ಅಂತ್ಯಕ್ರಿಯೆಗೆ ಹೋದ 40 ಮಂದಿಗೆ ಸೋಂಕು – ಇಡೀ ಗ್ರಾಮವೇ ಸೀಲ್‍ಡೌನ್

Public TV
2 Min Read
Mandya Corona 3 copy

– ಅಂತಿಮ ದರ್ಶನದಲ್ಲಿ 2 ಸಾವಿರಕ್ಕೂ ಹೆಚ್ಚು ಜನ ಭಾಗಿ

ಮಂಡ್ಯ: ಕೊರೊನಾದ ಮೊದಲನೇ ಹಾಗೂ ಎರಡನೇ ಎರಡನೇ ಭೀಕರತೆ ಮುಗಿತು ಎನ್ನುವಷ್ಟರಲ್ಲಿ ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಕೊರೊನಾದ ಮೂರನೇ ಅಲೆಯ ತೀವ್ರತೆ ಆರಂಭವಾದಂತೆ ಕಾಣುತ್ತಿದೆ. ಮಂಡ್ಯ ಜಿಲ್ಲೆಯ ಗ್ರಾಮವೊಂದರಲ್ಲಿ ಅಂತ್ಯಕ್ರಿಯೆಗೆ ತೆರಳಿದ್ದ 40 ಕ್ಕೂ ಹೆಚ್ಚು ಮಂದಿಗೆ ಕೊರೊನಾ ವಕ್ಕರಿಸಿದ್ದು, ಇದರಿಂದ ಮಂಡ್ಯದಲ್ಲಿ ಮೂರನೇ ಅಲೆಯ ಆತಂಕ ಮನೆ ಮಾಡುತ್ತಿದೆ.

Mandya Corona 2

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ತಿಮ್ಮನಕೊಪ್ಪಲು ಗ್ರಾಮದಲ್ಲಿ ಇದೀಗ ಕೊರೊನಾ ಸ್ಪೋಟಗೊಂಡಿದೆ. ಈ ಗ್ರಾಮದಲ್ಲಿ ಕಳೆದ ಹತ್ತು ದಿನದ ಹಿಂದೆ ವ್ಯಕ್ತಿಯೊಬ್ಬರು ಸಾವನಪ್ಪಿದ್ರು. ಸರ್ಕಾರ ಶವಸಂಸ್ಕಾರಕ್ಕೆ 30 ಮಂದಿ ಮಾತ್ರ ಪಾಲ್ಗೊಳ್ಳಬೇಕೆಂದು ಆದೇಶ ಹೊರಡಿಸಿದ್ದರೂ, ಸಹ ಇಲ್ಲಿ ಆ ದಿನ ಎರಡು ಸಾವಿರ ಮಂದಿ ಪಾಲ್ಗೊಂಡಿದ್ದರು.

Mandya Corona 8

ತಿಮ್ಮನಕೊಪ್ಪಲು ಸೇರಿದಂತೆ ಹಲವು ಭಾಗಗಳಿಂದ ಈ ಶವಸಂಸ್ಕಾರಕ್ಕೆ ನೂರಾರು ಜನರು ಆಗಮಿಸಿದ್ದರು. ಅದಾದ ಬಳಿಕ ಗ್ರಾಮದ ಕೆಲವು ಜನರಲ್ಲಿ ಕೊರೊನಾ ರೋಗ ಲಕ್ಷಣಗಳು ಕಂಡುಬಂದಿದ್ದು, ಆರೋಗ್ಯ ಇಲಾಖೆ ಗ್ರಾಮದ ಜನರಿಗೆ ಆರ್ ಟಿಪಿಸಿಆರ್ ಟೆಸ್ಟ್ ಮಾಡಲು ಮುಂದಾಗುತ್ತದೆ. ಈ ವೇಳೆ ಒಂದೇ ದಿನ 9 ಮಂದಿಗೆ ಪಾಸಿಟಿವ್ ಧೃಡಪಡುತ್ತದೆ. ಇದೀಗ 10 ದಿನಗಳ ಅಂತರದಲ್ಲಿ 40ಕ್ಕೂ ಅಧಿಕ ಮಂದಿಗೆ ಕೊರೊನಾ ಧೃಡಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ. ತಿಮ್ಮನಕೊಪ್ಪಲು ಗ್ರಾಮದಲ್ಲಿ 160 ಮನೆಗಳಿದ್ದು, 600 ಕ್ಕೂ ಅಧಿಕ ಜನಸಂಖ್ಯೆ ಇದ್ದು, ಇದೀಗ ಗ್ರಾಮದ ಎಲ್ಲಾ ಜನರಿಗೆ ಕೊರೊನಾದ ಆತಂಕ ಎಡೆ ಮಾಡಿದೆ.

Mandya Corona 1

ಗ್ರಾಮದಲ್ಲಿ ಕೊರೊನಾ ಸ್ಪೋಟಗೊಂಡಿರುವುದು ಜಿಲ್ಲಾಡಳಿತಕ್ಕೆ, ಆರೋಗ್ಯ ಇಲಾಖೆಗೆ ತಲೆನೋವು ತಂದಿದ್ದು, ಜಿಲ್ಲೆಗೆ ಮೂರನೇ ಅಲೆ ಎಂಟ್ರಿ ಕೊಟ್ಟೆಬಿಡ್ತಾ ಎಂಬ ಅನುಮಾನ ಮೂಡಿದೆ. ಹೀಗಾಗಿ ಸದ್ಯ ತಿಮ್ಮನಕೊಪ್ಪಲು ಗ್ರಾಮವನ್ನು ಸೀಲ್ ಡೌನ್ ಮಾಡಿದ್ದು, ಗ್ರಾಮಕ್ಕೆ ಹೊರಗಿನವರು ಬರದಂತೆ, ಗ್ರಾಮದಿಂದ ಯಾರು ಹೊರಹೋಗದಂತೆ ಕ್ರಮವಹಿಸಲಾಗಿದೆ. ಗ್ರಾಮದಲ್ಲೇ ಆರೋಗ್ಯ ಇಲಾಖೆ ಸಿಬ್ಬಂದಿ ಪ್ರತಿಯೊಬ್ಬರಿಗೂ ಆರ್ ಟಿಪಿಸಿಆರ್ ಟೆಸ್ಟ್ ಮಾಡಿಸುತ್ತಿದೆ. ಮತ್ತಷ್ಟು ಪಾಸಿಟಿವ್ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದ್ದು, ಸದ್ಯ ಪಾಸಿಟಿವ್ ಧೃಢವಾಗಿರುವ ಎಲ್ಲರಿಗೂ ಪಾಂಡವಪುರ ಸೇರಿದಂತೆ ವಿವಿಧ ಕೋವಿಡ್ ಕೇರ್ ಸೆಂಟರ್ ಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಇಂದು 1,431 ಜನಕ್ಕೆ ಕೊರೊನಾ ಸೋಂಕು – ರಾಜ್ಯದಲ್ಲಿ 22,497 ಸಕ್ರಿಯ ಪ್ರಕರಣ

 

Share This Article
Leave a Comment

Leave a Reply

Your email address will not be published. Required fields are marked *