಿದ್ದರೂ ಅವರನ್ನು ಬಂಧಿಸಿ ಸಂಘಟನೆ ನಿಷೇಧಿಸಬೇಕೆಂದು ಸಂಜೀವ ಮಠಂದೂರು ಒತ್ತಾಯಿಸಿದ್ದಾರೆ. ಸರ್ಕಾರದ ಸೂಚನೆ ಮೇರೆಗೆ ದೇಶಭಕ್ತರ ಫೋಟೋಗಳನ್ನು ಪಂಚಾಯತ್ ಅಳವಡಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *